ಚೆಯ್ಯAಡಾಣೆ, ಜು. ೧೩: ಕೊಡಗು ಜಿಲ್ಲೆ ಒಟ್ಟು ೫ ತಾಲೂಕುಗಳನ್ನು ಹೊಂದಿ ಮೂಲ ಸೌಕರ್ಯ, ಸೌಲಭ್ಯಗಳು ಜನ ಸಾಮಾನ್ಯರಿಗೆ ದೊರೆಯುತ್ತಿದೆ.
ಹೊರದೇಶದ ಪ್ರಯಾಣಕ್ಕೆ ಪಾಸ್ಪೋರ್ಟ್ ಅತ್ಯಂತ ಅಗತ್ಯ ದಾಖಲೆ. ಆದರೆ ಕೊಡಗಿನಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ವಿಲ್ಲದೆ ಇಲ್ಲಿನ ಜನರು ದೂರದ ಊರುಗಳಿಗೆ ತೆರಳಿ ಪಾಸ್ಪೋರ್ಟ್ ಸೌಲಭ್ಯ ಪಡೆಯುವಂತಾಗಿದೆ.
ಪಾಸ್ಪೋರ್ಟ್ ಮಾಡಿಸಿಕೊಳ್ಳಲು ಜಿಲ್ಲೆಯ ಐದು ತಾಲೂಕುಗಳ ಜನರು ದೂರದ ರಾಜಧಾನಿ ಬೆಂಗಳೂರು, ಮೈಸೂರು ಅಥವಾ ಮಂಗಳೂರಿಗೆ ಅಲೆದಾಡುವ ಪರಿಸ್ಥಿತಿ ಇದೆ.
ಪಾಸ್ಪೋರ್ಟ್ ಪಡೆಯಲು ಕೊಡಗಿನವರು ಸರಿಸುಮಾರು ಒಂದೆರಡು ತಿಂಗಳು ಅವಲಂಭಿಸ ಬೇಕಾಗಿದೆ. ಪೊಲೀಸರ ಪರಿಶೀಲನೆ, ಪಾಸ್ಪೋರ್ಟ್ ಅರ್ಜಿ ಹೀಗೆ ಪ್ರತಿಯೊಂದಕ್ಕೂ ಜಿಲ್ಲೆಯ ಜನತೆ ಬೇರೆ ಕೇಂದ್ರಗಳನ್ನು ಅವಲಂಬಿಸಬೇಕಿರುವುದು ವಿಪರ್ಯಾಸವಾಗಿದೆ.
ಕೊಡಗು ಜಿಲ್ಲೆ ದೇಶಕ್ಕೆ ಅತೀ ಹೆಚ್ಚು ಸೈನಿಕರನ್ನು ಹಾಗೂ ಕ್ರೀಡೆಗೆ ಹೆಸರುವಾಸಿಯಾದ್ದರೂ ಪಾಸ್ಪೋರ್ಟ್ ಸೇವಾ ಕೇಂದ್ರ ಮಾತ್ರ ಇಲ್ಲದಿರುವುದು ಕೊಡಗನ್ನು ಸರಕಾರ ನಿರ್ಲಕ್ಷಿಸುತ್ತಿದೆ ಎಂಬAತಾಗಿದೆ.
ಕೊಡಗಿನ ಮಡಿಕೇರಿ ಅಂಚೆ ಕಚೇರಿಯಲ್ಲಿ ಹಲವಾರು ವರ್ಷಗಳ ಹಿಂದೆ ಪಾಸ್ಪೋರ್ಟ್ ಸೇವಾ ಕೇಂದ್ರವಿತ್ತು. ಅದನ್ನೇ ಮರುಸ್ಥಾಪಿಸಿದಲ್ಲಿ ಕೊಡಗಿನ ಜನರಿಗೆ ಬಹಳ ಉಪಯೋಗವಾಗುತ್ತಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕೊಡಗಿನ ಇಬ್ಬರು ಶಾಸಕರು ಹಾಗೂ ಸಂಸದರು ಕೂಡಲೇ ಗಮನಹರಿಸಿ ಕೊಡಗಿನಲ್ಲಿ ಕನಿಷ್ಟ ೨ ಪಾಸ್ ಪೋರ್ಟ್ ಸೇವಾ ಕೇಂದ್ರ ಆರಂಭಿಸು ವಂತಾಗಲಿ ಎಂಬುದು ಕೊಡಗಿನ ಜನರ ಬಹುದಿನದ ಕನಸಾಗಿದೆ. - ಅಶ್ರಫ್
ಕೊಡಗಿನಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ಅತ್ಯವಶ್ಯಕ. ೨೦೦೭ ರಲ್ಲಿ ಮಡಿಕೇರಿ ಅಂಚೆ ಕಚೇರಿಯಲ್ಲಿ ಸೇವಾ ಕೇಂದ್ರವಿತ್ತು. ಅದನ್ನು ಸ್ಥಗಿತಗೊಳಿಸಿದ್ದು, ದುಃಖಕರ. ಆದಷ್ಟು ಶೀಘ್ರ ಶಾಸಕರು, ಸಂಸದರು ಮಡಿಕೇರಿ ಹಾಗೂ ವೀರಾಜಪೇಟೆ ಭಾಗಕ್ಕೆ ಒಂದು ಪಾಸ್ಪೋರ್ಟ್ ಸೇವಾ ಕೇಂದ್ರ ಆರಂಭಿಸಿ.
- ಮೊಹಮ್ಮದ್ ರಾಫಿ, ವೀರಾಜಪೇಟೆ ಪುರಸಭಾ ಸದಸ್ಯರು.
ಕೊಡಗಿನ ನಿವಾಸಿಗಳು ಪಾಸ್ಪೋರ್ಟ್ ಸೇವೆಗಾಗಿ ಬೆಂಗಳೂರು ಅಥವಾ ಮಂಗಳೂರಿಗೆ ಪ್ರಯಾಣಿಸಲು ಸಾಕಷ್ಟು ಹಣ ಮತ್ತು ಸಮಯ ವ್ಯಯಿಸಬೇಕಾಗಿದೆ. ಸ್ಥಳೀಯ ಪಾಸ್ಪೋರ್ಟ್ ಸೇವಾ ಕೇಂದ್ರ ಆರಂಭಿಸಿದರೆ ಈ ಹೊರೆಯನ್ನು ನಿವಾರಿಸುತ್ತದೆ. ಸಮಯ ಮತ್ತು ಹಣವನ್ನು ಉಳಿಸುತ್ತದೆ. ಈ ಪ್ರಮುಖ ಮೂಲಸೌಕರ್ಯವು ಕೊಡಗಿನ ನಾಗರಿಕರಿಗೆ ಪಾಸ್ಪೋರ್ಟ್ ಅರ್ಜಿ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇದರಿಂದ ಅನುಕೂಲ ಮತ್ತು ದಕ್ಷತೆ ಹೆಚ್ಚಾಗುತ್ತದೆ. ಆದ್ದರಿಂದ ಕೊಡಗಿನಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ಸ್ಥಾಪಿಸುವುದು ಅತ್ಯಗತ್ಯವಾಗಿದೆ.
- ಚೆಪ್ಪುಡಿರ ಕಾರ್ಯಪ್ಪ, ವೀಕ್ಷಕ ವಿವರಣೆಗಾರ.