ಸಿದ್ದಾಪುರ, ಜು. ೮ : ಕಾಡಾನೆಗಳನ್ನು ಕಾಡಿಗಟ್ಟುವ ಸಂದರ್ಭ ಕಾರ್ಯಾಚರಣೆ ತಂಡವನ್ನು ಕಾಡಾನೆ ಬೆನ್ನಟ್ಟಿದ ಪರಿಣಾಮ ಕಾಐಅðಚರಣೆ ತಂಡದ ಆರ್. ಆರ್.ಟಿ. ಸಿಬ್ಬಂದಿ ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದÀ ಘಟನೆ ಮಂಗಳವಾರ ಸಂಜೆ ನಡೆದಿದೆ. ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ನೇತೃತ್ವದಲ್ಲಿ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯು ನಡೆಯುತ್ತಿದ್ದು, ಮಂಗಳವಾರದAದು ಕಾರ್ಯಾಚರಣೆ ವೇಳೆ ಇಂಜಿಲಗೆರೆ ಸಮೀಪದ ಗುಹ್ಯ ರಸ್ತೆಯ ಬಳಿ ಕಾಡಾನೆಗಳನ್ನು ಕಾಡಿಗೆ ಓಡಿಸುವಾಗ ಬೀಟಿಕಾಡು ಭಾಗಕ್ಕೆ ತೆರಳುವ ಸಂದರ್ಭ ಸಲಗವೊಂದು ಕಾರ್ಯಾಚರಣೆ ತಂಡವನ್ನು ಬೆನ್ನಟ್ಟಿ ದಾಳಿಗೆ ಮುಂದಾಗಿದೆ. ಈ ಸಂದರ್ಭ ಕಾಡಾನೆ ದಾಳಿಯನ್ನು ತಪ್ಪಿಸಿಕೊಳ್ಳಲು ಓಡುವ ವೇಳೆ ಆರ್.ಆರ್.ಟಿ. ತಂಡದ ಸಿಬ್ಬಂದಿ ಪ್ರವೀಣ್ ಎಂಬವರು ಬಿದ್ದು ಅವರ ಕೈಗೆ ಗಂಭೀರವಾದ ಗಾಯವಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ಸಂದರ್ಭ ಕಾರ್ಯಾಚರಣೆಯ ಇತರ ಸಿಬ್ಬಂದಿಗಳು ಕೂಡ ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಎದ್ದುಬಿದ್ದು ಓಡಿ ಅಪಾಯದಿಂದ ಪಾರಾಗಿದ್ದಾರೆ ಎಂದು ಕಾರ್ಯಾಚರಣೆ ತಂಡದ ಸಿಬ್ಬಂದಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆ ಸಂದರ್ಭ ಐದಕ್ಕೂ ಅಧಿಕ ಮರಿ ಆನೆಗಳು ಸೇರಿದಂತೆ ೨೦ಕ್ಕೂ ಅಧಿಕ ಕಾಡಾನೆಗಳು ಕಂಡುಬAದವು ಎಂದು ವಲಯ ಅರಣ್ಯ ಅಧಿಕಾರಿ ಶಿವರಾಂ ಮಾಹಿತಿ ನೀಡಿದ್ದಾರೆ. ಮಳೆಯ ನಡುವೆ ಕಾಫಿ ತೋಟದ ಕೆಸರಿನ ಒಳಗೆ ಕಾರ್ಯಾಚರಣೆ ತಂಡವು ಹಗಲಿರುಳು ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ನಡೆಸಿದರೂ ಕೂಡ ಕಾಡಾನೆಗಳು ಕಾಡಿನತ್ತ ತೆರಳದೆ ಕಾರ್ಯಾಚರಣೆ ತಂಡಕ್ಕೆ ಸವಾಲೊಡ್ಡುತ್ತಿವೆ. ಅದಲ್ಲದೆ ಕಾರ್ಯಾಚರಣೆ ಸಂದರ್ಭ ಆಗಿಂದಾಗ್ಗೆ ಕಾಡಾನೆಗಳು ಕಾರ್ಯಾಚರಣೆ ತಂಡದ ಮೇಲೆ ದಾಳಿಗೆ ಮುಂದಾಗುತ್ತಿರುವುದರಿAದ ಜೀವಭಯದಲ್ಲೇ ಅಧಿಕಾರಿ, ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುವಂತಾಗಿದೆ. ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಸರಕಾರ ಶಾಶ್ವತ ಯೋಜನೆಯನ್ನು ಕೂಡಲೇ ರೂಪಿಸಬೇಕೆಂದು ಹಾಗೂ ಆನೆ ಮಾನವ ಸಂಘರ್ಷಕ್ಕೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಂಗಳವಾರ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಸಂಜೀತ್ ಸೋಮಯ್ಯ. ರಾಘವ. ದೇವರಾಜ್. ಶ್ರೀನಿವಾಸ್. ಲೋಕೇಶ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ, ಆನೆ ಕಾರ್ಯಪಡೆ, ಆರ್.ಆರ್.ಟಿ. ತಂಡದ ಸಿಬ್ಬಂದಿ ಪಾಲ್ಗೊಂಡಿದ್ದರು. - ವಾಸು