ಕ್ಯಾಲಿಫೋರ್ನಿಯಾ, ಜು. ೧೫: ೧೮ ದಿನಗಳ ಕಾಲ ಅಂತರರಾಷ್ಟಿçÃಯ ಅಂತರಿಕ್ಷ ಕೇಂದ್ರದಲ್ಲಿ ತಂಗಿ ೬೦ಕ್ಕೂ ಅಧಿಕ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಿದ, ಕೇಂದ್ರಕ್ಕೆ ತೆರಳಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರವಾದ ಗ್ರೂಪ್ ಕ್ಯಾಪ್ಟನ್ ಹಾಗೂ ಇಸ್ರೋ ಗಗನಯಾತ್ರಿ ಶುಭಾಂಶು ಶುಕ್ಲ ಅವರು ಇಂದು ಸುರಕ್ಷಿತವಾಗಿ ಭೂ-ಸ್ಪರ್ಶ ಮಾಡಿದರು. ನಿನ್ನೆ ಅಂತರರಾಷ್ಟಿçÃಯ ಬಾಹ್ಯಾಕಾಶ ಕೇಂದ್ರದಿAದ ಬೇರ್ಪಟ್ಟಿದ್ದ ಆಕ್ಸಿಯಂ-೪ ಬಾಹ್ಯಾಕಾಶಯಾನ ಯೋಜನೆಯ ಭಾಗವಾಗಿದ್ದ ಹಾಗೂ ೪ ಗಗನಯಾತ್ರಿಕರನ್ನು ಹೊತ್ತ ‘ಗ್ರೇಸ್’ ಹೆಸರಿನ ಸ್ಪೇಸ್-ಎಕ್ಸ್ ಡ್ರಾö್ಯಗನ್ ನೌಕೆಯು ೧ ದಿನಗಳ ಕಾಲ ಭೂಮಿಯನ್ನು ಪರಿಭ್ರಮಿಸಿ ತನ್ನ ವೇಗವನ್ನು ಕಡಿತಗೊಳಿಸಿತ್ತು. ಇಂದು ಯು.ಎಸ್.ಎ ಪಶ್ಚಿಮ ಭಾಗದ ಕ್ಯಾಲಿಫೋರ್ನಿಯಾ ರಾಜ್ಯದ ಕಡಲತೀರದಲ್ಲಿ ಈ ನೌಕೆಯು ಪ್ಯಾರಶೂಟ್‌ಗಳ ಸಹಕಾರದಲ್ಲಿ ಮುಂಜಾನೆ ೨:೩೦ಕ್ಕೆ (ಭಾರತೀಯ ಸಮಯ ಮಧ್ಯಾಹ್ನ ೩ ಗಂಟೆ) ಬಂದಿಳಿಯಿತು. ಈ ಸಂದರ್ಭ ನೌಕೆಯ ವೇಗ ಅಂದಾಜು ಗಂಟೆಗೆ ೨೫ ಕಿ.ಮೀ ನಷ್ಟಿತ್ತು. ನಂತರ ನಾಸಾ, ಸ್ಪೇಸ್ ಎಕ್ಸ್ ರಕ್ಷಣಾ ಸಿಬ್ಬಂದಿಗಳು ಈ ನೌಕೆಯನ್ನು ಸುರಕ್ಷಿತವಾಗಿ ಹಡಗಿನಲ್ಲಿರಿಸಿದರು.
ಆಕ್ಸಿಯಂ-೪ ಯೋಜನೆಯ ಭಾಗವಾಗಿದ್ದ ನಾಸಾ ಗಗನಯಾತ್ರಿಯಾಗಿರುವ ಕಮಾಂಡರ್ ಪೆಗ್ಗಿ, ನಂತರ ಪೈಲೆಟ್ ಶುಭಾಂಶು, ಯೂರೋಪ್ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿಗಳಾದ ಸ್ಲಾವೋಜ್ ಹಾಗೂ ಟಿಬೋರ್ ಅವರುಗಳು ಸುರಕ್ಷಿತವಾಗಿ ನೌಕೆಯಿಂದ ಹೊರಕ್ಕೆ ಬಂದರು. ಮುಂಜಾಗ್ರತಾ ಕ್ರಮವಾಗಿ ಈ ೪ ಗಗನಯಾತ್ರಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಲಿದ್ದು, ಕೆಲವು ದಿನಗಳ ಕಾಲ ‘ಕ್ವಾರೆಂಟೈನ್’ ಕೇಂದ್ರದಲ್ಲಿರಿಸಲಾಗುವುದು. ಇಲ್ಲಿ ಅವರುಗಳು ಭೂಮಿಯ ಗುರುತ್ವಾಕರ್ಷಣೆಗೆ ಒಗ್ಗೂಡುವ ಪ್ರಯತ್ನ ಮಾಡಲಿದ್ದಾರೆ.
ಶುಭಾಂಶು ಸೇರಿದಂತೆ ಇತರ ೩ ಗಗನಯಾತ್ರಿಕರು ಅಂತರರಾಷ್ಟಿçÃಯ ಬಾಹ್ಯಾಕಾಶ ಕೇಂದ್ರದಲ್ಲಿದ್ದಾಗ, ಕೇಂದ್ರವು ಭೂಮಿಯನ್ನು ೩೨೨ ಬಾರಿ ಪರಿಭ್ರಮಿಸಿ ೧.೩೯ ಕೋಟಿ ಕಿ.ಮೀ ಕ್ರಮಿಸಿರುವುದು ವಿಶೇಷ.
ಶುಭಾಂಶು ಅವರ ಈ ಸಾಧನೆ ಕೋಟ್ಯಂತರ ಭಾರತೀಯರಲ್ಲಿ ಹರ್ಷ ತುಂಬಿಸಿದೆ. ಮುಂದೆ ಇಸ್ರೋ ಕೈಗೊಳ್ಳಲಿರುವ ಗಗನಯಾನ ಯೋಜನೆಗೆ ಈ ಯೋಜನೆಯ ಮೂಲಕ ದೊರೆತ ಜ್ಞಾನ ಸಹಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊAಡಿದ್ದಾರೆ.