ವೀರಾಜಪೇಟೆ, ಜು. ೧೫: ವಿವಿಧ ಸಂಘ-ಸAಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದ ಹಾಗೂ ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತೆ, ಪುರಸಭೆ ಸದಸ್ಯೆ ಬೊವ್ವೇರಿಯಂಡ ಆಶಾ ಸುಬ್ಬಯ್ಯ(೬೦) ಹೃದಯಾಘಾತದಿಂದ ನಿಧನ ಹೊಂದಿದರು.

ವೀರಾಜಪೇಟೆ ಪುರಸಭೆಯ ಹಾಲಿ ಸದಸ್ಯೆಯಾಗಿದ್ದ ಬೊವ್ವೇರಿಯಂಡ ಆಶಾ ಸುಬ್ಬಯ್ಯ, ೨೦೧೮ರಲ್ಲಿ ಚಿಕ್ಕಪೇಟೆ ವಾರ್ಡ್ನಿಂದ ಆಯ್ಕೆಯಾಗಿದ್ದರು. ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆ ವೀರಾಜಪೇಟೆ ಕೊಡವ ಸಮಾಜದ ರುಧ್ರಭೂಮಿಯಲ್ಲಿ ನಡೆಯಿತು. ಇವರು ಪತಿ ಸುಬ್ಬಯ್ಯ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಸಂತಾಪ

ಆಶಾ ಸುಬ್ಬಯ್ಯ ಅವರ ನಿಧನಕ್ಕೆ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ವೀರಾಜಪೇಟೆ ಪೊಮ್ಮಕ್ಕಡ ಒಕ್ಕೂಟ, ಮಹಿಳಾ ಸಮಾಜ, ಪುರಸಭೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಇವರ ನಿಧನಕ್ಕೆ ಸಂತಾಪ ಸೂಚಿಸಿವೆ.