ಮಡಿಕೇರಿ, ಜು. ೮: ಐ.ಎಂ.ಎ. ಕೊಡಗು ಹಾಗೂ ಕೊಡಗು ಮೆಡಿಕಲ್ ಕಾಲೇಜಿನ ವತಿಯಿಂದ ಕೊಡಗು ಇನ್ಸಿ÷್ಟಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆವರಣದಲ್ಲಿ ವಿಶ್ವ ವೈದ್ಯರುಗಳ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ ಇಬ್ಬರು ಹಿರಿಯ ವೈದ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾಲೇಜಿನ ಡೀನ್ ಹಾಗೂ ನಿದೇಶಕರು, ಕಾಲೇಜಿನ ಸಿಬ್ಬಂದಿ ಹಾಗೂ ಐ.ಎಂ.ಎ. ಕೊಡಗು ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಸದಸ್ಯರು ಹಾಜರಿದ್ದರು.