ವೀರಾಜಪೇಟೆ, ಜು. ೧೫: ಒಕ್ಕಲಿಗರ ಯುವ ವೇದಿಕೆ ದಕ್ಷಿಣ ಕೊಡಗು ಮತ್ತು ಕಣ್ಣಂಗಾಲ ಗ್ರಾಮದ ಒಕ್ಕಲಿಗ ಸಮಾಜದ ಸಹಯೋಗದಲ್ಲಿ ಕೆಂಪೇಗೌಡ ಜಯಂತಿಯ ಪ್ರಯುಕ್ತ ಒಕ್ಕಲಿಗ ಸಮಾಜ ಬಾಂಧವರಿಗೆ ಕೆಸರುಗದ್ದೆ ಕ್ರೀಡಾಕೂಟ ಕಣ್ಣಂಗಾಲ ಗ್ರಾಮದಲ್ಲಿ ನಡೆಯಿತು.

ಕ್ರೀಡಾಕೂಟ ಆರಂಭದಲ್ಲಿ ಕೆಂಪೇಗೌಡ ಅವರ ಭಾವಚಿತ್ರ ಸಮೇತ ಒಂಟಿಯAಗಡಿಯಿAದ ಸುಮಾರು ಒಂದು ಕಿ.ಮೀ. ದೂರದಲ್ಲಿರುವ ತೋಪಮ್ಮ ಅವರ ಗದ್ದೆಗೆ ಜನಾಂಗದ ಮಹಿಳೆಯರು ಹಾಗೂ ಪುರುಷರು ಮೆರವಣಿಗೆಯಲ್ಲಿ ನಡೆದು ನಂತರ ಕೆಂಪೇಗೌಡ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಬಳಿಕ ನಡೆದ ಕ್ರೀಡಾಕೂಟದಲ್ಲಿ ಪುರುಷರ ವಾಲಿಬಾಲ್ ಆಟವನ್ನು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಅಧಿಕಾರಿ ಲತಾ ಉದ್ಘಾಟಿಸಿದರೆ, ಮಹಿಳೆಯರ ಥ್ರೋಬಾಲ್ ಪಂದ್ಯಾಟವನ್ನು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಹರಪಳ್ಳಿ ರವೀಂದ್ರ ಅವರು ಒಕ್ಕಲಿಗರು ಸೋಮವಾರಪೇಟೆ ಭಾಗದಲ್ಲಿ ಜಾಸ್ತಿ ಜನಸಂಖ್ಯೆ ಇದ್ದರೂ ಈ ರೀತಿಯ ಕಾರ್ಯಕ್ರಮ ಮಾಡಲು ಮುಂದೆ ಬರುತ್ತಿಲ್ಲ. ವೀರಾಜಪೇಟೆ ಭಾಗದಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದಾರೆ. ನಾಲ್ಕು ವರ್ಷಗಳಿಂದ ನಿರಂತರವಾಗಿ ಕೆಸರು ಗದ್ದೆಯಲ್ಲಿ ಕ್ರೀಡಾಕೂಟ ಉತ್ತಮ ರೀತಿಯಲ್ಲಿ ನಡೆಸುತ್ತಿದ್ದಾರೆ, ಜನಾಂಗದ ಸದಸ್ಯರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ಲೋಕಾಯುಕ್ತ ಪೊಲೀಸ್ ಉಪ ಅಧೀಕ್ಷಕ ಸುನಿಲ್ ಕುಮಾರ್ ಮಾತನಾಡಿ, ಈ ರೀತಿಯ ಕ್ರೀಡೆಗಳಿಂದ ಮನುಷ್ಯನ ದೇಹಕ್ಕೆ ವ್ಯಾಯಾಮ, ಮನಸ್ಸಿಗೆ ಶಾಂತಿ ದೊರೆಯುತ್ತದೆ. ಮನುಷ್ಯನ ಆಹಾರ ಪದ್ಧತಿ ಪರಿವರ್ತನೆಯಾಗಬೇಕಾಗಿದೆ. ಆಹಾರದಲ್ಲಿ ಮಿತವಿರಲಿ, ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಿ ಎಂದು ಸಲಹೆಯಿತ್ತರು.

