ಮಡಿಕೇರಿ, ಜು. ೧೮: ಇದು ಜನಿಸುವ ಮಕ್ಕಳಿಗೆ ಹೆಸರಿಟ್ಟಂತಲ್ಲ... ಹುಟ್ಟುವ ಪ್ರತಿ ಮಗುವಿಗೂ ಹೆಸರು ಇಡಲಾಗುತ್ತದೆ... ಈಗೀಗ ಸಾಕು ಪ್ರಾಣಿ - ಪಕ್ಷಿಗಳಿಗೂ ಪ್ರೀತಿಯಿಂದ ಹೆಸರನ್ನಿಟ್ಟು ಕರೆಯಲಾಗುತ್ತಿರುವುದು ಎಲ್ಲೆಡೆ ಸಾಮಾನ್ಯವಾದದ್ದು...
ಆದರೆ ಕೆಲವೊಂದು ಮೇರು ವ್ಯಕ್ತಿಗಳು - ಸಾಧಕರ ಹೆಸರನ್ನು ಜೀವನದಲ್ಲಿ ಅವರ ಸಾಧನೆಯ ಆಧಾರದಲ್ಲಿ ಕೆಲವು ರಸ್ತೆ, ವೃತ್ತ, ಕ್ರೀಡಾಂಗಣ ಮತ್ತಿತರ ಸಾರ್ವಜನಿಕ ಪ್ರದೇಶಗಳಿಗೆ ನಾಮಕರಣ ಮಾಡುವ ಮೂಲಕ ಇವರುಗಳ ಬದುಕು - ಸಾಧನೆ ಮುಂದಿನ ಯುವ ಪೀಳಿಗೆಗೂ ಪ್ರೇರಣೆಯೊಂದಿಗೆ ಸ್ಫೂರ್ತಿದಾಯಕವಾಗಿರಲಿ ಎಂಬAತೆ ಕ್ರಮ ವಹಿಸುವುದೂ ಒಂದು ರೀತಿಯಲ್ಲಿ ಅಂತಹವರಿಗೆ ಸಮಾಜ ತೋರುವ ಗೌರವವಾಗಿರುತ್ತದೆ.
ಆದರೆ ಈ ರೀತಿಯಲ್ಲಿ ನಾಮಕರಣ ಮಾಡುವ ಮೇರು ವ್ಯಕ್ತಿಗಳು - ಸಾಧಕರ ಹೆಸರು ಸಮರ್ಪಕ ರೀತಿಯಲ್ಲಿ ಬಳಸಲ್ಪಡದೇ ಇರುವುದು ವಿಷಾದಕರವಾಗಿದ್ದು, ಇದು ಪ್ರಶ್ನಾರ್ಹವೂ ಆಗಿದೆ...
ಇದಕ್ಕೆ ಉದಾಹರಣೆ ಎಂಬAತೆ ಕೊಡಗು ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿಯಲ್ಲಿ ಇಂತಹ ಕೆಲವು ವ್ಯಕ್ತಿಗಳ ಹೆಸರಿನ ವೃತ್ತ, ರಸ್ತೆ, ಮೈದಾನಗಳು ಇವೆ... ಆದರೆ ಅಧಿಕೃತ ರೀತಿಯಲ್ಲಿ ನಾಮಕರಣ ಮಾಡಲಾಗಿದ್ದರೂ ಈ ಹೆಸರನ್ನು ಉಲ್ಲೇಖಿಸದೆ ಆ ಸ್ಥಳಗಳ ಹಳೆಯ ಹೆಸರನ್ನೋ ಅಥವಾ ಇನ್ಯಾವದೋ ರೀತಿಯಲ್ಲಿ ಗುರುತಿಸುವಿಕೆ ಮಾಡುವುದು ಎಷ್ಟು ಸರಿ ಎಂಬುದು ಈಗಿನ ಪ್ರಶ್ನೆ...
ಮಡಿಕೇರಿಯಲ್ಲಿ ಸುದರ್ಶನ ವೃತ್ತ ಎಂಬ ಹೆಸರು ಯಾವತ್ತೋ ಬದಲಾಗಿದೆ. ಇಲ್ಲಿಗೆ ಇರುವುದು ವಿಶ್ವ ಖ್ಯಾತಿಯ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತ ಎಂಬ ಹೆಸರು... ಒಂದಷ್ಟು ಮುಂದೆ ಬಂದರೆ ಯಾವುದೋ ಒಂದು ಕಾಲದಲ್ಲಿ ಟೋಲ್ ಸಂಗ್ರಹ ಮಾಡುತ್ತಿದ್ದ ಜಾಗವಾದ ಸ್ಥಳವನ್ನು ಟೋಲ್‌ಗೇಟ್ ಎನ್ನಲಾಗುತ್ತಿದೆ. ಆದರೆ ಇಲ್ಲಿಗೆ ಇರುವ ಈಗಿನ ಅಧಿಕೃತ ಹೆಸರು ಪದ್ಮಭೂಷಣ ಖ್ಯಾತಿಯ ವೀರ ಸೇನಾನಿ ಜನರಲ್ ತಿಮ್ಮಯ್ಯ ವೃತ್ತ ಎಂಬದು... ಅದೇ ರೀತಿಯಲ್ಲಿ ಸಿ.ಎಂ.ಸಿ. ಸರ್ಕಲ್ ಬದಲಾಗಿ ಮೇಜರ್ ಮಂಗೇರಿರ ಮುತ್ತಣ್ಣ ವೃತ್ತ, ಹಳೇ ಬಸ್ ನಿಲ್ದಾಣವಲ್ಲ ಸ್ಕಾ÷್ವಡ್ರನ್ ಲೀಡರ್ ಎ.ಬಿ. ದೇವಯ್ಯ ವೃತ್ತ, ರಾಜಾಸೀಟ್ ರಸ್ತೆಗೆ ಮಹಾತ್ಮಾ ಗಾಂಧಿ ರಸ್ತೆ (ಎಂ.ಜಿ. ರಸ್ತೆ), ಚೌಕಿ ಎಂಬದರ ಬದಲು ಇಂದಿರಾ ಗಾಂಧಿ ವೃತ್ತ, ಈ ರೀತಿಯಾಗಿದೆ.
