ಮಡಿಕೇರಿ, ಜು. ೮: ಸಮಗ್ರ ಅಭಿವೃದ್ಧಿಯೊಂದಿಗೆ ವಿಕಸಿತ ಭಾರತವನ್ನಾಗಿ ಮಾಡಬೇಕೆಂಬ ಪರಿಕಲ್ಪನೆಗೆ ಪೂರಕವಾಗಿ ಕೊಡಗು ಜಿಲ್ಲೆಯನ್ನು ವಿಕಸಿತಗೊಳಿಸಲು ಪ್ರಾಮಾಣಿಕ ಕೆಲಸವನ್ನು ಮಾಡಲಾಗುತ್ತಿದೆ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿAದ ಆಯೋಜಿತ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಕೆಲಸ, ಭವಿಷ್ಯದ ಯೋಜನೆಗಳ ಕುರಿತು ಮುಕ್ತವಾಗಿ ಹಂಚಿ ಕೊಳ್ಳುವುದರೊಂದಿಗೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಚತುಷ್ಪಥ ಹೆದ್ದಾರಿ, ರೈಲ್ವೆ ಯೋಜನೆ, ಕಸ ವಿಲೇವಾರಿ

ಶ್ರೀರಂಗಪಟ್ಟಣದಿAದ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ಚತುಷ್ಪಥ ಹೆದ್ದಾರಿ ಹಾಗೂ ರೈಲ್ವೆ ಸಂಪರ್ಕಕ್ಕೆ ಕೇಂದ್ರ ಸರಕಾರದಿಂದ ಎಲ್ಲಾ ರೀತಿಯ ಅನುಮೋದನೆ ದೊರೆತ್ತಿದ್ದು, ರಾಜ್ಯ ಸರಕಾರ ಇದಕ್ಕಾಗಿ ಕೆಲವೊಂದು ಅನುಮತಿ ಹಾಗೂ ಪ್ರಕ್ರಿಯೆಗಳನ್ನು ನಡೆಸಬೇಕಾಗಿದೆ ಎಂದು ಯದುವೀರ್ ಒಡೆಯರ್ ಹೇಳಿದರು.

ಚತುಷ್ಪಥ ಹೆದ್ದಾರಿ ಸಂಬAಧ ಮೂರು ಪ್ಯಾಕೇಜ್ ಅಡಿ ಕೆಲಸವಾಗಿದ್ದು, ಮತ್ತೊಂದು ಹಂತ ಆರಂಭಗೊಳ್ಳಲಿದೆ. ಇದಕ್ಕಾಗಿ ರಾಜ್ಯ ಸರಕಾರ ಅನುಮತಿ ನೀಡಬೇಕಾಗಿದ್ದು, ಸ್ಥಳೀಯ ಶಾಸಕರು ಈ ಸಂಬAಧ ಸರಕಾರದ ಗಮನ ಸೆಳೆಯಬೇಕಾದ ಅನಿವಾರ್ಯತೆ ಇದೆ ಎಂದರು.

ರೈಲ್ವೆ ಸಂಪರ್ಕ ಸಂಬAಧ ಎಲ್ಲಾ ಕೆಲಸ ಕೇಂದ್ರ ಮಟ್ಟದಲ್ಲಿ ಆಗಿದೆ. ಭೂಸ್ವಾದೀನ ಪ್ರಕ್ರಿಯೆಯನ್ನು ರಾಜ್ಯ ಸರಕಾರ ಮಾಡಬೇಕಾಗಿದೆ. ಆದರೆ, ಹಣ ಕೊರತೆಯಿಂದ ಅಡಚಣೆ ಉಂಟಾಗಿದೆ. ರೈಲ್ವೆ ಯೋಜನೆ ಸಾಕಾರಗೊಂಡರೆ ಸಾರಿಗೆ ಸಂಪರ್ಕ ಅಭಿವೃದ್ಧಿ ಸಾಧಿಸಿ ಜನರಿಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.

ಮಡಿಕೇರಿಯ ಕಸ ವಿಲೇವಾರಿ ಗಾಗಿ ಈಗಾಗಲೇ ಕೆಲಸಗಳು ನಡೆಯುತ್ತಿವೆ. ಆದರೆ, ಘಟಕ ನಿರ್ಮಾಣಕ್ಕೆ ತಾಂತ್ರಿಕ ಸಮಸ್ಯೆಯಿದ್ದು, ಇದಕ್ಕಾಗಿ ಅರಣ್ಯ ಇಲಾಖೆ ಅನುಮತಿ ನೀಡಬೇಕು.