ಆನಂದಪುರದ ಟಾಟಾ ಕಾಫಿ ತೋಟದ ವ್ಯವಸ್ಥಾಪಕ ವಿನಯ್ ಮಾತನಾಡಿ, ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಯಲ್ಲಿ ಉತ್ತಮ ರೀತಿಯಲ್ಲಿ ಚಿಕಿತ್ಸೆ ಸಿಗುತ್ತದೆ. ಅಲ್ಲದೆ ನಮ್ಮ ಜನಾಂಗದ ಅನೇಕ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ತೆರಳುತ್ತಾರೆ. ಆ ಸಮಯದಲ್ಲಿ ನಮ್ಮ ಜನಾಂಗದ ಸದಸ್ಯರು ಅವರಿಗೆ ಪರಸ್ಪರ ಸಹಕಾರ ನೀಡಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ವಿ.ಪಿ ಡಾಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಚಾಮರಾಜನಗರ ನಗರದ ಸರಕಾರಿ ಎಂ. ಸಂಗಶೆಟ್ಟಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ಶಿವಪ್ರಕಾಶ್, ಹಾರಂಗಿ ಜಲಾಶಯದ ನೀರಾವರಿ ಸಲಹಾ ಸಮಿತಿ ಸದಸ್ಯ ಕೆ.ಎಸ್. ಗೋಪಾಲಕೃಷ್ಣ ಮಾತನಾಡಿದರು.

ಸಮಾರೋಪ ಸಮಾರಂಭದಲ್ಲಿ ವಿವಿಧ ಪಂದ್ಯಾಟಗಳಲ್ಲಿ ಜಯಗೊಂಡ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಹಗ್ಗಜಗ್ಗಾಟದಲ್ಲಿ ಮಹಿಳಾ ವಿಭಾಗದಲ್ಲಿ ಕಣ್ಣಂಗಾಲ ಪ್ರಥಮ, ಹಾತೂರು ದ್ವಿತೀಯ, ಪುರುಷರ ಹಗ್ಗಜಗ್ಗಾಟದಲ್ಲಿ ಕೋತೂರು ಪ್ರಥಮ, ಹಾತೂರು ದ್ವಿತೀಯ, ಮಹಿಳೆಯರ ಥ್ರೋಬಾಲ್‌ನಲ್ಲಿ ಕೋಟೆಕೊಪ್ಪ ಪ್ರಥಮ, ಕಣ್ಣಂಗಾಲ ದ್ವಿತೀಯ, ವಾಲಿಬಾಲ್‌ನಲ್ಲಿ ಕೋಟೆಕೊಪ್ಪ ಪ್ರಥಮ, ಕಣ್ಣಂಗಾಲ ದ್ವಿತೀಯ ಸ್ಥಾನ ಪಡೆಯಿತು.

ವೇದಿಕೆಯಲ್ಲಿ ಬೈರಂಬಾಡ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬಿ.ಎಲ್. ಆನಂದ್, ಕಣ್ಣಂಗಾಲದ ಕಾಫಿ ಬೆಳೆಗಾರ ವಿ.ಕೆ. ನಾಗರಾಜ್, ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿ.ಸಿ. ತಮ್ಮಯ್ಯ, ಕಣ್ಣಂಗಾಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುರುಶ್ರೀ, ಉಷಾ ಪ್ರೀತಂ, ಯುವ ವೇದಿಕೆಯ ಕೆ.ಪಿ. ಅಜಿತ್, ವಿ.ಪಿ. ಜೀವನ, ನವೀನ, ಅಲೋಕ್, ಆನಂದ್, ರಾಖಿ, ಸೀನಾ, ಸಂಪತ್, ಕಿರಣ, ನಾಗರಾಜ್ ಸೇರಿದಂತೆ ಹಲವರಿದ್ದರು. ಕ್ರೀಡಾಕೂಟದಲ್ಲಿ ಆಡಳಿತ ಮಂಡಳಿಯ ಸದಸ್ಯರು ಮತ್ತು ಜನಾಂಗದ ಮುಖಂಡರು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.