ವೀರಾಜಪೇಟೆ, ಜು. ೧೫: ಹಿಮಾಲಯ ಪರ್ವತದಲ್ಲಿ ಪವಿತ್ರವಾದ ನಾಲ್ಕು ನದಿಗಳು ಹುಟ್ಟಿ ಹರಿಯುತ್ತಿರುವ ಉತ್ತರಖಂಡ ಕ್ಷೇತ್ರ ಯತ್ರಾರ್ಥಿಗಳಿಗೆ ಪುಣ್ಯ ಕ್ಷೇತ್ರವಾಗಿದೆ ಎಂದು ವೀರಾಜಪೇಟೆಯ ವೈದ್ಯರು, ಪಕ್ಷಿ ತಜ್ಞರಾದ ಡಾ.ಎಸ್.ವಿ. ನರಸಿಂಹನ್ ಹೇಳಿದರು.
ವೀರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜೇAದ್ರ ಭವನದಲ್ಲಿ ನಡೆದ ಹೊಂಬೆಳಕು ಕಿರಣ ೨೩೩ ಮಾಸಿಕ ತತ್ವ ಚಿಂತನಾಗೋಷ್ಠಿ ಕಾರ್ಯಕ್ರಮದಲ್ಲಿ ‘ಚಾರ್‌ಧಾಮ್ ಯಾತ್ರೆ' ಹಿಮಾಲಯ ಚಾರಣದ ರೋಮಾಂಚಕ ಅನುಭವ' ಎಂಬ ವಿಷಯದ ಬಗ್ಗೆ ತಮ್ಮ ಉಪನ್ಯಾಸದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಉತ್ತರಖಂಡದಲ್ಲಿ ಹರಿಯುತ್ತಿರುವ ಯಮುನಾ ನದಿ, ಗಂಗಾನದಿ, ಮಂದಾಕಿನಿ ಮತ್ತು ಅಲಕನಂದ ಭಾಗಿರತಿ ಎಂಬ ಪುಣ್ಯ ನದಿಗಳು ಪರ್ವತದಲ್ಲಿ ಹುಟ್ಟಿ ಹರಿಯುತ್ತಿವೆ, ಅಂದು ೧೨ ವರ್ಷದ ಚಿಕ್ಕ ವಯಸ್ಸಿನಲ್ಲಿಯೇ ಭಗವನ್ ಶಂಕರಚಾರ್ಯರು ಅಲ್ಲಿ ಭೇಟಿ ನೀಡಿ ಶಕ್ತಿ ಶಾರದ ನಾಲ್ಕು ಪೀಠಗಳನ್ನು ಸ್ಥಾಪನೆ ಮಾಡಿರುವುದು ಮತ್ತು ದೇವಾಲಯಗಳಾದ ಕೇದಾರನಾಥ, ಗಂಗೋತ್ರಿ, ಭದರಿನಾಥ, ಯಮುನೋತ್ರಿ ಎಂಬ ದೇವಾಲಯಗಳನ್ನು ೧೨ ಸಾವಿರ ವರ್ಷದ ಹಿಂದೆ ಪಾಂಡವರು ಸ್ಥಾಪನೆ ಮಾಡಿರುವುದು ಉಲ್ಲೇಖದಲ್ಲಿದೆ. ಈಗ ಅದೇ ಜಾಗದಲ್ಲಿ ಸುಮಾರು ೩೫ ಕ್ಷೇತ್ರಗಳು ಪ್ರಾಮುಖ್ಯತೆ ಪಡೆದಿವೆ ಎಂದು ತಿಳಿಸಿದ ಡಾ. ನರಸಿಂಹನ್ ಅವರು ಚಾರ್‌ಧಾಮ್ ಯಾತ್ರೆಯಲ್ಲಿ ಏಪ್ರಿಲ್ ಕೊನೆ ವಾರದಿಂದ ಸೆಪ್ಟೆಂಬರ್ ತಿಂಗಳ ಕೊನೆಯ ವಾರದವರೆಗೂ ಪ್ರತಿದಿನ ಲಕ್ಷಕ್ಕೂ ಹೆಚ್ಚು ಯಾತ್ರಿಗರು ಬಂದು ಹೋಗುತ್ತಾರೆ. ವರ್ಷದಲ್ಲಿ ಆರು ತಿಂಗಳು ಮಾತ್ರ ಈ ಪುಣ್ಯ ಕ್ಷೇತ್ರಕ್ಕೆ ಪ್ರವೇಶ ಇರುವುದಾಗಿ ಪ್ರಾತ್ಯಕ್ಷಿಕೆ ಮೂಲಕ [ಸಾಕ್ಷಚಿತ್ರವನ್ನು] ತೋರಿಸಿದರು.
ಮೊದಲಿಗೆ ಕಾರ್ಯಕ್ರಮ ಉದ್ಘಾಟಿಸಿದ ಗೋಣಿಕೊಪ್ಪಲು ವಿವೇಕಾನಂದ ಆರೋಗ್ಯ ಕೇಂದ್ರದ ಡಾ. ಕೆ.ಎನ್. ಚಂದ್ರಶೇಖರ್ ಅವರು ಮಾತನಾಡಿ ಸಮಾಜದಲ್ಲಿ ಸಿಗುವಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಭಾರತ ದೇಶದ ಏಳಿಗೆಗೆ ಮುಂದಾಗಬೇಕು. ಉತ್ತಮವಾದ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಬೇಕು ಎಂದರು.
ಹೊAಬೆಳಕು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಅರಮೇರಿ ಕಳಂಚೇರಿ ಶ್ರೀಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ ಪುಣ್ಯ ಕ್ಷೇತ್ರಗಳ ಯಾತ್ರೆಗಳು ಮನುಷ್ಯನಿಗೆ ಜೀವನದಲ್ಲಿ ಉತ್ತಮವಾದ ಅನುಭವ ದೊರಕಿದಂತಾಗುತ್ತದೆ. ಹಿಮಾಲಯ ಪರ್ವತವನ್ನು ಇನ್ನೂ ಕೂಡ ಅಧ್ಯಯನ ಮಾಡಲು ಸಾಧ್ಯವಾಗಿಲ್ಲ. ಅಲ್ಲಿನ ದೇವಾಲಯಗಳಿಗೆ ೫ ಸಾವಿರದ ೫೦೦ ವರ್ಷಗಳ ಇತಹಾಸವಿದ್ದು ದೇವಾಲಯಗಳ, ಪುಣ್ಯ ನದಿಗಳ ಕ್ಷೇತ್ರವಾಗಿದೆ ಎಂದು ನುಡಿದರು.
ಗೋಣಿಕೊಪ್ಪದ ಕಾಳಿಮಾಡ ಡಾ. ಶಿವಪ್ಪ ಅವರಿಂದ ಗೀತ ಗಾಯನ ನಡೆಯಿತು. ವಿದ್ಯಾರ್ಥಿಗಳಾದ ಜ್ಞಾನಲಕ್ಷಿö್ಮÃ, ಕೆ.ಬಿ. ಇಂಪನ, ಸುಶ್ಮಿತಾ ಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು.