ಸೋಮವಾರಪೇಟೆ, ಜು. ೧೫: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಬಳಸಿದ ಕಾರು ಹಾಗೂ ಬೈಕ್ ಅನ್ನು ಎನ್‌ಐಎ ವಶಪಡಿಸಿಕೊಂಡಿದೆ.

ಆರೋಪಿ ಸೋಮವಾರಪೇಟೆಯ ಕಲ್ಕಂದೂರು ನಿವಾಸಿ ಅಬ್ದುಲ್ ರೆಹಮಾನ್‌ನನ್ನು ಎನ್.ಐ.ಎ. ಅಧಿಕಾರಿಗಳು ಕಳೆದ ವಾರ ಬಂಧಿಸಿದ್ದರು. ಇದೀಗ ಅಬ್ದುಲ್ ರೆಹಮಾನ್‌ಗೆ ಸೇರಿದ ಕಾರು ಹಾಗೂ ಬೈಕ್ ಅನ್ನು ಆರೋಪಿಯ ಸಂಬAಧಿ ಕಲ್ಕಂದೂರಿನ ಜಮಾಲುದ್ದೀನ್ ಎಂಬವರಿAದ ವಶಪಡಿಸಿಕೊಂಡಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆಗೆ ತನ್ನ ಸಹಚರರೊಂದಿಗೆ ಪ್ರಮುಖ ಆರೋಪಿಗಳನ್ನು ಬೆಳ್ತಂಗಡಿಯಿAದ ತಪ್ಪಿಸಿಕೊಂಡು ಬೇರೆ ಕಡೆಗೆ ಸ್ಥಳಾಂತರಿಸಲು ತನ್ನ ಕಾರು ಮತ್ತು ಬೈಕನ್ನು ಉಪಯೋಗಿಸಿ ಸಹಕಾರ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅಬ್ದುಲ್ ರೆಹಮಾನ್ ಉಪಯೋಗಿಸಿದ ಮಾರುತಿ ೮೦೦ ಕಾರು ಹಾಗೂ ಬೈಕನ್ನು ಇಂದು ಎನ್.ಐ.ಎ. ತಂಡ ವಶಕ್ಕೆ ಪಡೆದುಕೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ.