ಮಡಿಕೇರಿ, ಜು. ೧೭: ಸುಂಟಿಕೊಪ್ಪ ಸ್ವಸ್ಥ ವಿಶೇಷ ಶಾಲೆಗೆ ಡೆಪ್ಯೂಟಿ ಕೌನ್ಸಿಲ್ ಜನರಲ್ ಆಸ್ಟೆçÃಲಿಯನ್ ಕಾಂಸುಲೆಟ್ ಸ್ಟೀವನ್ ಕಾನರಿ ಹಾಗೂ ಡಿಪ್ಲೋಮೆಸಿ ಆಫೀಸರ್ ಸ್ಟೆಫಿ ಚೆರಿಯನ್ ಅವರುಗಳು ಭೇಟಿ ನೀಡಿದರು.
ಕೊಡಗು ಜಿಲ್ಲೆಯಲ್ಲಿ ವಿಶೇಷಚೇತನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವತ್ತ ಸ್ವಸ್ಥದ ಪಾತ್ರವನ್ನು ಈ ಸಂದರ್ಭ ಶ್ಲಾಘಿಸಿದರು. ಶಾಲೆಯ ಅಕಾಡೆಮಿಕ್ ಹಾಗೂ ವೊಕೇಶನಲ್ ವಿಭಾಗಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ ಬಗ್ಗೆಯೂ ಈ ಸಂದರ್ಭ ಹೆಮ್ಮೆ ವ್ಯಕ್ತಪಡಿಸಿದರು. ಸ್ವಸ್ಥ ವಿಶೇಷ ಶಾಲೆಯ ನಿರ್ದೇಶಕರಾದ ಆರತಿ ಸೋಮಯ್ಯ, ಕೂರ್ಗ್ ಫೌಂಡೇಷನ್ ಟ್ರಸ್ಟಿ ಗಂಗಾ ಜಂಗಪ್ಪ, ಐಶ್ವರ್ಯ ಬೋಪಯ್ಯ ಹಾಗೂ ಗೌತಮ್ ಮೈನಿ ಅವರುಗಳೊಂದಿಗೆ ಈ ಸಂದರ್ಭ ಚರ್ಚೆ ನಡೆಸಿದ ಸ್ಟೀವನ್ ಕಾನಲಿ ಅವರು, ವಿಶೇಷಚೇತನರು ಸಮಾಜದಲ್ಲಿ ಎದುರಿಸುತ್ತಿರುವ ಕಷ್ಟಗಳ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆದುಕೊಂಡರು.