ಕಡAಗ, ಜು. ೧೭: ಕಡಂಗ ಸಮೀಪದ ಕೋಡಿರ ಗೆದ್ದೆಯಲ್ಲಿ ಕಡಂಗ ಯೂತ್ ಕ್ಲಬ್ ವತಿಯಿಂದ ನಡೆದ ಮೊದಲನೆಯ ವರ್ಷದ ಕೆಸರುಗದ್ದೆ ಕಾಲ್ಚೆೆಂಡು ಕ್ರೀಡಾಕೂಟವು ಸಂಪೂರ್ಣಗೊAಡಿತು. ಕ್ರೀಡಾಕೂಟದಲ್ಲಿ ೨೨ ತಂಡಗಳು ಪಾಲ್ಗೊಂಡು ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಲಿಂಬ್ರಾ ಫ್ರೆಂಡ್ಸ್ ತಂಡವನ್ನು ೨-೧ ಅಂತರದಲ್ಲಿ ಬುಲೆಟ್ ಫ್ರೆಂಡ್ಸ್ ಕೊಂಡAಗೇರಿ ತಂಡವು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿvÄ. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕುಂಜಿಲ ಬಾಯ್ಸ್ ತಂಡವನ್ನು ೩- ೨ ಅಂತರದಲ್ಲಿ ವೈಕೊಲ್ ತಂಡವು ಮಣಿಸಿ ಫೈನಲಿಗೆ ಲಗ್ಗೆ ಇಟ್ಟಿvÄ.

ರೋಚಕವಾಗಿ ನಡೆದ ಫೈನಲ್ ಪಂದ್ಯಾಟದಲ್ಲಿ ಫೀಲ್ಡಿನ ದ್ವಿತೀಯಾರ್ದದ ಕೊನೆಯ ಸಮಯದಲ್ಲಿ ಕೊಂಡAಗೇರಿ ತಂಡದ ನೈಮರ್ ಸಾಜಿ ಅವರ ಅಮೋಘ ಗೋಲ್ ಗಳಿಕೆಯಿಂದ ಬುಲೆಟ್ ಫ್ರೆಂಡ್ಸ್ ತಂಡ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು.

ಕ್ರೀಡಾಕೂಟದ ಉತ್ತಮ ಆಟಗಾರ ಪ್ರಶಸ್ತಿಯನ್ನು ನೈಮರ್ ಸಾಜಿ ಕೊಂಡAಗೇರಿ ತÀಮ್ಮದಾಗಿಸಿಕೊಂಡರು. ಉತ್ತಮ ಗೋಲ್ಕೀಪರ್ ಪ್ರಶಸ್ತಿಯನ್ನು ವೈಕೋಲ್ ತಂಡದ ಶಂಸು ಅವರು ತನ್ನದಾಗಿಸಿಕೊಂಡರು.

ಕ್ರೀಡಾಕೂಟದ ಎಮರ್ಜಿಂಗ್ ಪ್ಲೇಯರ್ ಪ್ರಶಸ್ತಿಯನ್ನು ವೈಕೋಲ್ ತಂಡದ ಜಬ್ಬಾರ್ ಪಡೆದÀರು. ಕ್ರೀಡಾಕೂಟದ ತೀರ್ಪುಗಾರರಾಗಿ ಅಝೀಜ್ ಲಿಮ್ರ

ಕಾರ್ಯನಿರ್ವಹಿಸಿದರು. ಕ್ರೀಡಾಕೂಟದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಕ್ರೀಡಾಕೂಟದ ಸಮಾರೋಪ ಸಮಾರಂರ್ಭದs ಅಧ್ಯಕ್ಷತೆಯನ್ನು ಕಡಂಗ ಯೂತ್ ಅಧ್ಯP್ಷÀ ಸಾಕಿರ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ ಅವರು ಭಾಗವಹಿಸಿ ಕ್ರೀಡಾಕೂಟಕ್ಕೆ ಶುಭ ಕೋರಿದರು. ಮತ್ತೊಬ್ಬ ಪತ್ರಕರ್ತ ನೌಫಲ್ ಮಾತನಾಡಿ ಕ್ರೀಡಾಕೂಟದ ಯಶಸ್ಸಿಗೆ ಶಿಸ್ತು ಪ್ರಮುಖ ಪಾತ್ರ ವಹಿಸುತ್ತದೆ ಎಂದು ನುಡಿದರು. ಅತಿಥಿಗಳಾಗಿ ಶಿಯಬ್ ಕೆ.ಯು, ರಾಜಿಕ್ ಎ.ಬಿ.ಆರ್., ರಫೀಕ್ ಅದ್ದು, ಮಮ್ಮ, ಹರ್ಷಾದ್ ದುಬೈ, ಆಯೋಜಕರಾದ ರಾಫಿ, ನಾಫಿ, ಅಜ್ಮಲ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸಹದ್ ಎ.ಎಸ್. ನಿರ್ವಹಿಸಿದರು.