ಅರೆಕಾಡು ಅಂಗನವಾಡಿ ಕೇಂದ್ರದಲ್ಲಿ ಎಲ್.ಕೆ.ಜಿ. ಪ್ರಾರಂಭೋತ್ಸವ

ಮಡಿಕೇರಿ: ಅರೆಕಾಡು ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ -ಯುಕೆಜಿ ಪ್ರಾರಂಭೋತ್ಸವ ಕಾರ್ಯಕ್ರಮ ನೆರವೇರಿತು.

ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಹಳ್ಳಿಗಳಲ್ಲಿ ಎಲ್‌ಕೆಜಿ ಇಲ್ಲದಿರುವುದರಿಂದ ಇಂಗ್ಲಿಷ್ ಕಲಿಕೆಗಾಗಿ ಪೋಷಕರು ತಮ್ಮ ಮಕ್ಕಳನ್ನು ದೂರದಲ್ಲಿರುವ ಶಾಲೆಗೆ ವಾಹನಗಳಲ್ಲಿ ಮಕ್ಕಳ ದೈಹಿಕ ಮಾನಸಿಕ ಒತ್ತಡವನ್ನು ಲೆಕ್ಕಿಸದೆ ಕಳಿಸುತ್ತಿದ್ದರು. ಆದರೆ ಇನ್ನು ಮುಂದೆ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ-ಯುಕೆಜಿಯ ವ್ಯಾಸಂಗವನ್ನು ಪಡೆಯಬಹುದಾಗಿದ್ದು ಇದು ಮಕ್ಕಳಿಗೆ ತುಂಬಾ ಅನುಕೂಲವಾಗಲಿದೆ. ಇದರ ಸದುಪಯೋಗ ಎಲ್ಲ ಪಡೆದುಕೊಳ್ಳಬೇಕಾಗಿ ಕೋರಿದರು.

ಅರೆಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಪದ್ಮಾವತಿ ಮಾತನಾಡಿ, ಶಾಲೆಯಲ್ಲಿ ಕನ್ನಡ ಮಾಧ್ಯಮದ ಜೊತೆ ಆಂಗ್ಲ ಭಾಷಾ ಬೋಧನೆ "ದ್ವಿಭಾಷಾ ಬೋಧನ" ಪ್ರಾರಂಭವಾಗಿದ್ದು ಅದರ ಸದುಪಯೋಗ ಪಡೆಯಲು ತಿಳಿಸಿದರು. ಸಮುದಾಯ ಆರೋಗ್ಯ ಅಧಿಕಾರಿ ಪುಷ್ಪ ಬಡಿಗೇರ್ ಅವರು ಅತಿಸಾರ ಬೇಧಿ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳು, ಓಆರ್‌ಎಸ್ ಬಗ್ಗೆ, ವಿಶ್ವ ಜನಸಂಖ್ಯಾ ದಿನಾಚರಣೆಯ ಬಗ್ಗೆ ಮಾಹಿತಿ ನೀಡಿದರು.

ಅರೆಕಾಡು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಯೂಸುಫ್, ಉಷಾ ತಂಗಮ್ಮ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ತೇಜಸ್, ಆಶಾ ಕಾರ್ಯಕರ್ತೆಯರಾದ ಸಾಜಿದ, ಕವಿತಾ, ಅಂಗನವಾಡಿ ಕಾರ್ಯಕರ್ತೆಯರಾದ ಹರಿಣಾಕ್ಷಿ, ಸವಿತಾ, ಪಾರ್ವತಿ, ಭವಾನಿ, ಲತಾ, ನಳಿನಿ, ಸಹಾಯಕಿ ರಮ್ಯ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಸ್ವಾಗತವನ್ನು ಅರೆಕಾಡು ಅಂಗನವಾಡಿ ಕಾರ್ಯಕರ್ತೆ ಮೇನಕಿ, ನಿರೂಪಣೆಯನ್ನು ಸಿಸಿ ಬಂಗಲೆ ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ನೆರವೇರಿಸಿದರು.

ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ

ನಾಪೋಕ್ಲು: ಇಲ್ಲಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನಾಪೋಕ್ಲು ಪೊಲೀಸ್ ಠಾಣಾ ವತಿಯಿಂದ ಮಾದಕ ವಸ್ತುಗಳ ಸೇವನೆ ಹಾಗೂ ಅದರಿಂದ ಸಮಾಜಕ್ಕೆ ಆಗುವ ದುಷ್ಪರಿಣಾಮಗಳು ಹಾಗೂ ಇತರ ವಿಷಯಯಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಕರ್ನಾಟಕ ಪಬ್ಲಿಕ್ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಠಾಣಾಧಿಕಾರಿ ರಾಘವೇಂದ್ರ ಅವರು ಮಕ್ಕಳಿಗೆ, ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ವಾಹನ ಚಾಲನ ನಿಯಮ ಮತ್ತು ರಸ್ತೆ ಸುರಕ್ಷತೆ, ಮಾದಕ ವಸ್ತುಗಳ ಸೇವನೆಯ ದುಷ್ಟರಿಣಾಮಗಳು, ಮೊಬೈಲ್ ಬಳಕೆಯಿಂದ ಆಗುವ ಡಿಜಿಟಲ್ ಸಮಸ್ಯೆಗಳು ಇವುಗಳ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಶಿವಣ್ಣ, ಶಾಲಾ ಶಿಕ್ಷಕರು, ಪೊಲೀಸ್ ಸಿಬ್ಬಂದಿ ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.

ಮುಳ್ಳೂರು: ಹಂಡ್ಲಿ ಕ್ಲಸ್ಟರ್ ವ್ಯಾಪ್ತಿಗೆ ಒಳಪಡುವ ನಿಡ್ತ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮತ್ತು ಗೋಪಾಲಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಈ ಶೈಕ್ಷಣಿಕ ಸಾಲಿನಿಂದ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ತೆರೆಯಲು ಸರಕಾರ ಮತ್ತು ಶಿಕ್ಷಣ ಇಲಾಖೆ ಅನುಮತಿ ನೀಡಿದ್ದು, ಚಾಲನೆ ನೀಡಲಾಯಿತು.

ನಿಡ್ತ ಗ್ರಾ.ಪಂ. ಅಧ್ಯಕ್ಷ ಟಿ.ಕೆ. ಅಶೋಕ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವುದರಿಂದ ಮಕ್ಕಳ ಹಾಜರಾತಿ ಪ್ರಮಾಣ ಹೆಚ್ಚಾಗುತ್ತದೆ ಮತ್ತು ಸರಕಾರಿ ಶಾಲೆಗಳು ಅಭಿವೃದ್ಧಿ ಹೊಂದುತ್ತವೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವಂತೆ ಮನವಿ ಮಾಡಿದರು.

ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ಮಾತನಾಡಿ, ಸರಕಾರ ಮತ್ತು ಶಿಕ್ಷಣ ಇಲಾಖೆ ಕ್ಲಸ್ಟರ್ ವ್ಯಾಪ್ತಿಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚು ಇರುವ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭಿಸಲು ಆದೇಶ ನೀಡಿದೆ. ಈ ಹಿನ್ನಲೆಯಲ್ಲಿ ಹಂಡ್ಲಿ ಕ್ಲಸ್ಟರ್ ವ್ಯಾಪ್ತಿಯಲ್ಲಿ ನಿಡ್ತ ಮತ್ತು ಗೋಪಾಲಪುರ ಪ್ರಾಥಮಿಕ ಶಾಲೆಗಳಲ್ಲಿ ಇದೇ ಶೈಕ್ಷಣಿಕ ಸಾಲಿನಿಂದ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭಿಸಲು ಅನುಮೋದನೆ ದೊರೆತಿರುವುದರಿಂದ ಸಾಂಕೇತಿಕವಾಗಿ ಇದೆ. ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಒಂದನೆ ತರಗತಿಗೆ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಉಭಯ ಶಾಲೆಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ತೀರ್ಥಾನಂದ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಾನಸ, ಎರಡೂ ಶಾಲೆಗಳ ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಹಾಜರಿದ್ದರು.ವೀರಾಜಪೇಟೆ: ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ವತಿಯಿಂದ ೧೭ನೇ ವರ್ಷದ ಸ್ಥಾಪನ ದಿನದ ಅಂಗವಾಗಿ ವೀರಾಜಪೇಟೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ೩೦ ವಿದ್ಯಾರ್ಥಿಗಳಿಗೆ ಹಾಗೂ ಕೆದಮುಳ್ಳೂರುವಿನ ಕಥರಿನ ಚಿತ್ತದಿನಿ ಮಕ್ಕಳ ಮನೆಯ ೧೬ ಶಾಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಸುಮೇಶ್ ಅವರ ನೇತೃತ್ವದಲ್ಲಿ ಉಚಿತ ಬ್ಯಾಗ್ ಮತ್ತು ಕೊಡೆಗಳನ್ನು ವಿತರಿಸಲಾಯಿತು.

ಈ ಸಂದರ್ಭ ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಬಿಂದು ಮಾತನಾಡಿ, ಮುತ್ತಪ್ಪನ್ ಮಲಯಾಳಿ ಸಮಾಜ ಕಳೆದ ೧೬ ವರ್ಷಗಳಿಂದ ಹಲವಾರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಬರುತ್ತಿದೆ. ಯಾರು ಒಳ್ಳೆಯ ಮನಸ್ಸಿನಿಂದ ಅಲ್ಪವಾದರೂ ದಾನ ಮಾಡುತ್ತಾರೆ ಅವರಲ್ಲಿ ಐಶ್ವರ್ಯ ತುಂಬುತ್ತಾ ಬರುತ್ತದೆ. ನಾವು ಹೋದ ನಂತರವೂ ನಾವು ಮಾಡಿದ ಒಳ್ಳೆಯತನವನ್ನು ಸಮಾಜ ನೆನಪಿಸಿಕೊಳ್ಳುತ್ತದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.ಮಲಯಾಳಿ ಸಮಾಜದ ಅಧ್ಯಕ್ಷ ಸುಮೇಶ್ ಮಾತನಾಡಿ, ನಮ್ಮ ಸಮಾಜ ಇಂದಿಗೆ ೧೭ ವರ್ಷಗಳನ್ನು ಪೂರೈಸಿದೆ. ಮುಂದಿನ ಸೆ. ೨೭ ಮತ್ತು ೨೮ ರಂದು ಸಮಾಜದ ವತಿಯಿಂದ ಓಣಂ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಂದೆಯೂ ಸಮಾಜ ವತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು. ವಿದ್ಯೆಯನ್ನು ಯಾರು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಲ್ಲರೂ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದದವರು ಮತ್ತು ಸಿಬ್ಬಂದಿಗಳು ಹಾಗೂ ಮಲಯಾಳಿ ಸಮಾಜದ ಕಾರ್ಯದರ್ಶಿ ಸಿ.ಆರ್. ಬಾಬು, ಸಲಹೆಗಾರ ಪಿ.ಜಿ. ವಿಶ್ವನಾಥ್, ಸಹ ಕಾರ್ಯದರ್ಶಿ ರಂಜಿತ್, ಸದಸ್ಯರಾದ ಮಂಜುನಾಥ್, ಪ್ರಸಾದ್, ರಾಜನ್, ಸಾಯಿ ಪ್ರಕಾಶ್, ಸುರೇಶ್ ಇನ್ನಿತರರು ಉಪಸ್ಥಿತರಿದ್ದರು.ಕೂಡಿಗೆ: ಯುವಕರಲ್ಲಿ ಬುದ್ಧಿಶಕ್ತಿ ಮತ್ತು ಕೌಶಲ್ಯ ಇದ್ದರೆ ಬೆಲೆ ಹೊರತು ಹಣ, ಆಸ್ತಿಗೆ ಅಲ್ಲ ಎಂದು ಪ್ರೊ, ಕೃಷ್ಣೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಹೆಬ್ಬಾಲೆ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಶ್ರೀ ಕಾವೇರಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಮತ್ತು ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಕ್ಕೆ ಆಗಮಿಸಿ ಮಾಹಿತಿ ನೀಡಿದರು.

ನೂರು ವರ್ಷಗಳ ಹಿಂದೆ ಆಸ್ತಿ, ಶಕ್ತಿ, ಜಾತಿ, ಧರ್ಮಗಳ ಹಿನ್ನೆಲೆಯಲ್ಲಿ ವ್ಯಕ್ತಿಗಳಿಗೆ ಗೌರವ ಸಿಗುತ್ತಿತ್ತು. ಬದಲಾವಣೆಯಾದ ಈ ಯುಗದಲ್ಲಿ ಯುವಕರಿಗೆ ಬುದ್ಧಿಶಕ್ತಿ ಮತ್ತು ಕೌಶಲ್ಯ ಇದ್ದರೆ ಈ ಸಾಮಾಜಿಕ ವ್ಯವಸ್ಥೆಯಲ್ಲಿ ಆಸ್ತಿ, ಸಾಮಾಜಿಕ ಗೌರವ ತಾನಾಗಿ ಹುಡುಕಿಕೊಂಡು ಬರುತ್ತವೆ. ವಿದ್ಯಾರ್ಥಿಗಳು ಚಲಾವಣೆಯಲ್ಲಿರುವ ನಾಣ್ಯಗಳಾಗಬೇಕೇ ಹೊರತು ತುಕ್ಕು ಹಿಡಿಯುವ ನಾಣ್ಯಗಳಾಗಬಾರದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ವಿ. ಶಿವಪ್ಪ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ನೈಜ ಜೀವನದಲ್ಲಿ ಒಳ್ಳೆಯ ನುಡಿ, ಆಚಾರ-ವಿಚಾರಗಳನ್ನು ಕಲಿತು ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಹೆಚ್.ಕೆ. ಪ್ರಸನ್ನ, ಕಾರ್ಯದರ್ಶಿ ಹೆಚ್.ಎಸ್. ರಾಜಶೇಖರ್, ಮುಖ್ಯ ಶಿಕ್ಷಕ ಬಸವರಾಜಶೆಟ್ಟಿ, ನಿವೃತ್ತ ಸೈನಿಕರಾದ ಹೆಚ್.ಎನ್. ಪುಟ್ಟೇಗೌಡ, ಶ್ರೀ ಬನಶಂಕರಿ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು, ನಿರ್ದೇಶಕರು, ಪ್ರಾಂಶುಪಾಲ ವಿಜಯಕುಮಾರ್, ಮುಖ್ಯ ಶಿಕ್ಷಕರು, ಉಪನ್ಯಾಸಕ ವೃಂದ, ಶಿಕ್ಷಕರು, ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಮತ್ತು ಪೋಷಕರು ಹಾಜರಿದ್ದರು.ಪೊನ್ನಂಪೇಟೆ: ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ೨೦೨೫-೨೬ನೇ ಸಾಲಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ಚುನಾವಣೆ ಮೂಲಕ ನಡೆಸಲಾಯಿತು.

