ಕುಶಾಲನಗರ, ಜು. ೮: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕದ ವತಿಯಿಂದ (ಪೋಸ್ಟ್ ಕಾರ್ಡ್) ವಚನಗಳನ್ನು ಬರೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಹನ್ನೆರಡನೇ ಶತಮಾನದ ಬಸವಾದಿ ಶರಣ - ಶರಣೆಯರು ಬರೆದಂತಹ ವಚನಗಳನ್ನು ಅಂಚೆ ಕಾರ್ಡ್ನಲ್ಲಿ ಸ್ವಹಸ್ತಾಕ್ಷರಗಳಿಂದ ಬರೆದು ಕೆಳಕಂಡ ವಿಳಾಸಕ್ಕೆ ಬರೆದು ತಾ. ೨೦ ರೊಳಗೆ ತಲುಪುವಂತೆ ಪೋಸ್ಟ್ ಮಾಡುವುದು. ಅಂಚೆ ಚೀಟಿಯಲ್ಲಿ ಬರೆದು ಕಳುಹಿಸುವವರ ವಿಳಾಸ ಹಾಗೂ ಮೊಬೈಲ್ ನಂಬರ್ ನಮೂದಿಸಬೇಕು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು, ಮಹಿಳೆಯರು ಮಕ್ಕಳು ಎಲ್ಲರಿಗೂ ಮುಕ್ತ ಅವಕಾಶ ಇದೆ. ಅಂಚೆ ಚೀಟಿಗಳಲ್ಲಿ ಅತೀ ಹೆಚ್ಚು ವಚನಗಳನ್ನು ಬರೆದು ಕಳುಹಿಸಿದವರಿಗೆ ಸೂಕ್ತ ನಗದು ಬಹುಮಾನಗಳನ್ನು ನೀಡಲಾಗುವುದು.

ಅಂಚೆ ಚೀಟಿಗಳನ್ನು ಪೋಸ್ಟ್ ಮಾಡುವ ವಿಳಾಸ: ಕೆ.ಎಸ್. ಮೂರ್ತಿ, ಜಿಲ್ಲಾ ಅಧ್ಯಕ್ಷರು, ಶರಣ ಸಾಹಿತ್ಯ ಪರಿಷತ್ತು, ಶ್ರೀ ಅನ್ನಪೂರ್ಣೇಶ್ವರಿ ನಿವಾಸ, ಸೋಮೇಶ್ವರ ದೇವಾಲಯದ ಬಳಿ ಕುಶಾಲನಗರ, ಕೊಡಗು ಜಿಲ್ಲೆ ಇಲ್ಲಿಗೆ ಕಳುಹಿಸಬೇಕೆಂದು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಿ. ನಟರಾಜು ತಿಳಿಸಿದ್ದಾರೆ.