ಮಡಿಕೇರಿ, ಜು. ೧೫: ೨೦೨೫-೨೬ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಿಂದ ಪ್ರಥಮ ಬಾರಿಗೆ ಕಾಶಿಯಾತ್ರೆ ಕೈಗೊಂಡ ೩೦ ಸಾವಿರ ಯಾತ್ರಾರ್ಥಿಗಳಿಗೆ ತಲಾ ರೂ. ೫ ಸಾವಿರ ರೂ. ಗಳಂತೆ ಸರಕಾರದ ಮೂಲಕ ಸಹಾಯಧನ ವಿತರಿಸುವ ಯೋಜನೆಯನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಮೂಲಕ ಪ್ರಕಟಿಸಲಾಗಿದೆ. ಈ ಬಗ್ಗೆ ಇಲಾಖೆಯ ಆಯುಕ್ತರ ಕಾರ್ಯಾಲಯದಿಂದ ಅರ್ಜಿ ಆಹ್ವಾನಿಸಲಾಗಿದೆ. ಇದಕ್ಕಾಗಿ ಕೆಲವು ಅರ್ಹತಾ ನಿಯಮಗಳನ್ನು ಪಾಲಿಸಬೇಕಾಗಿದೆ.

ಅರ್ಹತೆಗಳು

ಯಾತ್ರಾರ್ಥಿಗಳು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು. ೧೮ ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಯಾತ್ರಾರ್ಥಿಗಳು ತಮ್ಮ ಆಧಾರ್ ಕಾರ್ಡ್ನ ಎರಡೂ ಕಡೆ (boಣh siಜes) ತಪ್ಪದೇ ಅಪ್‌ಲೋಡ್ ಮಾಡತಕ್ಕದ್ದು. ಚುನಾವಣಾ ಗುರುತಿನ ಚೀಟಿ/ರೇಷನ್ ಕಾರ್ಡ್. ಯಾತ್ರಾರ್ಥಿಗಳು ಕಾಶಿಗೆ ಪ್ರಯಾಣಿಸಿದ ಕುರಿತು ಟಿಕೆಟ್ ಅಪ್‌ಲೋಡ್ ಮಾಡಬೇಕಿದೆ.

ಅರ್ಹ ಯಾತ್ರಾರ್ಥಿಗಳು ತಮ್ಮ ಅರ್ಜಿಯನ್ನು ಆನ್‌ಲೈನ್ ಮೂಲಕವೇ ಸೇವಾ (hಣಣಠಿs://sevಚಿsiಟಿಜhuseಡಿviಛಿes. ಞಚಿಡಿಟಿಚಿಣಚಿಞಚಿ.gov.iಟಿ) ೧೫.೧೧.೨೦೨೫ ಸಂಜೆ ೦೪ ಗಂಟೆಯೊಳಗೆ ಸಲ್ಲಿಸಬೇಕಾಗಿರುತ್ತದೆ.

ಯಾತ್ರಾರ್ಥಿಗಳು ಸಹಾಯಧನವನ್ನು ಒಂದು ಬಾರಿ ಪಡೆದ ನಂತರದಲ್ಲಿ ಅದೇ ವ್ಯಕ್ತಿಗೆ ಮತ್ತೊಮ್ಮೆ ಅನುದಾನ ನೀಡಲಾಗುವುದಿಲ್ಲ. ಈ ಬಗ್ಗೆ ಯಾತ್ರಾರ್ಥಿಗಳು ರೂ.೧೦೦/-ಗಳ ಛಾಪಾ ಕಾಗದ (ಇ-Sಣಚಿmಠಿ Pಚಿಠಿeಡಿ)ದಲ್ಲಿ ಈ ಹಿಂದೆ ಸಹಾಯಧನವನ್ನು ಪಡೆದಿಲ್ಲವೆಂದು ಸ್ವದೃಢೀಕರಿಸಿ ನೋಟರಿ ಮೊಹರು ಮತ್ತು ಸಹಿಯೊಂದಿಗೆ ದೃಢೀಕರಣವನ್ನು ಅಪ್ ಲೋಡ್ ಮಾಡಬೇಕು.

ಕಾಶಿಯಾತ್ರೆ ಕೈಗೊಂಡಿರುವುದನ್ನು ದೃಢೀಕರಿಸುವ ಸಲುವಾಗಿ ಕಾಶಿ ವಿಶ್ವನಾಥಸ್ವಾಮಿ ದೇವಾಲಯದ ಮುಂಬದಿಯಲ್ಲಿ ಯಾತ್ರಾರ್ಥಿಗಳ ಛಾಯಚಿತ್ರ (Phoಣo)/ಉPS ಟoಛಿಚಿಣioಟಿ ಹೊಂದಿರುವ ಛಾಯಾಚಿತ್ರವನ್ನು ಮೊಬೈಲ್‌ನಲ್ಲಿ ತೆಗೆದು ಆಪ್ ಲೋಡ್ ಮಾಡಬೇಕು.

ಯಾತ್ರಾರ್ಥಿಯು ಅರ್ಜಿ ಸಲ್ಲಿಸುವ ಮುನ್ನ ಅವರ ಬ್ಯಾಂಕ್ ಖಾತೆಯು ಚಾಲ್ತಿಯಲ್ಲಿರಬೇಕು, ಸದರಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ತಪ್ಪದೇ Seeಜ ಹಾಗೂ ಓPಅI ಂಛಿಣive ಮಾಡಿಸಿರತಕ್ಕದ್ದು. (ಸರ್ಕಾರದ ಮಾರ್ಗಸೂಚಿಯನ್ವಯ ಆಯಾಯಾ ವರ್ಷದ ಅನುದಾನವನ್ನು ಆಯಾಯಾ ವರ್ಷ ಪಾವತಿಸಲು ಅವಕಾಶವಿರುವುದರಿಂದ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ತಪ್ಪದೇ Seeಜ ಹಾಗೂ ಓPಅI ಂಛಿಣive ಅನ್ನು ನಿಗದಿತ ದಿನಾಂಕದೊಳಗೆ ಮಾಡಿಸದಿದ್ದಲ್ಲಿ ತಾವೇ ನೇರ ಜವಾಬ್ದಾರರು) ಅವಧಿ ಮುಗಿದ ನಂತರ ಸಹಾಯಧನ ಕೋರಿ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ವಿವರಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ hಣಣಠಿs://iಣms.ಞಚಿಡಿ.ಟಿiಛಿ.iಟಿನಲ್ಲಿ ಪಡೆದುಕೊಳ್ಳಬಹುದಾಗಿದೆ.