ಜಂಟಿ ಕಾರ್ಯದರ್ಶಿಗಳಾಗಿ ಯತೀನ್ ಬೋಪಯ್ಯ ಸಿ.ಎ., ಜನನಿ ಹೆಚ್.ಎನ್., ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಎಂ.ಡಿ. ಚಿರಾಗ್ ಚಿಣ್ಣಪ್ಪ, ಕ್ರೀಡಾ ಕಾರ್ಯದರ್ಶಿಗಳಾಗಿ ಪಂಚಮಿ ಬಿ.ಬಿ. ಆಯ್ಕೆಯಾದರು.

ತರಗತಿ ಪ್ರತಿನಿಧಿಗಳಾಗಿ ಕಲಾ ವಿಭಾಗ ಪ್ರಥಮ ಪಿ.ಯು.ಸಿ. ಸವಿನ್ ವೈ.ಆರ್., ಶಿಫ್ರಾ ಕಾಳಪ್ಪ ಎಂ., ಕಲಾವಿಭಾಗ ದ್ವಿತೀಯ ಪಿ.ಯು.ಸಿ. ಲಕ್ಷö್ಮಣ, ದಿನಿಷಾ, ಪ್ರಥಮ ಪಿ.ಯು.ಸಿ. ವಾಣಿಜ್ಯ ಗಣಕ ವಿಜ್ಞಾನ ವಿಭಾಗದ ದ್ಯಾನ್ ಚಂಗಪ್ಪ, ಲಿಪಿಕಾ ಲೋಕೇಶ್ವರಿ, ದ್ವಿತೀಯ ಪಿ.ಯು.ಸಿ. ಅಶ್ವೇಲ್ ಪ್ರಿನ್ಸ್, ಪ್ರಥಮ ಪಿ.ಯು.ಸಿ. ವಾಣಿಜ್ಯ ವಿಭಾಗದ ದೀಕ್ಷಿತ್ ಹೆಚ್.ಎಲ್., ದೃಶ್ಯ. ಬಿ.ಬಿ., ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದ ಮೊಹ್ಮದ್ ಸಾಬಿತ್, ಮೌನ ಹೆಚ್.ಪಿ., ಪ್ರಥಮ ಪಿ.ಯು.ಸಿ. ವಿಜ್ಞಾನ ವಿಭಾಗದ ಗ್ಯಾನ್‌ಕೃಷ್ಣ, ಫಿದಾ ಫಾತಿಮಾ, ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ಯತಿನ್ ಬೋಪಯ್ಯ, ಜನನಿ ಹೆಚ್.ಎನ್. ಆಯ್ಕೆಯಾದರು.

ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಅವರ ಮಾರ್ಗದರ್ಶನದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕ ಲೆಫ್ಟಿನೆಂಟ್ ಡಾ. ಎಂ.ಆರ್. ಅಕ್ರಂ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಈ ಸಂದರ್ಭ ಉಪ ಪ್ರಾಂಶುಪಾಲೆ ಎಂ.ಕೆ. ಪದ್ಮ, ಹಿರಿಯ ಉಪನ್ಯಾಸಕ ಬ್ರೆöÊಟಕುಮಾರ್ ಹಾಗೂ ಉಪನ್ಯಾಸಕರು ಹಾಜರಿದ್ದರು.ಪೊನ್ನಂಪೇಟೆ: ಪೊನ್ನಂಪೇಟೆ ಕೊಡವ ಎಜುಕೇಷನ್ ಸೊಸೈಟಿಯ ಅಧೀನಕ್ಕೊಳಪಡುವ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಪಿ.ಯು. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ವಿಜ್ಞಾನಿ ಹಾಗೂ ಸಿ.ಐ.ಟಿ. ಕಾಲೇಜಿನ ಹಳೆಯ ವಿದ್ಯಾರ್ಥಿ ಸೂರಜ್ ಕೆ. ಬಾಬು ಪಾಲ್ಗೊಂಡು, ಕೃಷಿ ವಲಯಕ್ಕೆ ಎಐ ತಂತ್ರಜ್ಞಾನದ ಬಳಕೆ ಹೇಗೆ ಪೂರಕವಾಗಲಿದೆ ಎಂಬ ಬಗ್ಗೆ ಮಾಹಿತಿ ನೀಡಿದರು. ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತು ಅಭೂತಪೂರ್ವ ಸಾಧನೆಯ ಮೈಲ್ಲಿಗಲ್ಲು ಸ್ಥಾಪಿಸುತ್ತಿರುವ ಈ ಕಾಲಘಟ್ಟದಲ್ಲಿ ನೂತನ ತಂತ್ರಜ್ಞಾನ ಆವಿಷ್ಕಾರ ಮತ್ತು ಸಂಶೋಧನಾ ಪೊನ್ನಂಪೇಟೆ: ಪೊನ್ನಂಪೇಟೆ ಕೊಡವ ಎಜುಕೇಷನ್ ಸೊಸೈಟಿಯ ಅಧೀನಕ್ಕೊಳಪಡುವ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಪಿ.ಯು. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ವಿಜ್ಞಾನಿ ಹಾಗೂ ಸಿ.ಐ.ಟಿ. ಕಾಲೇಜಿನ ಹಳೆಯ ವಿದ್ಯಾರ್ಥಿ ಸೂರಜ್ ಕೆ. ಬಾಬು ಪಾಲ್ಗೊಂಡು, ಕೃಷಿ ವಲಯಕ್ಕೆ ಎಐ ತಂತ್ರಜ್ಞಾನದ ಬಳಕೆ ಹೇಗೆ ಪೂರಕವಾಗಲಿದೆ ಎಂಬ ಬಗ್ಗೆ ಮಾಹಿತಿ ನೀಡಿದರು. ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತು ಅಭೂತಪೂರ್ವ ಸಾಧನೆಯ ಮೈಲ್ಲಿಗಲ್ಲು ಸ್ಥಾಪಿಸುತ್ತಿರುವ ಈ ಕಾಲಘಟ್ಟದಲ್ಲಿ ನೂತನ ತಂತ್ರಜ್ಞಾನ ಆವಿಷ್ಕಾರ ಮತ್ತು ಸಂಶೋಧನಾ ಅಗತ್ಯತೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.

ಜಾಗತಿಕ ಯುಗದಲ್ಲಿ ಉದ್ಯೋಗ ಪಡೆಯಲು ಅವಶ್ಯಕವಿರುವ ಕೌಶಲ್ಯಗಳು ಮತ್ತು ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಸಿ.ಐ.ಪಿ.ಯು ಕಾಲೇಜು ಪ್ರಾಂಶುಪಾಲೆ ಡಾ. ರೋಹಿಣಿ ತಿಮ್ಮಯ್ಯ ಮಾತನಾಡಿ, ವಿದ್ಯಾರ್ಥಿಗಳು ಅಂಕಗಳಿಕೆಯೊAದಿಗೆ ಸಂಶೋಧನಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ನೂತನ ತಂತ್ರಜ್ಞಾನದ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭ ಕಾರ್ಯಕ್ರಮ ಸಂಯೋಜಕಿ ಅನುರಾಧ ಪಿ.ಜೆ., ಬೋಧಕ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಸುAಟಿಕೊಪ್ಪ: ಇತ್ತೀಚೆಗೆ ಸರಕಾರಿ ಪದವಿಪೂರ್ವ ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ೨೦೨೫-೨೬ನೇ ಸಾಲಿನ ಶೈಕ್ಷಣಿಕ ಸಂಸತ್ ಮಂತ್ರಿಮAಡಲ ರಚನೆ ಮಾಡಲಾಯಿತು. ಶಾಲಾ ನಾಯಕನಾಗಿ ಅಜಿತ್, ಉಪನಾಯಕಿ ವೈಷ್ಣವಿ, ಆಹಾರ ಮಂತ್ರಿಯಾಗಿ ರಿದಾ ಮರಿಯಂ, ಆಹಾರ ಉಪಮಂತ್ರಿಯಾಗಿ ನಿಶ್ಮಿತಾ, ರಂಜಿತ, ಆರೋಗ್ಯ ಮಂತ್ರಿಯಾಗಿ ಮೊಹಮ್ಮದ್ ಶಹಬಾಸ್, ಆರೋಗ್ಯ ಉಪಮಂತ್ರಿಯಾಗಿ ರೆಹನತ್, ಸ್ವಚ್ಛತಾ ಮಂತ್ರಿ ಹಾಗೂ ಶಾಲಾ ಭದ್ರತಾ ಸಮಿತಿ ಮಂತ್ರಿಯಾಗಿ ಲೇಖಿಕ್, ಉಪ ಮಂತ್ರಿಯಾಗಿ ಅರ್ಪಿತ ರಾಡ್ರಿಗಸ್, ಕ್ರೀಡಾಮಂತ್ರಿಯಾಗಿ ಶಶಿಕಾಂತ, ಉಪಮಂತ್ರಿಯಾಗಿ ಸೃಜನ, ಸಾಂಸ್ಕೃತಿಕ ಮತ್ತು ವಾರ್ತಾ ಮಂತ್ರಿಯಾಗಿ ದೀಕ್ಷಾ, ವಾರ್ತಾ ಉಪಮಂತ್ರಿಯಾಗಿ ನೌಶಿನ ಅವರುಗಳನ್ನು ಆಯ್ಕೆ ಮಾಡಲಾಯಿತು.

