ಮಡಿಕೇರಿ, ಜು. ೭: ೦,೨,೨,೩,೨,೦,೩ - ಇದು ಯಾರದ್ದೋ ದೂರವಾಣಿ ಸಂಖ್ಯೆಯಲ್ಲ, ಸೂರ್ಲಬ್ಬಿ ಪ್ರಾಥಮಿಕ ಶಾಲೆಯಲ್ಲಿನ ತರಗತಿವಾರು (೧ ರಿಂದ ೭) ವಿದ್ಯಾರ್ಥಿಗಳ ಸಂಖ್ಯೆ. ಹೌದು, ಉತ್ತರ ಕೊಡಗಿನ ಕುಗ್ರಾಮ ಸೂರ್ಲಬ್ಬಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ೧೨ ಮಕ್ಕಳಷ್ಟೆ ವ್ಯಾಸಂಗ ಮಾಡುತ್ತಿದ್ದಾರೆ. ೧ ಮತ್ತು ೬ ನೇ ತರಗತಿಯಲ್ಲಿ ವಿದ್ಯಾರ್ಥಿಗಳೇ ಇಲ್ಲವಾಗಿದ್ದು, ಎರಡು, ಮೂರು ಹಾಗೂ ಐದನೇ ತರಗತಿಗಳಲ್ಲಿ ತಲಾ ಇಬ್ಬರು, ನಾಲ್ಕು ಮತ್ತು ಏಳನೇ ತರಗತಿಗಳಲ್ಲಿ ತಲಾ ಮೂರು ಮಕ್ಕಳ ಹಾಜರಾತಿ ಇರುವುದರಿಂದ ಈ ಸಂಖ್ಯೆ ಇನ್ನಷ್ಟು ಕುಗ್ಗಿದಲ್ಲಿ ಶಾಲೆಯ ಬಾಗಿಲು ಸಂಪೂರ್ಣ ಮುಚ್ಚುವ ಆತಂಕ ಎದುರಾಗಿದೆೆ. ವಿರಳ ಜನಸಂಖ್ಯೆ ಇರುವ ಪ್ರದೇಶÀ ಹಾಗೂ ಖಾಸಗಿ ಶಾಲೆಗಳತ್ತ ಆಕರ್ಷಣೆ ಮಾತ್ರ ಇದಕ್ಕೆ ಕಾರಣವಲ್ಲ. ಅತಿಥಿ ಶಿಕ್ಷಕರುಗಳಿಗೆ ಸಂಬಳ ನೀಡದೆ ಇರುವ ಸರಕಾರದ ನಿರ್ಲಕ್ಷö್ಯವೂ ವಿದ್ಯಾರ್ಥಿಗಳ ಸಂಖ್ಯೆ ಕುಸಿತಕ್ಕೆ ಕಾರಣವಾಗಿದೆ.

ಹೆಚ್ಚು ಮಳೆಯಾಗುವ, ಭೌಗೋಳಿಕವಾಗಿ ವಿಭಿನ್ನವಾಗಿರುವ ಗ್ರಾಮೀಣ ಭಾಗವಾಗಿರುವ ಈ ಗ್ರಾಮದ ಪ್ರಾಥಮಿಕ ಶಾಲೆಗೆ ಶಿಕ್ಷಕರನ್ನು ಶಾಶ್ವತವಾಗಿ ನೇಮಿಸುವ ಸಾಹಸಕ್ಕೆ ಸರಕಾರ ಮುಂದಾಗದಿರುವುದರಿAದ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸಲು ಸಹಜವಾಗಿ ಹಿಂದೇಟು ಹಾಕುತ್ತಿದ್ದಾರೆ. ಶಾಶ್ವತ ಶಿಕ್ಷಕರ ಬದಲಿಗೆ ನೇಮಕಗೊಂಡಿರುವ ಅತಿಥಿ ಶಿಕ್ಷಕರಿಗೆ ಸಂಬಳ ಎಂಬುದು ಅರಣ್ಯರೋಧನವಾಗಿದೆ. ಈ ಕಾರಣದಿಂದ

(ಮೊದಲ ಪುಟದಿಂದ) ಆರ್ಥಿಕವಾಗಿ ಬಲವಾಗಿರುವ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ದಾಖಲಾತಿ ಮಾಡಿಸುತ್ತಿದ್ದಾರೆ. ಉಳಿದಂತೆ ಆರ್ಥಿಕವಾಗಿ ಹಿಂದುಳಿದಿರುವ, ಖಾಸಗಿ ಶಾಲೆಗಳ ಶುಲ್ಕ ಭರಿಸಲು ಕಷ್ಟಸಾಧ್ಯವಾಗಿರುವ ಬೆರಳೆಣಿಕೆಯ ಮಂದಿ ತಮ್ಮ ಮಕ್ಕಳನ್ನು ಎಂಟ್ಹತ್ತು ಕಿ.ಮೀ ದೂರದಿಂದ ತೀವ್ರ ಚಳಿ-ಗಾಳಿ-ಮಳೆಯ ನಡುವೆಯೂ ಶಾಲೆಗೆ ಕಾಲ್ನಡಿಗೆಯ ಮೂಲಕ ಕಳುಹಿಸುತ್ತಿರುವುದು ವಿಶೇಷ.

ಈ ಪೋಷಕರ ನೋವು ಅರಿತಿರುವ ಹಾಗೂ ಸ್ಥಳೀಯ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಇಲ್ಲಿ ದಶಕದಿಂದ ಸೇವೆ ಸಲ್ಲಿಸುತ್ತಿರುವ ಒಬ್ಬರೇ ಒಬ್ಬರು ಅತಿಥಿ ಶಿಕ್ಷಕಿಯಾದ ವಿಜಯಲಕ್ಷಿö್ಮÃ ಅವರು “ನಾನು ಇದೇ ಗ್ರಾಮದಲ್ಲಿ ಹುಟ್ಟಿ ಬೆಳೆದು, ಇದೇ ಶಾಲೆಯಲ್ಲಿ ಓದಿದ್ದೇನೆ, ಈ ಶಾಲೆ ಮುಚ್ಚಿ ಹೋಗಬಾರದೆಂಬ ಕಾರಣಕ್ಕೆ ಇನ್ನೂ ಸೇವೆ ಸಲ್ಲಿಸುತ್ತಿದ್ದೇನೆ” ಎಂದು ಸ್ಥಳಕ್ಕೆ ತೆರಳಿದ್ದ ‘ಶಕ್ತಿ’ಯೊಂದಿಗೆ ಹೇಳಿಕೊಂಡರು. ಸಿದ್ಧರಾಮಯ್ಯನವರಿಗೆ ಮನಸ್ಸು ಬಂದರೆ ಸಂಬಳ ಕೊಡುತ್ತಾರೆ ಎಂದು ಹೇಳಿದ ಇವರಿಗೆ ೫ ತಿಂಗಳಿನಿAದ ಸಂಭಾವನೆ ದೊರಕದಿದ್ದರೂ ತಮ್ಮ ನಿಸ್ವಾರ್ಥ ಸೇವೆಯನ್ನು ಮುಂದುವರಿಸಿರುವುದು ಗ್ರಾಮೀಣ ಶಾಲೆಗಳ ಮೇಲೆ ಸರಕಾರಕ್ಕಿರುವ ನಿರಾಸಕ್ತಿಯನ್ನು ಎತ್ತಿ ತೋರಿಸುವಂತಿತ್ತು. ಸೂರ್ಲಬ್ಬಿ ಕುಗ್ರಾಮವಲ್ಲ, ಸರಕಾರ ಕುಗ್ಗಿಸಿದ ಗ್ರಾಮ ಎಂದು ಕೂಡ ಅವರು ಬೇಸರದಿಂದ ಹೇಳಿಕೊಂಡರು.

