ಕೂಡಿಗೆ, ಜು. ೧೭: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ (ಹುಲುಗುಂದ) ಗ್ರಾಮದಲ್ಲಿರುವ ೨೭೦ ಕುಟುಂಬದವರಿಗೆ ಮೂರು ತಲೆಮಾರು ಕಳೆದರೂ ಸಹ ವಾಸಿಸುತ್ತಿದ್ದ ಜಾಗಕ್ಕೆ ಹಕ್ಕು ಪತ್ರ ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ.
ಹಾರಂಗಿ ಅಣೆಕಟ್ಟೆಯ ಮುಂಭಾಗದ ಎಡ ಭಾಗದ ಒಂದು ಕಿಲೋಮೀಟರ್ ದೂರದಲ್ಲಿರುವ ೨೭೦ ಮನೆಗಳಿಗೆ ಇದುವರೆಗೂ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳು ದೊರೆಯದೆ ವಂಚಿತರಾಗುತ್ತಿದ್ದಾರೆ.
ಹಾರಂಗಿ ಅಣೆಕಟ್ಟೆ ನಿರ್ಮಾಣದ ಸಂದರ್ಭದಲ್ಲಿ ಅಲ್ಲಿನ ಕೆಲಸಗಾರರಿಗೆ ೭೦ ವರ್ಷಗಳ ಹಿಂದೆ ಅಣೆಕಟ್ಟೆಯ ಎದುರು ಇರುವ ಇಲಾಖೆಯ ಜಾಗ ಮತ್ತು ಪೈಸಾರಿ ಜಾಗದಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡು ವಾಸಿಸಲು ಆಗಿನ ನೀರಾವರಿ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದರು. ಅದರಂತೆಯೇ ಕೆಲಸಗಾರರು ಮನೆಗಳನ್ನು ಹಾರಂಗಿಯ ಖಾಲಿ ಜಾಗದಲ್ಲಿ ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ.
೭೦ ವರ್ಷಗಳಿಂದಲೂ ಇಲ್ಲಿ ವಾಸಿಸುತ್ತಿರುವವರಿಗೆ ಗಾಳಿ, ಮಳೆಯಿಂದಾಗಿ ಮನೆ ಹಾನಿಯಾದರೂ ಸರ್ಕಾರದ ಸಹಾಯಧನ ಸಿಗುವುದಿಲ್ಲ. ಪ್ರಮುಖವಾಗಿ ಯಾವುದೇ ಸೌಕರ್ಯಗಳನ್ನು ಪಡೆಯಲು ಮನೆಯ ಹಕ್ಕು ಪತ್ರ ಇಲ್ಲದಾಗಿದೆ.
ಕಳೆದ ಹತ್ತು ವರ್ಷಗಳ ಹಿಂದೆಯೇ ಕೂಡುಮಂಗಳೂರು ಗ್ರಾಮಸ್ಥರು, ಅಲ್ಲಿನ ನೂರಾರು ಕುಟುಂಬದವರು ಜಿಲ್ಲೆಗೆ ಆಗಮಿಸಿದ್ದ ಆಗಿನ ರಾಜ್ಯ ಸರ್ಕಾರದ ಉಪ ಸಭಾಪತಿ ಮತ್ತು ರಾಜ್ಯ ಸರ್ಕಾರದ ಅರ್ಜಿ ಸಮಿತಿಯ ಅಧ್ಯಕ್ಷರಿಗೆ ಮಾಜಿ ಶಾಸಕರ ಮುಖಾಂತರ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ರೀತಿಯ ಪ್ರಯೋಜನ ಆಗಿರುವುದಿಲ್ಲ ಎಂದು ಹಾರಂಗಿಯಲ್ಲಿ ಕಳೆದ ೭೦ ವರ್ಷಗಳಿಂದ ತಮ್ಮ ಕುಟುಂಬದೊAದಿಗೆ ವಾಸಿಸುತ್ತಿರುವ ಮಣಿಕಂಠ, ರಘು ಗಿರೀಶ್, ಚೌಡಪ್ಪ, ಮಾದೇವಸ್ವಾಮಿ ಸೇರಿದಂತೆ ಹಲವು ಮಂದಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನೀರಾವರಿ ಇಲಾಖೆ ಕೂಡ ಸಮರ್ಪಕವಾದ ದಾಖಲೆಗಳನ್ನು ಕಂದಾಯ ಇಲಾಖೆಗೆ ನೀಡದೇ ಇರುವುದರಿಂದಾಗಿ ಇದುವರೆಗೂ ನಾವು ಇರುವ ಜಾಗದ ಹಕ್ಕು ಪತ್ರಗಳು ದೊರಕದಂತೆ ಆಗಿದೆ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ.
ಕಳೆದ ೧೦ ವರ್ಷಗಳಿಂದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪಗಳ ಮತ್ತು ಶುಚಿತ್ವದ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ನೀಡುತ್ತಿದೆ.
