ಪೊನ್ನಂಪೇಟೆ, ಜು. ೧೪: ಇತ್ತೀಚೆಗೆ ಬಲ್ಯಮಂಡೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಬೆಂಗಳೂರಿನ ದಾನಿಗಳಾದ ಅರಮಣಮಾಡ ಮೋಹನ್ ಮತ್ತು ಮೋನಿಷಾ ಮಕ್ಕಳಿಗೆ ಸಿಹಿ ಮತ್ತು ಕೊಡೆ ವಿತರಿಸಿದರು. ಈ ಸಂದರ್ಭ ಗ್ರಾಮ ಪಂಚಾಯತಿ ಕಾರ್ಯದರ್ಶಿ ಸುಶೀಲ, ಸಿಬ್ಬಂದಿ ಟಿ. ಆರ್. ಲತಾ, ಸಂಜು, ಚೈತ್ರ, ಗ್ರಂಥಪಾಲಕಿ ಅರ್ಚನ, ಅಂಗನವಾಡಿ ಕಾರ್ಯಕರ್ತೆ ಎಂ ಕೆ ಪದ್ಮ, ಸಹಾಯಕಿ ಸೌಮ್ಯ, ಪೋಷಕರಾದ ಮುತ್ತಕ್ಕಿ, ಮುಖ್ಯ ಶಿಕ್ಷಕಿ ಕೆ. ಪಿ. ಪವಿತ್ರ, ಸಹ ಶಿಕ್ಷಕರಾದ ತಿರುನೆಲ್ಲಿಮಾಡ ಜೀವನ್, ಹಸೀನಾ, ಸುನೋಜಮ್ಮ ಹಾಜರಿದ್ದರು.