ಸುಂಟಿಕೊಪ್ಪ, ಜು. ೮: ಸುಂಟಿಕೊಪ್ಪ ಗ್ರೇಡ್ ೧ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಕೆ.ಪ್ರಸಾದ್ ಅವರನ್ನು ಪಂಚಾಯಿತಿ ಅನುದಾನ ದುರುಪಯೋಗದ ಹಿನ್ನೆಲೆಯಲ್ಲಿ ಸದಸ್ಯತ್ವ ಸ್ಥಾನದಿಂದ ತೆಗೆದು ಹಾಕಲಾಗಿದೆ ಮಾತ್ರವಲ್ಲದೆ ಮುಂದಿನ ೬ ವರ್ಷಗಳಕಾಲ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಕೆÀ.ಕೆ. ಪ್ರಸಾದ್ ಅವರು ಸುಂಟಿಕೊಪ್ಪ ಗ್ರೇಡ್ ೧ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಗ್ರಾಮ ಪಂಚಾಯಿತಿ ಅನುದಾನ ರೂ.೩೦,೦೦೦ವನ್ನು ದುರುಪಯೋಗಪಡಿಸಿಕೊಂಡಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪಾರ ಮುಖ್ಯ ಕಾರ್ಯದರ್ಶಿ ಉಮಾಮಹದೇವನ್ ಅವರು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧೀನಿಯಮ ೧೯೯೩ ಪ್ರಕರಣ ೪೩(ಎ) ಅಡಿಯಲ್ಲಿ ಆನರ್ಹಗೊಳಿಸಿದ್ದಲ್ಲದೆ ಇದೇ ಅಧಿನಿಯಮ ೪೮(೪) ಹಾಗೂ ೪೩ (ಎ) (೨) ಅನ್ವಯ ೬ ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಆದೇಶಿಸಿದ್ದಾರೆ.
ಪ್ರಕರಣದ ವಿವರ : ಕೆ.ಕೆ. ಪ್ರಸಾದ್ ಅವರು ಉಪಾಧ್ಯಕ್ಷರಾಗಿದ್ದ ಸಂದರ್ಭ ಗ್ರಾಮ ಪಂಚಾಯಿತಿಗೆ ಸೇರಿದ ಮಾರುಕಟ್ಟೆ ಆವರಣದಲ್ಲಿರುವ ಮಳಿಗೆ ೪೯ ಅನ್ನು ಅನಧಿಕೃತವಾಗಿ ವಶಕ್ಕೆ ತೆಗೆದುಕೊಂಡು ಯಾವುದೇ ಹರಾಜು ಪ್ರಕ್ರಿಯೆ ನಡೆಸದೆ ಒಣಮೀನು ಮಳಿಗೆಯನ್ನು ೮ ತಿಂಗಳಿನಿAದ ನಡೆಸುತ್ತಿದ್ದಾರೆ ಮತ್ತು ಗ್ರಾಮ ಪಂಚಾಯಿತಿ ಅನುದಾನದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ದೇವು ಅವರ ಹೆಸರಿಗೆ ಸೌರವಿದ್ಯುತ್ ದೀಪ ಅಳವಡಿಸಲು ರೂ ೩೦,೦೦೦ ಅನುದಾನವನ್ನು ಮಂಜೂರು ಮಾಡಿಸಿಕೊಂಡು ಸದರಿ ಬೀದಿ ದೀಪವನ್ನು ತಮ್ಮ ತಾಯಿಯ ಮನೆಯ ಗೋಡೆಯ ಆವರಣದೊಳಗೆ ಅಳವಡಿಸಿಕೊಂಡು ಸರಕಾರದಿಂದ ಪರಿಶಿಷ್ಟ ಜಾತಿಯವರಿಗೆ ಮೀಸಲಿರಿಸಿದ್ದ ಅನುದಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸ್ಥಳೀಯ
(ಮೊದಲ ಪುಟದಿಂದ) ವ್ಯಾಪಾರಿ ಜಿ.ಎನ್. ದಿನೇಶ್ ದೂರು ಸಲ್ಲಿಸಿದ್ದರು.
