ಶ್ರೀಮಂಗಲ, ಜು. ೧೬: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗರಕೇರಿ, ಬಿರುನಾಣಿ, ಪರಕಟಗೇರಿ, ಕಳಕೂರು ಗ್ರಾಮದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕಟ್ಟುವ ಕಾರ್ಯಾಚರಣೆ ತಾ. ೧೭ ರಂದು (ಇಂದು) ಪೂರ್ವಾಹ್ನ ೧೦.೩೦ ಗಂಟೆಯಿAದ ಸಂಜೆ ೬ ಗಂಟೆವರೆಗೆ ಹಮ್ಮಿ ಕೊಳ್ಳಲಾಗಿದೆ. ಗ್ರಾಮಸ್ಥರು, ಕಾರ್ಮಿಕರು, ಬೆಳೆಗಾರರು, ತೋಟದ ಕೆಲಸವನ್ನು ಸ್ಥಗಿತಗೊಳಿಸಿ ಶಾಲಾ ಮಕ್ಕಳ ಬಗ್ಗೆಯೂ ಪೋಷಕರು ಎಚ್ಚರವಹಿಸಿ ಸಹಕಾರ ನೀಡುವಂತೆ ಶ್ರೀಮಂಗಲ ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿ ಅರವಿಂದ್ ಎಸ್. ಎಲ್. ಪ್ರಕಟಣೆಯಲ್ಲಿ ಕೋರಿದ್ದಾರೆ. ಕಾಡಾನೆಗಳು ತೋಟದಲ್ಲಿರುವ ಮಾಹಿತಿ ಇದ್ದಲ್ಲಿ ಮೊ: ೯೬೨೦೯೬೩೯೦೯ ಸಂಖ್ಯೆಯನ್ನು ಸಂಪರ್ಕಿಸುವAತೆ ತಿಳಿಸಿದ್ದಾರೆ.