ಸೋಮವಾರಪೇಟೆ, ಜು. ೮: ತಾಲೂಕಿನ ಮಳೆಹಾನಿ ಪೀಡಿತ ಪ್ರದೇಶಗಳಿಗೆ ತಾಲೂಕು ತಹಶೀಲ್ದಾರ್ ಕೆ. ಕೃಷ್ಣಮೂರ್ತಿ ಅವರು ಕಂದಾಯ ಇಲಾಖಾಧಿಕಾರಿಗಳು ಸೇರಿದಂತೆ ಸಂಬAಧಿಸಿದ ಇತರ ಇಲಾಖಾಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.
ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ದೊಡ್ಡಬಿಳಹ ಗ್ರಾಮದ ಮಾಲತಿ ಸುದೀಪ್ ಅವರ ವಾಸದ ಮನೆಯ ಹೆಂಚು ಹಾಗೂ ಗೋಡೆ ಕುಸಿತಗೊಂಡಿದೆ. ಕಿರುಬಿಳಹ ಗ್ರಾಮದ ಸರೋಜ ವೆಂಕಟೇಶ್ ಅವರಿಗೆ ಸೇರಿದ ಮನೆಯ ಗೋಡೆ ಬಿರುಕು ಬಿಟ್ಟಿದೆ. ಚಿಕ್ಕಬಂಡಾರ ಗ್ರಾಮದ ದೇವಮ್ಮ ಚಿಕ್ಕಯ್ಯ ಅವರ ಮನೆಯ ಗೋಡೆ ಕುಸಿತಗೊಂಡಿದೆ. ಶನಿವಾರಸಂತೆ ಹೋಬಳಿಯ ದೊಡ್ಡಮಳ್ತೆ ಗ್ರಾಮದ ಮಂಜುನಾಥ ಅವರ ಮನೆಯ ಮೇಲೆ ಮರ ಬಿದ್ದು ಒಂದು ಪಾರ್ಶ್ವ ಕುಸಿದು ಬಿದ್ದಿರುವ ಸ್ಥಳಗಳನ್ನು ತಹಶೀಲ್ದಾರ್ ವೀಕ್ಷಿಸಿದರು.
ಆಯಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿ, ಲೋಕೋಪಯೋಗಿ ಇಲಾಖಾ ಅಭಿಯಂತರರು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದ ತಹಶೀಲ್ದಾರ್ ಕೃಷ್ಣಮೂರ್ತಿ ಅವರು, ಸಂಬAಧಿತ ಇಲಾಖೆಗಳ ವರದಿಯನ್ನು ಆಧರಿಸಿ, ಎಸ್‌ಡಿಆರ್‌ಎಫ್ ನಿಯಮಾನುಸಾರ ತಕ್ಷಣ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ರಸ್ತೆಗೆ ಬಿದ್ದ ಮರ: ಬಾಣಾವರ-ಸೋಮವಾರಪೇಟೆ ರಾಜ್ಯ ಹೆದ್ದಾರಿಗೆ ನಿನ್ನೆ ರಾತ್ರಿ ಬಿದ್ದ ಮರವನ್ನು ಅರಣ್ಯ ಇಲಾಖೆಯವರು ತೆರವುಗೊಳಿಸಿದರು. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ಕೆಲಕಾಲ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿತ್ತು.