‘ಶಕ್ತಿ’ ಶಾಲೆಗೆ ತೆರಳಿದ ಸಂದರ್ಭ ಕೆಲ ತರಗತಿಗಳ ಮಕ್ಕಳು ಕೊಠಡಿಯಲ್ಲಿ ನೆಲದಲ್ಲಿ ಕುಳಿತು ಅಭ್ಯಸಿಸುತ್ತಿದ್ದರೆ, ಕೆಲವರು ಶಿಕ್ಷಕಿ ತಮಗೆ ನೀಡಿದ ಕೆಲಸ ಮುಗಿಸಿ ಆಟವಾಡಿತ್ತಿದ್ದ ದೃಶ್ಯ ‘ಶಕ್ತಿ’ಗೆ ಗೋಚರಿಸಿತು. ಒಂದು ತರಗತಿಯವರಿಗೆ ಪಠ್ಯ ಸಂಬAಧ ಕೆಲಸ ನೀಡಿ ಇತರ ತರಗತಿಗೆ ಪಾಠ ಹೇಳಿಕೊಡುತ್ತಿರುವ ಅತಿಥಿ ಶಿಕ್ಷಕಿ ವಿಜಯಲಕ್ಷಿö್ಮÃ ಅವರು ಸಮಯವಿದ್ದಾಗ ಕಚೇರಿ ಕೆಲಸವನ್ನೂ ಕೂಡ ನೆರವೇರಿಸುತ್ತಾರೆ. ಸಮೀಪದ ಮಾದಾಪುರ ಹಾಗೂ ಗರಗಂದೂರಿನ ಶಾಲೆಯ ಕೆಲ ಶಿಕ್ಷಕರನ್ನು ಸೂರ್ಲಬ್ಬಿ ಶಾಲೆಗೆ ನಿಯೋಜಿಸಲಾಗಿದ್ದು, ಸಮಯವಿದ್ದಾಗ ಆ ಶಿಕ್ಷಕರು ಸೂರ್ಲಬ್ಬಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಪಾಠ ಮಾಡುತ್ತಾರೆ. ಅಂದು ಯಾವ ಶಿಕ್ಷಕರು ಶಾಲೆಗೆ ಆಗಮಿಸುತ್ತಾರೆಯೊ ಅವರೇ ಅಂದಿನ ಶಾಲಾ ಮುಖ್ಯೋಪಾಧ್ಯಾಯರು..!

ಎಸ್.ಎಸ್.ಎಲ್.ಸಿಯಲ್ಲಿ ಮೂರೇ ಮಕ್ಕಳು

ಪ್ರಾಥಮಿಕ ಶಾಲೆಯ ಸಮೀಪವೇ ಇರುವ ಅಂಗನವಾಡಿ ಕೇಂದ್ರಕ್ಕೆ ೨ ಮಕ್ಕಳ ಪ್ರವೇಶಾತಿಯಾಗಿದ್ದರೂ ಅವರುಗಳು ಅಂಗನವಾಡಿಗೆ ಬರುವುದೇ ಇಲ್ಲ. ಇನ್ನು ಪ್ರೌಢಶಾಲೆಯ ಎಸ್.ಎಸ್.ಎಲ್.ಸಿಯಲ್ಲಿನ ೩ ಮಕ್ಕಳನ್ನು ಸೇರಿ ಪ್ರೌಢಶಾಲೆಯಲ್ಲಿ ಒಟ್ಟು ೬ ವಿದ್ಯಾರ್ಥಿಗಳಷ್ಟೇ ಇರುವುದು ಕೂಡ ಶಾಲೆಯ ಭವಿಷ್ಯಕ್ಕೆ ಆತಂಕಕಾರಿ. ಪ್ರೌಢಶಾಲೆಯನ್ನು ಇಬ್ಬರು ಶಾಶ್ವತ ಶಿಕ್ಷಕರು ನಿರ್ವಹಿಸುತ್ತಿದ್ದಾರೆ.

ಕೊಡಗು ಸೇವಾ ಕೇಂದ್ರದಿAದ ಸಹಕಾರ

ಬಿಸಿಯೂಟ, ಊಟಕ್ಕೆ ಸಂಬAಧಿಸಿದ ಸಾಮಗ್ರಿ, ಸಮವಸ್ತçಗಳು ಸರಕಾರದಿಂದ ದೊರಕುತ್ತಿದೆಯಾದರೂ ಇತರ ಅಗತ್ಯ ಸೌಲಭ್ಯಗಳಾದ ನೋಟ್ ಪುಸ್ತಕಗಳು, ಮಕ್ಕಳಿಗೆ ಮಳೆಗಾಲದಲ್ಲಿ ಬಳಕೆಯಾಗುವ ರೈನ್‌ಕೋಟ್‌ಗಳು, ಪಠ್ಯ ಸಂಬAಧ ಪರಿಕರಗಳನ್ನು ಕೊಡಗು ಸೇವಾ ಕೇಂದ್ರದಿAದ ಸೇವೆಯ ರೂಪದಲ್ಲಿ ನೀಡಲಾಗುತ್ತಿದೆ.

- ಪ್ರತ್ಯಕ್ಷ ವರದಿ : ಪ್ರಜ್ವಲ್ ಜಿ.ಆರ್.