ಮಡಿಕೇರಿ, ಜು. ೭: ನಗರದ ಶ್ರೀ ಕೋದಂಡ ರಾಮ ದೇವಾಲಯ ದಸರಾ ಉತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ಆನಂದ್ ಸುಬ್ರಮಣಿ, ಕಾರ್ಯಾಧ್ಯಕ್ಷರಾಗಿ ಮಿಥುನ್ ಶೆಟ್ಟಿ, ಗೌರವಾಧ್ಯಕ್ಷರಾಗಿ ಮಂಜುನಾಥ್, ಉಪಾಧ್ಯಕ್ಷರು ಗಳಾಗಿ ಗಿರೀಶ್ ಸುಬ್ರಮಣಿ, ಜೈಕುಮಾರ್, ಸಿದ್ಧಿಕ್, ಪ್ರದಾನ ಕಾರ್ಯದರ್ಶಿ ವಿಜು, ಖಜಾಂಚಿ ಶೇಖರ್, ಕಾರ್ಯದರ್ಶಿಗಳಾಗಿ ವಿಶ್ವ, ಪವನ್, ಸಹ ಕಾರ್ಯದರ್ಶಿಗಳಾಗಿ ತೇಜ, ಹರ್ಷ, ಸಂಘಟನಾ ಕಾರ್ಯದರ್ಶಿಗಳಾಗಿ ವಿಘ್ನೇಶ್, ನವೀನ್, ಅಲಂಕಾರ ಸಮಿತಿಗೆ ಹರೀಶ್, ಜೀವನ್, ಉತ್ಸವ ಸಮಿತಿಗೆ ಅಜಿತ್ ಮತ್ತು ತಂಡವನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷ ಆನಂದ್ ಪ್ರತಿಕ್ರಿಯಿಸಿ, ಮಡಿಕೇರಿ ದಸರಾದಲ್ಲಿ ಪ್ರತಿ ವರ್ಷ ವಿನೂತನ ರೀತಿಯಲ್ಲಿ ಮಂಟಪ ತಯಾರಿಸಿ ಜನ ಮೆಚ್ಚುಗೆಗೆ ಪಾತ್ರವಾಗಿರುವ ಶ್ರೀ ಕೋದಂಡ ರಾಮ ದೇವಾಲಯವು ಈ ಬಾರಿಯೂ ಕೂಡ ಅದ್ದೂರಿ ದಸರಾ ಆಚರಿಸುವ ಮೂಲಕ ಉತ್ತಮ ಮಂಟಪ ಹೊರತರುವಲ್ಲಿ ಶ್ರಮಿಸಲಿದೆ ಎಂದು ಅಭಿಪ್ರಾಯ ಹಂಚಿಕೊAಡರು.