ವೀರಾಜಪೇಟೆ, ಜು. ೭: ಕಕ್ಕಬ್ಬೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿ ಗೋಪಾಲ ಪಿ.ಯು. ಅವರು ಮೂವತ್ತು ವರ್ಷಗಳ ಕಾಲ ಯೂನಿಯನ್ ಬ್ಯಾಂಕ್‌ನ ವಿವಿಧ ಶಾಖೆಗಳಲ್ಲಿ ಸೇವೆಯನ್ನು ಸಲ್ಲಿಸಿದ್ದರು. ನಿವೃತ್ತರಾದ ಗೋಪಾಲ ಅವರನ್ನು ಕಕ್ಕಬ್ಬೆ ಯೂನಿಯನ್ ಬ್ಯಾಂಕ್ ಶಾಖೆಯ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ನಡೆಸಿ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಬ್ಯಾಂಕ್ ವ್ಯವಸ್ಥಾಪಕÀ ಅಂತೋನಿ ಅವರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ಕೊಡಗು ವಲಯದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನೌಕರರ ಸಂಘದ ಕಾರ್ಯದರ್ಶಿ ಜೇಮ್ಸ್ ಮೆನೇಜಸ್, ಸಿಬ್ಬಂದಿಗಳಾದ ಸಜಿತ್, ಹೇಮಾವತಿ, ದೇಚಮ್ಮ ರವರು ಉಪಸ್ಥಿತರಿದ್ದರು.