ಭಾರತದಲ್ಲಿ ದಾಳಿಗೆ ಪಾಕ್ ಉಗ್ರರಿಗೆ ನೇಪಾಳ ದಾರಿ!

ನವದೆಹಲಿ, ಜು. ೧೨: ಮೊಹಮ್ಮದ್, ಲಷ್ಕರ್-ಎ-ತಯ್ಯಬಾ ಉಗ್ರ ಸಂಘಟನೆಗಳು ನೇಪಾಳದ ಮೂಲಕ ಭಾರತವನ್ನು ಪ್ರವೇಶಿಸಿ ಉಗ್ರ ಕೃತ್ಯ ನಡೆಸುವ ಅಪಾಯವಿದೆ ಎಂದು ನೇಪಾಳ ಅಧ್ಯಕ್ಷ ಕೆ.ಪಿ. ಓಲಿ ಅವರ ಸಲಹೆಗಾರ ಸುನಿಲ್ ಬಹದ್ದೂರ್ ಮುನ್ನೆಚ್ಚರಿಕೆ ನೀಡಿದ್ದಾರೆ. ಥಾಪಾ ಅವರು ನೇಪಾಳ ಅಂತರರಾಷ್ಟಿçÃಯ ಸಹಕಾರ ಸಂಘಟನೆಯ ಕಾರ್ಯಕ್ರಮ ವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದು, ಪಾಕಿಸ್ತಾನವು ಪೋಷಿಸುತ್ತಿರುವ ಉಗ್ರರು ಭಾರತವಷ್ಟೇ ಅಲ್ಲದೇ, ಇಡೀ ದಕ್ಷಿಣ ಏಷ್ಯಾ ಭಾಗದ ಶಾಂತಿ ಹಾಗೂ ಸ್ಥಿರತೆಗೆ ಸವಾಲಾಗಿದ್ದಾರೆ. ಪಾಕಿಸ್ತಾನವು ನೇಪಾಳದ ಭೂ-ಸಾರಿಗೆ ಮಾರ್ಗವನ್ನು ಬಳಸಿ ಭಾರತಕ್ಕೆ ಉಗ್ರರನ್ನು ಕಳುಹಿಸುತ್ತಿರುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದರು. ಈ ಉಗ್ರ ಚಟುವಟಿಕೆ ಗಳ ನಿಯಂತ್ರಣಕ್ಕೆ ಭಾರತದ ಸಹಾಯವನ್ನೂ ಕೋರಿದ್ದಾರೆ.