(ಮೊದಲ ಪುಟದಿಂದ) ಇದನ್ನು ರಾಜ್ಯ ಸರಕಾರ ಬಗೆಹರಿಸಿದರೆ ಕಸ ವಿಲೇವಾರಿ ಸಮಸ್ಯೆ ಬಗೆಹರಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಏರ್‌ಸ್ಟಿçಪ್’ ಯೋಜನೆ

ಕುಶಾಲನಗರದಲ್ಲಿ ‘ಏರ್‌ಸ್ಟಿçಪ್’ ಯೋಜನೆ ಸಾಕಾರಗೊಳಿಸುವ ನಿಟ್ಟಿನ ಪ್ರಯತ್ನಗಳು ಸಾಗುತ್ತಿವೆ ಎಂದು ಯದುವೀರ್ ಮಾಹಿತಿ ನೀಡಿದರು.

ಈಗಾಗಲೇ ಕುಶಾಲನಗರದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಅನುಮತಿ ದೊರೆತಿದೆ. ತಜ್ಞರ ಸಲಹೆಯನ್ನು ಪಡೆದು ಮುಂದುವರೆಯಲಾಗುವುದು. ಅದೇ ರೀತಿ ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿಗೊಳಿಸಲಾಗುತ್ತಿದೆ. ಇದರಿಂದಲೂ ಕೊಡಗಿನ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಪರಿಸರ ಸಂರಕ್ಷಣೆಯೊAದಿಗೆ ಪ್ರವಾಸೋದ್ಯಮ

ಕೊಡಗಿನ ಪರಿಸರ ಸಂರಕ್ಷಣೆಯೊAದಿಗೆ ಪ್ರವಾಸೋದ್ಯಮ ಚಟುವಟಿಕೆಗಳು ನಡೆಯಬೇಕೆಂದು ಯದುವೀರ್ ಅಭಿಪ್ರಾಯ ಹಂಚಿಕೊAಡರು.

ಕೊಡಗಿನ ಪ್ರವಾಸಿ ತಾಣಗಳನ್ನು ನೋಡುವುದಕ್ಕಿಂತ ಇಲ್ಲಿನ ವಾತಾವರಣ ಅಸ್ವಾದಿಸಲೆಂದು ಪ್ರವಾಸಿಗರು ಬರುತ್ತಾರೆ. ಈ ಹಿನ್ನೆಲೆ ಮೊದಲು ಪರಿಸರ ಉಳಿಯಬೇಕೆಂದರು.

ಅಸ್ಸಾಂ, ಹಿಮಾಚಲ ಪ್ರದೇಶದಲ್ಲಿರುವಂತೆ ಗುಡ್ಡಗಾಡು ಪ್ರದೇಶದಲ್ಲಿ ‘ಲಿಫ್ಟ್’ ಮೂಲಕ ಜನರನ್ನು ಕರೆದೊಯ್ಯಲು ವ್ಯವಸ್ಥೆ ಕಲ್ಪಿಸುವ ಯೋಜನೆ ಚರ್ಚೆ ಹಂತದಲ್ಲಿದ್ದು, ಇದರ ಸಾಧಕ-ಬಾಧಕ ತಿಳಿದುಕೊಂಡು ಅನುಷ್ಠಾನ ಮಾಡಲಾಗುವುದು ಎಂದರು.

ವನ್ಯಜೀವಿ ಹಾವಳಿ ಪರಿಹಾರಕ್ಕೆ ಒಂದಾಗೋಣ

ಕೊಡಗು ಜಿಲ್ಲೆಯ ಬಹುದೊಡ್ಡ ಸಮಸ್ಯೆಯಾಗಿರುವ ವನ್ಯಜೀವಿ ಹಾವಳಿ ಪರಿಹಾರಕ್ಕೆ ರಾಜಕೀಯ ಬದಿಗೊತ್ತಿ ಒಂದಾಗಿ ಕೆಲಸ ಮಾಡಬೇಕೆಂದು ಯದುವೀರ್ ಒತ್ತಿ ಹೇಳಿದರು.

ವನ್ಯಜೀವಿ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ತೋಟಗಳು ಆನೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಸಕಲೇಶಪುರ, ಹಾಸನ ಭಾಗದಲ್ಲೂ ಉಪಟಳ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ವೈಜ್ಞಾನಿಕ ಮಾರ್ಗಗಳನ್ನು ಅನುಸರಿಸಬೇಕು. ಲಾಂಟನ ತೆರವು ಮಾಡಿ ಕಾಡಿನಲ್ಲಿ ಆಹಾರ, ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದರು.

ವೇದಿಕೆಯಲ್ಲಿ ಮಾಜಿ ಸಭಾಪತಿ ಕೆ.ಜಿ. ಬೋಪಯ್ಯ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಹಾಜರಿದ್ದರು.