ಮಡಿಕೇರಿ, ಜು. ೭: ಮಡಿಕೇರಿ ತಾಲೂಕು ಬಂಟರ ಸಂಘದಿAದ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ರೈ, ಜಿಲ್ಲಾ ಬಂಟರ ಸಂಘದಿAದ ಪ್ರತಿವರ್ಷ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುತಿತ್ತು. ಮುಂದೆ ಮಡಿಕೇರಿ ತಾಲೂಕು ಸಂಘದಿAದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಮುಂದುವರೆಸ ಲಾಗುವುದು. ಈ ಹಿನ್ನೆಲೆ ೨೦೨೩-೨೪ ಹಾಗೂ ೨೦೨೪ ಹಾಗೂ ೨೫ನೇ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಶೇ ೯೦ ಕ್ಕಿಂತ ಹೆಚ್ಚು ಅಂಕ ಗಳಿಸಿದ ಬಂಟರ ಸಮುದಾಯ ದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪೋಷಕರ ಆಧಾರ್ ಕಾರ್ಡ್, ಅಂಕಪಟ್ಟಿ ಜೆರಾಕ್ಸ್, ಫೋಟೋ ಸಹಿತ ಮೊಬೈಲ್ ಸಂಖ್ಯೆ ನಮೂದಿಸಿ ಸದಾಶಿವ ರೈ, ಅಧ್ಯಕ್ಷರು, ತಾಲೂಕು ಬಂಟರ ಸಂಘ, ಭೂಮಿಕ ಕನ್ಸಲ್ಟೆನ್ಸ್ ನಗರಸಭೆ ಕಾಂಪ್ಲೆಕ್ಸ್, ಮಡಿಕೇರಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ೯೪೮೦೨೯೦೬೮೮, ೭೮೨೯೭೬೮೭೩೬ಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಸದಾಶಿವ ರೈ, ಖಜಾಂಜಿ ದಿನೇಶ್ , ಮಹಿಳಾ ಘಟಕದ ಅಧ್ಯಕ್ಷೆ ಶಶಿ ಲೋಕೇಶ್ ರೂ, ಗೌರವ ಸಲಹೆಗಾರರುಗಳಾದ ವಿಜಯಲಕ್ಷಿö್ಮ, ಬಿ.ಸಿ. ಹರೀಶ್ ರೈ ಹಾಜರಿದ್ದರು.