ಗೋಣಿಕೊಪ್ಪಲು, ಜು. ೧೫: ದಕ್ಷಿಣ ಕೊಡಗಿನ ವಿವಿಧ ಭಾಗಗಳಲ್ಲಿ ಭೀತಿ ಹುಟ್ಟಿಸಿರುವ ಹುಲಿ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.
ವ್ಯಾಘ್ರ ಹೆಜ್ಜೆ ಜಾಡು ಹಿಡಿದು ಕಾರ್ಯಾಚರಣೆ ಕೈಗೊಂಡಿರುವ ತಂಡ ದಕ್ಷಿಣ ಕೊಡಗಿನ ಹುದಿಕೇರಿಯ ಸುತ್ತಮುತ್ತಲಿನ ದೇವರಕಾಡು, ತೋಟ, ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದೆ. ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಶಂಕರ್ ಮುಂದಾ ಳತ್ವದಲ್ಲಿ ಕಾರ್ಯಾಚರಣೆಗಿಳಿದಿರುವ ಅರಣ್ಯ ಸಿಬ್ಬಂದಿ ವರ್ಗ ಮಳೆಯ ನಡುವೆ ಕೂಂಬಿAಗ್ ನಡೆಸುತ್ತಿದೆ.
ಕೆಲ ವರ್ಷಗಳಿಂದ ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗದಲ್ಲಿ ಹುಲಿ ಸಂಚಾರ ಅಧಿಕವಾಗಿ ಕಂಡು ಬಂದಿದ್ದು, ಜಾನುವಾರುಗಳ ಮೇಲೆ ದಾಳಿಗೈದು ಕೊಂದು ಹಾಕಿರುವ ಪ್ರಕರಣವೂ ನಡೆದಿದೆ. ಜೊತೆಗೆ ಮನುಷ್ಯರ ಮೇಲೂ ದಾಳಿಗೈದಿರುವ ಘಟನೆಯೂ ನಡೆದಿದೆ. ದಕ್ಷಿಣ ಕೊಡಗಿನ ಹಲವು ಗ್ರಾಮಗಳಲ್ಲಿ ಕಾಡಾನೆಯೊಂದಿಗೆ ಹುಲಿ ಆತಂಕವೂ ಸೃಷ್ಟಿಯಾಗಿದ್ದು, ಓಡಾ ಟಕ್ಕೂ ಭಯ ಪಡುವಂತಹ ಸಂದಿಗ್ದ ಪರಿಸ್ಥಿತಿ ನಿರ್ಮಾಣವಾಗಿದೆ. ವನ್ಯಜೀವಿ ಉಪಟಳದಿಂದ ಕೃಷಿ ಚಟುವಟಿಕೆ, ಜನಜೀವನದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ.
ನಿರಂತರ ಹುಲಿಯ ಉಪಟಳವನ್ನು ಗಂಭೀರವಾಗಿ ಪರಿಗಣಿಸಿರುವ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣನವರು ೪ ಹುಲಿಗಳ ಸೆರೆಗೆ ಈಗಾಗಲೇ ಆದೇಶವನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಹುಲಿ ತನ್ನ ಹೆಜ್ಜೆ ಬದಲಿ ಸುತ್ತಿರುವ ಕಾರಣ ಕಾರ್ಯಾಚರಣೆ ತಂಡದ ಕಣ್ಣಿಗೂ ಬೀಳುತ್ತಿಲ್ಲ.
ಹುದಿಕೇರಿಯ ಸುತ್ತಮುತ್ತಲಿನ ದೇವರಕಾಡು ಹಾಗೂ ರೈತರ ತೋಟದಲ್ಲಿ ಹುಲಿಯ ಸಂಚಾರ ಇರುವುದನ್ನು ಖಚಿತಪಡಿಸಿಕೊಂಡ ಕಾರ್ಯಾಚರಣೆ ತಂಡ ಮುಂಜಾನೆಯಿAದಲೇ ಹುಲಿಯ ಹೆಜ್ಜೆಯ ಜಾಡು ಹಿಡಿದು ಕಾರ್ಯಾಚರಣೆ ಆರಂಭಿಸಿತು. ಸಂಜೆಯ ತನಕ ಕೂಂಬಿAಗ್ ಕಾರ್ಯಾಚರಣೆ ನಡೆಯಿತಾದರೂ ಎಲ್ಲಿಯೂ ಕೂಡ ಹುಲಿಯ ಬಗ್ಗೆ ಸುಳಿವು ಲಭ್ಯವಾಗಿಲ್ಲ.
-ಹೆಚ್.ಕೆ. ಜಗದೀಶ್