ಚೆಟ್ಟಳ್ಳಿ, ಜು. ೧೮: ಆಟ ಪಾಠವನ್ನು ಬಿಟ್ಟು ಹದಗೊಳಿಸಿದ ಗದ್ದೆಯಲ್ಲಿ ಭತ್ತದ ಪೈರನ್ನು ಹಿಡಿದ ಪುಟಾಣಿಗಳು ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡರು.
ವೀರಾಜಪೇಟೆ ಸಮೀಪದ ಬಿಟ್ಟಂಗಾಲದ ದೇವಯ್ಯ ಮೆಮೋರಿಯಲ್ ಪ್ರಿಪೈಟರಿ ಸ್ಕೂಲ್ ವಿದ್ಯಾರ್ಥಿಗಳು ಶಾಲೆಯ ಸಮೀಪವೇ ಮಕ್ಕಳಿಗೆಂದೇ ಮಾಡಲಾದ ಗದ್ದೆಯಲ್ಲಿ ಓಡಾಡುತ್ತಾ ಅತೀ ಉತ್ಸಾಹದಿಂದ ನಾಟಿ ಕಾರ್ಯದಲ್ಲಿ ತೊಡಗಿಕೊಂಡರು. ಮುಂಬರುವ ಪುತ್ತರಿ ನಮ್ಮೆಯ ಆಚರಣೆಯಂದು ಇದೇ ಮಕ್ಕಳು ಗದ್ದೆಯಿಂದ ಕದಿರನ್ನು ಕೊಯ್ಲು ಮಾಡಿ ತಂದು ಅದರ ಭತ್ತದ ಅಕ್ಕಿಯಿಂದ ಪಾಯಸ ಮಾಡಿ ಹಬ್ಬದ ಸಂಭ್ರಮವನ್ನು ಶಾಲೆಯಲ್ಲಿ ಆಚರಿಸುತ್ತಾರೆ.