ಇದಲ್ಲದೆ, ಪಂಜೆ ಮಂಗೇಶರಾಯ ರಸ್ತೆ, ಗುಡ್ಡೆಮನೆ ಅಪ್ಪಯ್ಯ ಗೌಡ ರಸ್ತೆ, ಹರದಾಸ ಅಪ್ಪಚ್ಚ ಕವಿ ರಸ್ತೆ, ಪಂದ್ಯAಡ ಬೆಳ್ಯಪ್ಪ ರಸ್ತೆ, ಕೊಂಗAಡ ಗಣಪತಿ ಬೀದಿ, ಅಪ್ಪಚ್ಚು ರೈಸ್ ಮಿಲ್ ರಸ್ತೆ, ಕನ್ನಂಡ ದೊಡ್ಡಯ್ಯ ವೃತ್ತ ಈ ರೀತಿಯಾಗಿ ಕೆಲವಾರು ಹೆಸರುಗಳು ಅಧಿಕೃತವಾಗಿವೆ. ಆದರೆ ಇವು ಯಾವುದನ್ನೂ ಸೂಕ್ತವಾಗಿ ಬಳಸಲಾಗುತ್ತಿಲ್ಲ...
ಮ್ಯಾನ್ಸ್ ಕಾಂಪೌAಡ್ ಹೆಸರು ಬದಲಾಗಿ ಇದು ಜನರಲ್ ತಿಮ್ಮಯ್ಯ ಕೀಡಾಂಗಣ ಎಂದೂ, ಟರ್ಫ್ ಮೈದಾನದ ಬದಲು ಅದು ಫೀ.ಮಾ. ಕಾರ್ಯಪ್ಪ ಮೈದಾನ ಎಂದೂ ನಾಮಕರಣ ಮಾಡಲಾಗಿದೆ. ಇದೀಗ ಕೈಗಾರಿಕಾ ಬಡಾವಣೆ ರಸ್ತೆಯ ಬದಲು ಇದನ್ನು ಬಿ.ಎಸ್. ಗೋಪಾಲಕೃಷ್ಣ ರಸ್ತೆ ಎಂದೂ ನಾಮಕರಣ ಮಾಡಲಾಗಿದೆ. ಇಂತಹ ಇನ್ನಷ್ಟು ಪ್ರದೇಶ - ಸ್ಥಳಗಳು ಮಡಿಕೇರಿಯಲ್ಲಿವೆ...
ಒಂದು ಸ್ಥಳಕ್ಕೆ ಒಬ್ಬರ ಹೆಸರನ್ನು ನಾಮಕರಣ ಮಾಡುವದೆಂದರೆ ಅದು ಸಾಮಾನ್ಯ ವಿಚಾರವಲ್ಲ. ಅವರು ತಮ್ಮ ಬದುಕಿನಲ್ಲಿ ಮಾಡಿರುವ ಸೇವೆ - ಸಾಧನೆಗಳನ್ನು ಗುರುತಿಸಿ, ಪರಿಗಣಿಸಿ, ಇವರುಗಳ ಹೆಸರನ್ನು ಸಾರ್ವಜನಿಕವಾಗಿ ಇಡಲಾಗುತ್ತದೆ. ಇದು ಮುಂದಿನ ಪೀಳಿಗೆಗೆ ಸೇವೆ - ಸಾಧನೆ ಮಾಡಲು ಸ್ಫೂರ್ತಿದಾಯಕವಲ್ಲವೇ ಎಂಬುದನ್ನು ಜನರು ಅರ್ಥೈಸಿಕೊಳ್ಳಬೇಕು. ಈ ಮೂಲಕ ಅದು ಸಾಧಕರಿಗೆ ನೀಡುವ ಗೌರವವೂ ಆಗಿರುತ್ತದೆ.
ಈ ಬಗ್ಗೆ ಜನರು, ಸಂಘ-ಸAಸ್ಥೆಗಳು, ಸರಕಾರಿ ವ್ಯವಸ್ಥೆ, ಜಿಲ್ಲಾಡಳಿತ ಸೇರಿದಂತೆ ಪ್ರತಿಯೊಬ್ಬರು ತಮ್ಮ ಮನದಾಳದಿಂದ ಚಿಂತನೆ ನಡೆಸಿ ಬದಲಾಗಲಿ. ಹಾಗಾದಲ್ಲಿ ಮಾತ್ರ ಸಾಧನೆ - ಸಾಧಕರಿಗೆ ಗೌರವ ಸೂಚಿಸಿದಂತಾಗುತ್ತದೆ.
- ಕಾಯಪಂಡ ಶಶಿ ಸೋಮಯ್ಯ