ಇದೇ ಸಂದರ್ಭ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ೧೬ ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿಗೊಂಡ ಸಿ.ಟಿ. ಸೋಮಶೇಖರ್ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಬಾಲಕೃಷ್ಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿರಿಲ್ ರಾಡ್ರಿಗಸ್, ಸಹ ಶಿಕ್ಷಕರುಗಳು ಹಾಗೂ ಸಿಬ್ಬಂದಿಗಳು ಇದ್ದರು.*ಗೋಣಿಕೊಪ್ಪ: ಹಾತೂರು ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಫೈಲ್ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಹಾತೂರು ಗ್ರಾಮದ ನಿವಾಸಿ ಜಯಸೂರ್ಯ ಸಂಸ್ಥೆ ವತಿಯಿಂದ ನೂರು ವಿದ್ಯಾರ್ಥಿಗಳಿಗೆ ಫೈಲ್ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಿದರು.

ಮುಖ್ಯ ಶಿಕ್ಷಕಿ ಮಾಲಿನಿ, ಸಹ ಶಿಕ್ಷಕರುಗಳಾದ ಫ್ಲೋರ, ಡಿಸೋಜ, ಭಾರತಿ, ನೇತ್ರಾವತಿ, ಸಂಜಯ್, ಸುರೇಶ್ ಮಲ್ಲಿಕಾ, ತೆರೆಸಿಯ ಮತ್ತು ವಿದ್ಯಾರ್ಥಿಗಳು ಇದ್ದರು.ಸುಂಟಿಕೊಪ್ಪ: ಕಾನ್‌ಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಸಾಲಿನಿಂದ ಆಂಗ್ಲ ಮಾಧ್ಯಮಕ್ಕೆ ಚಾಲನೆ ನೀಡಲಾಯಿತು.

ಸರ್ಕಾರದ ಸೂಚನೆ ಮೇರೆಗೆ ಕಾನ್‌ಬೈಲ್ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೨೦೨೫-೨೬ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಕ್ಲಸ್ಟರ್ ಅಧಿಕಾರಿ ಸೀಮಾ ಅವರು ಚಾಲನೆ ನೀಡಿದರು.

ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಶಾಂತಿ ರೈ, ಸಹ ಶಿಕ್ಷಕರುಗಳಾದ ಕವಿತ, ಯಶೋಧ, ಪ್ರಸನ್ನ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಯಶೋಧ ಅವರುಗಳು ಉಪಸ್ಥಿತರಿದ್ದರು.