ಈ ದೂರನ್ನು ದಾಖಲಿಸಿಕೊಂಡು ಆರೋಪದ ಕುರಿತು ವಿಚಾರಣೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರು ಮೈಸೂರು ಇವರಿಗೆ ಆದೇಶಿಸಲಾಗಿತ್ತು. ಇದರಂತೆ ಪ್ರಾದೇಶಿಕ ಆಯುಕ್ತರು ೫-೦೭-೨೦೨೪ ರಂದು ಸಲ್ಲಿಸಿರುವ ವಿಚಾರಣಾ ವರದಿಯಲ್ಲಿ ಮೊದಲ ಆರೋಪವು ಸಾಬೀತುಗೊಂಡಿರುವುದಿಲ್ಲ ೨ನೇ ಆರೋಪದಲ್ಲಿ ಅಧಿಕಾರ ದುರುಪಯೋಗ ಮೇಲ್ನೋಟಕ್ಕೆ ಸಾಭೀತಾಗಿದ್ದು, ಕೆ.ಕೆ.ಪ್ರಸಾದ್ ವಿರುದ್ಧ ಕ್ರಮ ವಹಿಸಬಹುದೆಂದು ಶಿಫಾರಸ್ಸು ಮಾಡಿದ್ದರು.
ಈ ಹಿನ್ನಲೆಯಲ್ಲಿ ಪ್ರಾದೇಶಿಕ ಆಯುಕ್ತರ ವರದಿಯೊಂದಿಗೆ ೧೨-೦೮-೨೦೨೪ ರಂದು ಕಾರಣ ಕೇಳಿ ನೋಟೀಸನ್ನು ಜಾರಿ ಮಾಡಲಾಗಿತ್ತು. ಈ ಬಗ್ಗೆ ಕೆ.ಕೆ.ಪ್ರಸಾದ್ ಲಿಖಿತ ಸವiಜಾಯಿಷಿಕೆ, ದಾಖಲೆಗಳನ್ನು ಸಲ್ಲಿಸಿದ್ದು ಪ್ರಕರಣದಿಂದ ತಮ್ಮನ್ನು ಆರೋಪ ಮುಕ್ತಗೊಳಿಸುವಂತೆ ಕೋರಿದರು.
ಸರಕಾರದ ಅಪಾರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಅರೆನ್ಯಾಯಿಕ ನ್ಯಾಯಾಲಯದ ವಿಚಾರಣೆಗೆ ೮-೧೦-೨೦೨೪ ರಂದು ತಿಳುವಳಿಕೆ ಪತ್ರವನ್ನು ಜಾರಿಗೊಳಿಸಲಾಗಿತ್ತು. ಆದರಂತೆ ಕುಶಾಲನಗರ ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಿAದ ಎಸ್.ಡಿ.ಡಿ.ಎ ಮತ್ತು ಫಲಾನುಭವಿಯಾದ ದೇವು ಹಾಗೂ ಅಂದಿನ ಉಪಾಧ್ಯಕ್ಷರಾಗಿದ್ದ ಕೆ.ಕೆ. ಪ್ರಸಾದ್ ೩೦-೧೦-೨೦೨೪ ರಂದು ನಡೆದ ವಿಚಾರಣೆಗೆ ಹಾಜರಾಗಿದ್ದರು ಈ ವಿಚಾರಣೆಯಲ್ಲಿ ವಾದಿ ಪ್ರತಿವಾದಿಗಳ ಮೌಖಿಕ ಹೇಳಿಕೆ ಮತ್ತು ದಾಖಲೆಗಳನ್ನು ಪರಿಶೀಲಿಸಿ ಸರಕಾರಿ ಅನುದಾನವನ್ನು ದುರುಪ ಯೋಗ ಪಡಿಸಿಕೊಂಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕೆ.ಕೆ.ಪ್ರಸಾದ್ ಅವರನ್ನು ಸದಸ್ಯತ್ವ ಸ್ಥಾನದಿಂದ ಮತ್ತು ಮುಂದಿನ ೬ ವರ್ಷಗಳಕಾಲ ಚುನಾವಣೆಗೆ ನಿಲ್ಲಲು ಅನರ್ಹಗೊಳಿಸಿ ಸರಕಾರ ೨೧-೦೬-೨೦೨೫ರ ಅಧಿಕೃತ ಆದೇಶದಲ್ಲಿ ಹೇಳಿದೆ.