ಮಡಿಕೇರಿ, ಜು. ೭: ಜಿಲ್ಲೆಯಲ್ಲಿ ಮಳೆಯ ಸನ್ನಿವೇಶ ಮುಂದುವರಿದಿದೆ. ಸೋಮವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಜಿಲ್ಲೆಯಲ್ಲಿ ಸರಾಸರಿ ೧.೦೮ ಇಂಚು ಮಳೆಯಾಗಿದೆ. ಭಾನುವಾರ ಕಂಡುಬAದ ಪರಿಸ್ಥಿತಿಯಿಂದಾಗಿ ಜಿಲ್ಲಾಡಳಿತ ಸೋಮವಾರದಂದು ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶ ನೀಡಿತ್ತು.

ಜಿಲ್ಲೆಯಾದ್ಯಂತ ಚಳಿ - ಗಾಳಿ ಸಹಿತ ಮಳೆ ಜೋರಾಗುವ ಲಕ್ಷಣಗಳಿತ್ತಾದರೂ ಸೋಮವಾರದಂದು ಮಳೆಯ ಪ್ರಮಾಣ ತಗ್ಗಿದಂತಾಗಿದ್ದು, ವಿಶೇಷವಾಗಿತ್ತು. ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಸರಾಸರಿ ೧.೦೮ ಇಂಚು ಮಳೆಯಾಗಿದ್ದರೆ, ಮಡಿಕೇರಿ ತಾಲೂಕಿನಲ್ಲಿ ೧.೭೯, ವೀರಾಜಪೇಟೆ ೦.೬೦, ಪೊನ್ನಂಪೇಟೆ ೧.೧೨, ಸೋಮವಾರಪೇಟೆ ೧.೫೧ ಹಾಗೂ ಕುಶಾಲನಗರ ತಾಲೂಕಿನಲ್ಲಿ ೦.೪೦ ಇಂಚು ಮಳೆ ಸುರಿದಿದೆ.

ಹೋಬಳಿವಾರು ಭಾಗಮಂಡಲ ಹೋಬಳಿಯಲ್ಲಿ ೩.೩೨ ಇಂಚು, ಶಾಂತಳ್ಳಿ ೨.೬೮, ಮಡಿಕೇರಿ ಕಸಬಾ ೧.೬೮, ನಾಪೋಕ್ಲು ೦.೭೮, ಸಂಪಾಜೆ ೧.೪೦ ಇಂಚು ಮಳೆಯಾಗಿದೆ. ವೀರಾಜಪೇಟೆ ೦.೬೫, ಅಮ್ಮತ್ತಿ ೦.೫೬, ಹುದಿಕೇರಿ ೧.೭೨, ಶ್ರೀಮಂಗಲ ೦.೮೪, ಪೊನ್ನಂಪೇಟೆ ೧.೩೪, ಬಾಳೆಲೆ ಹೋಬಳಿಯಲ್ಲಿ ೦.೪೮ ಇಂಚು ಮಳೆಯಾಗಿದೆ. ಸೋಮವಾರಪೇಟೆ ೧.೨೯, ಶನಿವಾರಸಂತೆ ೧.೧೬, ಕೊಡ್ಲಿಪೇಟೆ ೦.೯೧, ಸುಂಟಿಕೊಪ್ಪದಲ್ಲಿ ೦.೭೨ ಇಂಚು ಮಳೆ ಬಿದ್ದಿದೆ.

ಈ ತನಕ ಶಾಲಾ - ಕಾಲೇಜಿಗೆ ೧೦ ದಿನ ರಜೆ

ಜಿಲ್ಲೆಯಲ್ಲಿ ಶಾಲಾ - ಕಾಲೇಜುಗಳಿಗೆ ತೀವ್ರ ಮಳೆಯ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಹತ್ತು ದಿನಗಳ ರಜೆ ನೀಡಲಾಗಿದೆ. ಜೂನ್‌ನಿಂದ ಜುಲೈ ೭ ರ ತನಕ ಇದಾದಲೇ ವಾತಾವರಣದ ಏರುಪೇರಿನಿಂದಾಗಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿನ ೧೦ ದಿನಗಳು ಜಿಲ್ಲೆಯಲ್ಲಿ ಶಾಲೆ ನಡೆದಿಲ್ಲ. ಪ್ರಾಥಮಿಕ - ಪ್ರೌಢಕಡಿತದ ಅವಧಿಯ ಸಮತೋಲನಕ್ಕಾಗಿ ಮುಂದೆ ಶನಿವಾರಗಳಂದು ಇಡೀ ದಿನ ಶಾಲಾ - ಕಾಲೇಜುಗಳನ್ನು ನಡೆಸಿ ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಡಿಡಿಪಿಐಗಳಾದ ರಂಗದಾಮಪ್ಪ ಹಾಗೂ ಜ್ಯೋತಿಪ್ರಕಾಶ್ ಅವರುಗಳು ತಿಳಿಸಿದ್ದಾರೆ. - ಶಶಿಶಾಲೆ ಹಾಗೂ ಪ.ಪೂ. ಕಾಲೇಜುಗಳ ಈ ರಜಾ ದಿನದ ಈ