ಗಾಳಿ, ಮಳೆಯಿಂದಾಗಿ ಮನೆ ಹಾನಿ ಉಂಟಾದರೆ ಕಂದಾಯ ಇಲಾಖೆಯ ವತಿಯಿಂದ ಯಾವುದೇ ಪರಿಹಾರ ಇಲ್ಲಾದಾಗಿದೆ. ಕಡುಬಡವರು ವಾಸಿಸುವ ಈ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಮನೆ ನಿರ್ಮಿಸಿ ಕೊಡುವ ವ್ಯವಸ್ಥೆಗೂ ಹಿನ್ನಡೆಯಾಗಿದೆ.
ಇದಕ್ಕೆ ಸಂಬAಧಿಸಿದAತೆ ಗ್ರಾಮಸ್ಥರು ಅನೇಕ ಬಾರಿ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರೂ ಇದುವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದರಿಂದಾಗಿ
(ಮೊದಲ ಪುಟದಿಂದ) ಇಲ್ಲಿನ ನಿವಾಸಿಗಳಿಗೆ ತೊಂದರೆ ಆಗುತ್ತಿವೆ. ಇವುಗಳನ್ನು ಸರಿಪಡಿಸುವಂತೆ ಈ ಭಾಗದ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರ ಆಗ್ರಹಿಸಿದ್ದಾರೆ.
ಕಾರ್ಯರೂಪಕ್ಕೆ ಬಂದಿಲ್ಲ..
ಈ ಸಂಬAಧ ಮಾತನಾಡಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಹಾರಂಗಿ (ಹುಲುಗುಂದ) ಗ್ರಾಮದಲ್ಲಿ ಅಂಗನವಾಡಿ, ಹಿರಿಯ ಪ್ರಾಥಮಿಕ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಚೆ ಕಚೇರಿ, ಉಪ ಪೊಲೀಸ್ ಠಾಣೆ, ಪ್ರಸಿದ್ಧ ಆರು ದೇವಾಲಯಗಳು ಮತ್ತು ಸ್ಮಶಾನ ಸೇರಿದಂತೆ ಒಂದು ಗ್ರಾಮಕ್ಕೆ ಬೇಕಾದಂತಹ ಎಲ್ಲಾ ಮೂಲ ಸೌಕರ್ಯಗಳನ್ನು ಹೊಂದಿದೆ. ಆದರೆ ಇಲ್ಲಿನ ಜನ ವಾಸಿಸುವ ಮನೆಗೆ ಹಕ್ಕು ಪತ್ರ ಇಲ್ಲದೆ ಇರುವುದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಹ ಪರಿಸ್ಥಿತಿ ಉಂಟಾಗಿದೆ.
ತಾನು ಸೇರಿದಂತೆ ಪ್ರಕಾಶ್, ರಾಜು, ಮಂಜು, ರಜಾಕ್, ದೇವರಾಜು, ವೆಂಕಟರಮಣ ಒಳಗೊಂಡು ೭ ಜನರ ತಂಡವು ಹಿಂದಿನ ಸರ್ಕಾರದ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿ ಸಮಸ್ಯೆ ಕುರಿತು ಮನವಿ ಸಲ್ಲಿಸಿದ್ದೆವು. ಇದಕ್ಕೆ ಸ್ಪಂದಿಸಿದ ಸಚಿವರು ಆಗಿನ ಜಿಲ್ಲಾಧಿಕಾರಿಯಾಗಿದ್ದ ಶ್ರೀವಿದ್ಯಾ ಅವರಿಗೆ ನೀರಾವರಿ ನಿಗಮದವರಿಗೆ ಅವಶ್ಯಕತೆ ಇಲ್ಲದಿರುವ ಜಾಗವಾಗಿರುವುದರಿಂದ ಜನರು ವಾಸಿಸುತ್ತಿರುವ ಜಾಗವನ್ನು ಕೂಡಲೇ ಕಂದಾಯ ಇಲಾಖೆಗೆ ವರ್ಗಾವಣೆ ಮಾಡಿ ನಂತರ ಗ್ರಾಮಸ್ಥರಿಗೆ ಹಕ್ಕು ಪತ್ರ ನೀಡಲು ಕ್ರಮವಹಿಸುವಂತೆ ಸೂಚಿಸಿದ್ದರು. ಆದರೆ ಅದು ಕೂಡ ಕಾರ್ಯರೂಪಕ್ಕೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈಗಾಗಲೇ ನಮ್ಮ ಗ್ರಾಮಸ್ಥರ ಮನವಿ ರಾಜ್ಯ ಅರ್ಜಿ ಸಮಿತಿಯಲ್ಲಿದ್ದು, ಸರ್ಕಾರ ನಮ್ಮ ಮನವಿಯನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಸ್ಥಳ ಪರಿಶೀಲನೆ ನಡೆಸಿ ಹಕ್ಕು ಪತ್ರ ನೀಡುವ ಕುರಿತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಜಿಲ್ಲಾಧಿಕಾರಿಗಳು ಕುಶಾಲನಗರ ತಾಲೂಕು ತಹಶೀಲ್ದಾರರ ಮುಖೇನ ಸಂಬAಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸಿ ಕಂದಾಯ ಇಲಾಖೆಯ ನಿಯಮಾನುಸಾರ ಹಕ್ಕು ಪತ್ರಗಳನ್ನು ಪಡೆಯಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ. -ಕೆ.ಕೆ. ನಾಗರಾಜಶೆಟ್ಟಿ