ಮಡಿಕೇರಿ, ಜು. ೭: ಜಿಲ್ಲೆಯ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮೂಲಕ ಮಡಿಕೇರಿ ತಾಲೂಕಿನ ಹೊದ್ದೂರುವಿನಲ್ಲಿ ಪ್ರಾರಂಭಗೊAಡಿದ್ದ ಆಧುನಿಕ ಮಾದರಿಯ ಕ್ರಿಕೆಟ್ ಸ್ಟೇಡಿಯಂ ಕಾಮಗಾರಿ ಸದ್ಯಕ್ಕೆ ಸ್ಥಗಿತಗೊಂಡಿದೆ.

ಹಲವಾರು ಅಡೆ - ತಡೆಗಳ ಕಾರಣ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡು ಈ ಕ್ರಿಕೆಟ್ ಸ್ಟೇಡಿಯಂ ಕಾಮಗಾರಿಗೆ ಚಾಲನೆ ದೊರೆಯಲು ಯೋಜನೆ ರೂಪುಗೊಂಡು ಹಲವು ವರ್ಷಗಳೇ ಬೇಕಾದವು. ಜಾಗ ವಿವಾದ ಸೇರಿದಂತೆ ಹಲವು ವಿಘ್ನಗಳು ಆರಂಭದಿAದಲೂ ಎದುರಾಗಿತ್ತು. ಅಂತಿಮವಾಗಿ ರಾಜ್ಯ ಉಚ್ಚ ನ್ಯಾಯಾಲಯದ ನಿರ್ದೇಶನದ ಅನ್ವಯ ಜಿಲ್ಲಾಡಳಿತ ಅಧಿಕೃತವಾಗಿ ಈ ಜಾಗವನ್ನು ನಿಗದಿಪಡಿಸಿ ಕೆಎಸ್‌ಸಿಎಗೆ ಹಸ್ತಾಂತರ ಮಾಡಿತ್ತು. ಕೋಟ್ಯಂತರ ರೂ. ಗಳ ಯೋಜನೆ ಇದಾಗಿದ್ದು, ಕಳೆದ ನವೆÀಂಬರ್‌ನಿAದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆರಂಭಿಕ ಹಂತವಾಗಿ ತಡೆಗೋಡೆ ನಿರ್ಮಾಣ, ಮೈದಾನದ ಜಾಗ ಸಮತಟ್ಟುಗೊಳಿಸುವ ಕೆಲಸವನ್ನು ಕೈಗೆತ್ತಿಗೊಳ್ಳಲಾಗಿತ್ತು. ಸದ್ಯದ ಮಟ್ಟಿಗೆ ಅಗತ್ಯ ಸ್ಥಳದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ.

ಜತೆಗೆ ಮೈದಾನದ ಸ್ಥಳದಲ್ಲಿ ಮಣ್ಣು ತೆಗೆದು ಇದನ್ನು ಸಮತಟ್ಟುಗೊಳಿಸುವ ಕೆಲಸವನ್ನು ಪ್ರಾರಂಭಿಸಲಾಗಿತ್ತು. ಈ ಕೆಲಸ ಬಹುತೇಕ ಶೇ. ೯೦ ರಷ್ಟು ಪೂರ್ಣಗೊಂಡಿದೆ. ಆದರೆ ಕಳೆದ ಕೆಲವು ಸಮಯದಿಂದ ಜಿಲ್ಲೆಯಲ್ಲಿ ಮಳೆ ಪ್ರಾರಂಭಗೊAಡಿರುವ ಹಿನ್ನೆಲೆಯಲ್ಲಿ ಇದೀಗ ಕಾಮಗಾರಿ ಸ್ಥಗಿತಗೊಂಡಿದೆ. ಮಳೆಗಾಲ ಮುಗಿಯುವ ತನಕ ಯಾವುದೇ ಕೆಲಸ ಮುಂದುವರಿಸಲಾಗದು. ಮಳೆ ಮುಗಿದು ವಾತಾವರಣ ಸಮರ್ಪಕಗೊಂಡ ಬಳಿಕ ಮತ್ತೆ ಇತರ ಹಂತದ ಕೆಲಸ ಪ್ರಾರಂಭಿಸಲಾಗುವುದು ಎಂದು ಕೆಎಸ್‌ಸಿಎ ಜಿಲ್ಲಾ ಸಂಯೋಜಕ ಚೇನಂಡ ಪ್ರಥ್ವಿ ದೇವಯ್ಯ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಮೈದಾನಕ್ಕೆ ತೆರಳಲು ಮುಖ್ಯ ರಸ್ತೆಯಿಂದ ಸುಮಾರು ೪.೫ ಕೀ.ಮೀ. ಅಂತರದ ರಸ್ತೆಯನ್ನು ಅವಲಂಭಿಸ ಬೇಕಾಗಿದೆ.

(ಮೊದಲ ಪುಟದಿಂದ) ಆದರೆ ಇದೀಗ ಇಲ್ಲಿಗೆ ಮುಖ್ಯ ರಸ್ತೆಯಿಂದ ಕೇವಲ ಅರ್ಧ ಕಿ.ಮೀ. ಅಂತರದಲ್ಲಿ ತಲುಪುವಂತೆ ಮತ್ತೊಂದು ವ್ಯವಸ್ಥೆಗೆ ಪ್ರಯತ್ನ ನಡೆಸಲಾಗಿದೆ. ಈ ಪ್ರಕ್ರಿಯೆ ನಡೆಯುತ್ತಿದ್ದು, ಇದಾದಲ್ಲಿ ಸುಲಭವಾಗಿ ಮೈದಾನದ ಸ್ಥಳಕ್ಕೆ ತೆರಳುವ ವ್ಯವಸ್ಥೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಜಾಗ ಕೆಎಸ್‌ಸಿಎಗೆ ಅಧಿಕೃತವಾಗಿ ಹಸ್ತಾಂತರಗೊAಡು ಕಾಮಗಾರಿಗೆ ಚಾಲನೆ ನೀಡಿದ ನಂತರದಲ್ಲಿ ಸ್ಥಳಕ್ಕೆ ಕೆಎಸ್‌ಸಿಎ ಪ್ರಮುಖರಾದ ಬಿಸಿಸಿಐ ಮಾಜಿ ಅಧ್ಯಕ್ಷ ಬ್ರಿಜೇಶ್ ಪಟೇಲ್ ಸೇರಿದಂತೆ ಕೆಎಸ್‌ಸಿಎ ಅಧ್ಯಕ್ಷ ರಘು ರಾಮ್‌ಭಟ್, ಮಲ್ಲಿಕಾರ್ಜುನ ಸ್ವಾಮಿ, ಇಂಜಿನಿಯರ್ ವೆಂಕಟೇಶ್ ಪ್ರಸಾದ್, ಖಜಾಂಚಿ ಜಯರಾಂ, ಬಿಸಿಸಿಎನ ಕ್ಯೂರೇಟರ್‌ಗಳು ಸೇರಿದಂತೆ ಪ್ರಮುಖರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

- ಕಾಯಪಂಡ ಶಶಿ ಸೋಮಯ್ಯ