ಕೂಡಿಗೆ, ಜು. ೮: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಕಳೆದ ೨೦ ದಿನಗಳಿಂದ ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ತಾಲೂಕು ವ್ಯಾಪ್ತಿಯಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳದ ಬೆಳೆಯು ಕುಂಠಿತಗೊAಡಿರುವುದು ಕಂಡುಬರುತ್ತಿದೆ.

ಮಳೆಯನ್ನೇ ಅವಲಂಬಿಸಿ ಬೆಳೆಯುವ ಮೆಕ್ಕೆಜೋಳ ಮೇ ಮತ್ತು ಜೂನ್ ತಿಂಗಳಲ್ಲಿ ಹೆಚ್ಚು ಮಳೆ ಬಿದ್ದ ಪರಿಣಾಮವಾಗಿ ನೆಲ ಕಚ್ಚಿದೆ.

ಕುಶಾಲನಗರ ತಾಲೂಕು ವ್ಯಾಪ್ತಿಯ ಅರೆ ಮಲೆನಾಡು ಪ್ರದೇಶಗಳಾದ ತಾಲೂಕಿನ ಹೆಬ್ಬಾಲೆ, ಶಿರಂಗಾಲ, ತೊರೆನೂರು, ಕೂಡಿಗೆ, ಕೂಡುಮಂಗಳೂರು, ಬಾಣವಾರ ಸಿದ್ದಲಿಂಗಪುರ, ಅಳುವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯೂ ಸೇರಿದಂತೆ ೩೦ಕ್ಕೂ ಹೆಚ್ಚು ಉಪ ಗ್ರಾಮಗಳಲ್ಲಿ ಮಳೆಯ ಆಶ್ರಯದಲ್ಲಿ ಮೆಕ್ಕೆಜೋಳದ ಬಿತ್ತನೆ ಕಾರ್ಯ ನಡೆದಿದ್ದು ಅದರಲ್ಲಿ ಬಿತ್ತನೆ ಮಾಡಿದ ಜೋಳ ಈಗಾಗಲೇ ೧ ಅಡಿಗಳಷ್ಟು ಬೆಳೆದಿದ್ದು, ಮಳೆಯಿಂದಾಗಿ ಜಮೀನಿನಲ್ಲಿ ಜೋಳ ಬೇಸಾಯಕ್ಕೆ ಬಾರಿ ತೊಂದರೆ ಆಗುತ್ತಿದೆ, ಅಲ್ಲದೆ ಜೋಳದ ಬೆಳೆಗೆ ರಾಸಾಯನಿಕ ಗೊಬ್ಬರ ಹಾಕುವಿಕೆ ಮತ್ತು ಕಳೆ ತೆಗೆಯುವ ಕೆಲಸ ಮತ್ತು ಬೆಳೆಗೆ ಮಣ್ಣು ಕೊಡುವ ಕೆಲಸವು ಸಹ ಮಳೆಯಿಂದಾಗಿ ಹಿನ್ನಡೆಯಾಗಿದೆ. ಇದರಿಂದಾಗಿ ಈ ಬಾರಿ ಮೆಕ್ಕೆ ಜೋಳದ ಬೆಳೆ ಕುಂಠಿತವಾಗು ತ್ತಿರುವುದು ಕಂಡು ಬರುತ್ತಿದೆ.