ಹೆಬ್ಬಾಲೆ, ಮೇ 13: ದೊಡ್ಡ ಅಳುವಾರ ಗ್ರಾಮದ ಶ್ರೀ ದೊಡ್ಡಮ್ಮ ಮತ್ತು ಶ್ರೀ ಬಸವೇಶ್ವರ ದೇವಾಲಯ ಸಮಿತಿಯ ವತಿಯಿಂದ ದೊಡ್ಡಮ್ಮ ತಾಯಿಯ ವಾರ್ಷಿಕ ಪೂಜೋತ್ಸವ ತಾ. 17 ರಂದು ನಡೆಯಲಿದೆ.

ಅಂದು ಬೆಳಿಗ್ಗೆ 6 ಗಂಟೆಯಿಂದ ಗಣಪತಿ ಪೂಜೆ, ಗಣಹೋಮ, ನವಗ್ರಹ ಹೋಮ, ದುರ್ಗಾಪೂಜೆ ನಡೆಯಲಿದ್ದು, ನಂತರ ಕಲಶವನ್ನು ತರಲಾಗುವದು. ಮಹಾ ಮಂಗಳಾರತಿಯ ನಂತರ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಪೂಜೋತ್ಸವ ಅಂಗವಾಗಿ ಸಾರ್ವಜನಿಕರಿಗೆ 100 ಮೀ. ಓಟ, ಮಹಿಳೆಯರಿಗೆ 200 ಮೀ. ಓಟ, ಪುರುಷರಿಗೆ ನಿಧಾನ ಬೈಕ್ ಚಾಲನೆ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್.ಡಿ. ಶ್ರೀನಿವಾಸ್ ತಿಳಿಸಿದ್ದಾರೆ.