ಸೋಮವಾರಪೇಟೆ, ಜು. ೧೮: ತಾಲೂಕಿನ ಹಿರಿಕರ ಗ್ರಾಮದ ಶ್ರೀ ಮಲ್ಲೇಶ್ವರ ಗ್ರಾಮಾಭಿವೃದ್ಧಿ ಮಂಡಳಿ ಸದಸ್ಯರು ಶ್ರಮದಾನದ ಮೂಲಕ ಗ್ರಾಮಕ್ಕೆ ಸೇರಿದ ಅಡಿಕೆ ತೋಟದ ಕೆಲಸ ಮಾಡಿದರು.

ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎನ್. ವಸಂತ್ ಮಾತನಾಡಿ, ಗ್ರಾಮಕ್ಕೆ ಸೇರಿದ ಭೂಮಿಯಲ್ಲಿ ಈಗಾಗಲೇ ನಾಲ್ಕು ಎಕರೆ ಜಾಗದಲ್ಲಿ ಕಾಫಿ ಮತ್ತು ಕಾಳುಮೆಣಸು ಕೃಷಿ ಮಾಡಿದ್ದೇವೆ. ಫಸಲು ಬರುತ್ತಿದೆ. ಈಗ ಅಡಿಕೆ ತೋಟ ಮಾಡುತ್ತಿದ್ದೇವೆ. ಎಲ್ಲಾ ಕೆಲಸವನ್ನು ಗ್ರಾಮಸ್ಥರು ಸೇರಿಕೊಂಡು ಮಾಡುತ್ತೇವೆ. ಆದಾಯವನ್ನು ಗ್ರಾಮದ ಅಭಿವೃದ್ಧಿಗೆ ಬಳಕೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭ ಕಾರ್ಯದರ್ಶಿ ಎಚ್.ಈ. ದಿನೇಶ್, ಉಪಾಧ್ಯಕ್ಷ ಹೆಚ್.ಈ. ರಮೇಶ್, ಖಚಾಂಚಿ ಜಿ.ಕೆ. ವಿಜಯ ಸೇರಿದಂತೆ ಇತರರು ಇದ್ದರು.