ಕಡಂಗ, ಜು. ೧೪: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅಂತಹ ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಟ್ಟು ಆ ಪ್ರತಿಭೆಯನ್ನು ಬೆಳೆಸುವ ನಿಟ್ಟಿನಲ್ಲಿ ೨೦೦೩ರಲ್ಲಿ ಪ್ರಾರಂಭಿಸಿದ ಸಾಹಿತ್ಯೋತ್ಸವ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಪ್ರತಿವರ್ಷವೂ ವೈವಿಧ್ಯಮಯ ಸ್ಪರ್ಧೆಗಳೊಂದಿಗೆ ನಡೆದುಕೊಂಡು ಬರುತ್ತಿರುವ ಸಾಹಿತ್ಯೋತ್ಸವವು ಈ ಬಾರಿ ಸೆಪ್ಟೆಂಬರ್ ತಿಂಗಳ ೧೩ ಮತ್ತು ೧೪ ರಂದು ಕಡಂಗ ತಾಜುಲ್ ಉಲಮಾ ಬದ್ರಿಯಾ ಮಸೀದಿಯ ವಠಾರದಲ್ಲಿನ ನಡೆಯಲಿದೆ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಸುಮಾರು ೮೫ ರಷ್ಟು ಯೂನಿಟ್ಗಳು, ೧೨ ಸೆಕ್ಟರ್ಗಳಲ್ಲಿ ಮತ್ತು ೩ ಡಿವಿಷನ್ಗಳಲ್ಲಿ ಸಾಹಿತ್ಯೋತ್ಸವ ನಡೆಯಲಿದೆ. ಎಸ್.ಎಸ್.ಎಫ್. ಕೊಡಗು ಜಿಲ್ಲಾ ಸಾಹಿತ್ಯೋತ್ಸವದ ಪೋಸ್ಟರ್ ಬಿಡುಗಡೆಯನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ನಾಯಕರಾದ ರಈಸುಲ್ ಉಲಮಾ ಇ ಸುಲೈಮಾನ್ ಮುಸ್ಲಿಯಾರ್, ಇಂಡಿಯನ್ ಗ್ರಾö್ಯಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್, ಬದ್ರುಸ್ಸಾದಾತ್ ಖಲೀಲ್ ತಂಞಳ್ ನೆರವೇರಿಸಿದರು. ಈ ಸಂದರ್ಭ ಎಸ್.ಎಸ್.ಎಫ್. ಕೊಡಗು ಜಿಲ್ಲಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು