ಮಡಿಕೇರಿ, ಜು. ೧೫: ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಶ್ರೀ ಮಾರಮ್ಮ ದೇವರ ವಾರ್ಷಿಕ ಉತ್ಸವ ಮಾರಿಗುಡಿ ನಮ್ಮೆ ತಾ. ೧೬ರಂದು ಹಾಗೂ ತಾ. ೨೨ರಂದು ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ, ಶ್ರೀ ಭದ್ರಕಾಳಿ ಹಾಗೂ ಶ್ರೀ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಮ್ಮಟಿರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಪೂರ್ವಿಕರ ಕಾಲದಿಂದಲೂ ಇಲ್ಲಿ ಮಾರಮ್ಮ ದೇವರ ಹಬ್ಬವನ್ನು ಕಕ್ಕಡ ಮಾಸದ ಆರಂಭ ಹಾಗೂ ಎರಡನೇ ವಾರದಲ್ಲಿ ವಿಜೃಂಭಣೆ ಯಿಂದ ಆಚರಿಸಿಕೊಂಡು ಬರಲಾಗು ತ್ತಿದ್ದು, ಊರಿನ ಸುಭಿಕ್ಷೆಗಾಗಿ ತಾಯಿಯನ್ನು ಪ್ರಾರ್ಥಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಮಚ್ಚಿಯಂಡ ಕುಟುಂಬದ ಮುಂದಾಳತ್ವದಲ್ಲಿ ಇಲ್ಲಿನ ಮಾರಿಗುಡಿ ಹಬ್ಬ ನಡೆಯಲ್ಲಿದ್ದು ಮಚ್ಚಿಯಂಡ ಕುಟುಂಬದ ವ್ಯಕ್ತಿಗಳೇ ಇಲ್ಲಿ ಪೂಜಾರಿಗಳಾಗುತ್ತಾರೆ. ತಾ. ೧೬ರಂದು ಬೆಳಿಗ್ಗೆ ೮.೩೦ ಗಂಟೆಯಿAದ ಸಂಜೆ ೪ ಗಂಟೆಯ ತನಕ ದೊಡ್ಡ ಹಬ್ಬ ನಡೆಯಲಿದ್ದು, ತಾ. ೨೨ರಂದು ಬೆಳಿಗ್ಗೆ ೮.೩೦ರಿಂದ ಸಂಜೆ ೩.೩೦ ರ ತನಕ ಎರಡನೆಯ ಹಬ್ಬ ನಡೆಯಲಿದೆ.