ಮಡಿಕೇರಿ, ಜು. ೬: ಜಿಲ್ಲೆಯಲ್ಲಿ ಮಳೆ ಮುಂದುವರಿಯುತ್ತಿದ್ದು, ಎಲ್ಲೆಡೆ ಒಂದಷ್ಟು ಬಿರುಸು ಮಳೆಯಾಗುತ್ತಿದೆ. ಮಳೆಯೊಂದಿಗೆ ಪ್ರಸ್ತುತ ತೀರಾ ಚಳಿಯ ಅನುಭವವೂ ಆಗುತ್ತಿದ್ದು, ಚಳಿ - ಮಳೆಗೆ ಹೆಸರಾದ ಮಂಜಿನ ನಗರಿ ಮಡಿಕೇರಿಯಲ್ಲಂತೂ ಈ ಸನ್ನಿವೇಶ ಹೆಚ್ಚಿದೆ.

ನಿನ್ನೆಯಿಂದ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆ ಒಂದಷ್ಟು ಹೆಚ್ಚಾದಂತಿದ್ದು, ಸಣ್ಣ ಪ್ರಮಾಣದಲ್ಲಿ ಗಾಳಿಯೂ ಕಂಡು ಬರುತ್ತಿದೆ. ಭಾನುವಾರದಂದು ಮಡಿಕೇರಿಯಲ್ಲಿ ಜನರ ಓಡಾಟವೂ ವಿರಳವಾಗಿತ್ತು. ಜಿಲ್ಲೆಯಲ್ಲಿ ಹಲವೆಡೆಗಳಲ್ಲಿ ಇದೀಗ ಸುರಿಯುತ್ತಿರುವ ಮಳೆಯಿಂದಾಗಿ ಒಂದೆರಡು ಕಡೆಗಳಲ್ಲಿ ಮನೆಗಳಿಗೆ ಜಖಂ ಆಗಿರುವ ಕುರಿತೂ ವರದಿಯಾಗಿದೆ. ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೧.೨೩ ಇಂಚುಗಳಷ್ಟು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೨ ಇಂಚು, ವೀರಾಜಪೇಟೆ ೦.೪೮, ಪೊನ್ನಂಪೇಟೆ ೧.೪೩, ಸೋಮವಾರಪೇಟೆ ೧.೭೭, ಕುಶಾಲನಗರ ತಾಲೂಕಿನಲ್ಲಿ ೦.೪೭ ಇಂಚುಗಳಷ್ಟು ಮಳೆಯಾಗಿದೆ.

೪ಐದÀನೇ ಪುಟಕ್ಕೆ

(ಮೊದಲ ಪುಟದಿಂದ)

ಕುಶಾಲನಗರ : ಇಂದು ಸುರಿದ ಮಳೆಗೆ ಕುಶಾಲನಗರ ಹೋಬಳಿ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಕೂಡ್ಲೂರು ಗ್ರಾಮದ ನಿವಾಸಿ ಲೋಕೇಶ್ ಎಂಬವರ ಮನೆಗೆ ಹೊಂದಿಕೊAಡAತೆ ಇರುವ ಕೊಟ್ಟಿಗೆಗೆ ಹಾನಿಯಾಗಿದೆ.

ಮದೆನಾಡು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಳಿಗುಂದ ಎಂಬಲ್ಲಿ ಮನೆಯ ಮೇಲೆ ಅಡಿಕೆ ಮರ ಬಿದ್ದು ಮನೆಗೆ ಹಾನಿಯಾಗಿದೆ.

ಇಂದು ಸಂಜೆ ಸುರಿದ ಧಾರಾಕಾರ ಮಳೆಗೆ ಗಾಳಿಗುಂದದ ಗಣೇಶ್ ಎಂಬವರ ಮನೆಯ ಮೇಲೆ ಅಡಿಕೆ ಮರ ಬಿದ್ದು ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ.