ಇಸ್ರೋ ಗಗನಯಾತ್ರಿ, ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಅವರು ಇಂದು (ತಾ.೧೫) ಧರೆಗೆ ವಾಪಸ್ಸಾಗಲಿದ್ದಾರೆ. ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ, ಅಲ್ಲಿನ ಖಾಸಗಿ ಸಂಸ್ಥೆಗಳಾದ ಆಕ್ಸಿಯಮ್, ಸ್ಪೇಸ್-ಎಕ್ಸ್ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಜಂಟಿ ಯೋಜನೆಯ ಅಂಗವಾಗಿ ಬಾಹ್ಯಾಕಾಶಕ್ಕೆ ತೆರಳಿ ಅಂತರರಾಷ್ಟಿçÃಯ ಬಾಹ್ಯಾಕಾಶ ಕೇಂದ್ರದಲ್ಲಿ ಸುಮಾರು ೩ ವಾರಗಳ ಕಾಲ ತಂಗಿದ್ದ ಶುಭಾಂಶು ಅವರು ನಾಸಾದ ಪೆಗ್ಗಿ ವಿಟ್‌ಸನ್, ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಸ್ಲಾವೋಜ್ ಹಾಗೂ ಟಿಬೋರ್ ಅವರುಗಳೊಂದಿಗೆ ಜೂನ್ ೨೫ ರಂದು ಸ್ಪೇಸ್ ‘ಎಕ್ಸ್’ನ ಡ್ರಾö್ಯಗನ್ ಕ್ಯಾಪ್ಸೂಲ್ ಮೂಲಕ ಅಂತರರಾಷ್ಟಿçÃಯ ಬಾಹ್ಯಾಕಾಶಕ್ಕೆ ತೆರಳಿದ್ದರು.

ಕೇಂದ್ರದಲ್ಲಿ ೬೦ಕ್ಕೂ ಅಧಿಕ ವೈಜ್ಞಾನಿಕ ಹಾಗೂ ಔಷಧೀಯ ಸಂಶೋಧನೆಗಳನ್ನು ಕೈಗೊಂಡಿದ್ದ ಅವರುಗಳು ತಾ.೧೫ ರಂದು (ಇಂದು) ಡ್ರ‍್ಯಾಗನ್ ನೌಕೆಯ ಮೂಲಕವೇ ಧರೆಗೆ ವಾಪಸ್ಸಾಗಲಿದ್ದಾರೆ. ಅಂತರರಾಷ್ಟಿçÃಯ ಕೇಂದ್ರದೊAದಿಗೆ ಹೊಂದಿಕೊAಡಿದ್ದ ೪ ಗಗನಯಾತ್ರಿಕರನ್ನು ಹೊತ್ತ ಈ ಡ್ರಾö್ಯಗನ್ ನೌಕೆಯು ತಾ.೧೪ರ ಸಂಜೆ ಸುಮಾರು ೪:೪೫ಕ್ಕೆ ಕೇಂದ್ರದಿAದ ಬೇರ್ಪಟ್ಟಿತು. ಇಂದು (ತಾ.೧೫) ಮಧ್ಯಾಹ್ನ ೩ ಗಂಟೆವರೆಗೆ ಭೂಮಿಯನ್ನು ಪರಿಭ್ರಮಿಸಲಿರುವ ಈ ನೌಕೆ ನಾಳೆ ಕ್ಯಾಲಿಫೋರ್ನಿಯಾ ಕರಾವಳಿ ಪ್ರದೇಶದ ಸಮುದ್ರದಲ್ಲಿ ಇಳಿಯಲಿದೆ.