ಮಡಿಕೇರಿ, ಜು.೧೮ : ಜಿಲ್ಲೆಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಿಂದಾಗಿ ಲಾರಿಗಳನ್ನೇ ನಂಬಿಕೊAಡು ಬದುಕು ಸಾಗಿಸುತ್ತಿರುವವರಿಗೆ ಸಂಕಷ್ಟ ಎದುರಾಗಿದ್ದು, ಈ ಆದೇಶವನ್ನು ತಿದ್ದುಪಡಿ ಮಾಡಬೇಕೆಂದು ಆಗ್ರಹಿಸಿ ಕುಶಾಲನಗರದ ಕೂರ್ಗ್ ಲಾರಿ ಚಾಲಕರು ಮತ್ತು ಮಾಲೀಕರ ಸಂಘ ಹಾಗೂ ಕೊಡಗು ಟಿಂಬರ್ ವ್ಯಾಪಾರಸ್ಥರು ಮತ್ತು ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಲಾರಿ ಚಾಲಕರು ಹಾಗೂ ಮಾಲೀಕರು, ಕಾರ್ಮಿಕರು, ಟಿಂಬರ್ ಮಾಲೀಕರು, ಕಾರ್ಮಿಕರು, ಕ್ರೇನ್ ಬಳಕೆದಾರರು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು; ಭಾರೀ ವಾಹನಗಳ ಸಂಚಾರ ನಿಷೇಧದಿಂದಾಗಿ ಲಾರಿ ಚಾಲಕರು, ಕಾರ್ಮಿಕರು, ಟಿಂಬರ್ ಅವಲಂಬಿತ ಕಾರ್ಮಿಕರಿಗೆ ಸಂಕಷ್ಟ ಎದುರಾಗಿದೆ. ಹಾಗಾಗಿ ಜಿಲ್ಲೆಯ ರೈತರು ನೆಟ್ಟು ಬೆಳೆಸಿರುವ ಟಿಂಬರ್ ಸಾಗಾಟ ಮಾಡಲು ವಿನಾಯಿತಿ ನೀಡಬೇಕು, ತೆರಿಗೆ ಪಾವತಿ ಮಾಡುತ್ತಿರುವ

(ಮೊದಲ ಪುಟದಿಂದ) ಸರಕು ಸಾಗಾಟ ಮಾಡುವ ಲಾರಿಗಳ ಸಂಚಾರಕ್ಕೆ ಅವಕಾಶ ನೀಡಬೇಕು. ಎಂದು ಒತ್ತಾಯಿಸಿದರು. ಕೂಲಿ ಕಾರ್ಮಿಕರು, ಚಾಲಕರು ನಿರುದ್ಯೋಗಿಗಳಾಗಿದ್ದು, ವಾಹನ ಮಾಲೀಕರು ಪಡೆದುಕೊಂಡಿರುವ ಸಾಲವನ್ನು ಈ ಮೂರು ತಿಂಗಳ ನಿಷೇಧದ ಅವಧಿಯಲ್ಲಿ ಪಾವತಿಸಲು ಕೂಡ ತೊಂದರೆಯಾಗುತ್ತದೆ. ಕೊಡಗಿನ ಲಾರಿಗಳು ಪ್ರಮುಖವಾಗಿ ಟಿಂಬರ್ ಮತ್ತು ಕಾಫಿ ಸಾಗಾಟ ಮಾಡುವ ವಾಹನಗಳಾಗಿದ್ದು, ನಿಷೇಧದಿಂದಾಗಿ ಕಾಫಿ ಬೆಳೆಗಾರರಿಗೂ ಆಘಾತವಾಗಿದ್ದು, ಜಿಲ್ಲೆಯ ಆರ್ಥಿಕತೆಯ ಮೇಲೆ ಹೊಡೆತ ಬೀಳುವ ಸಾಧ್ಯತೆಯಿದೆ. ಹಾಗಾಗಿ ನಿಷೇಧಾಜ್ಞೆಗೆ ತಿದ್ದುಪಡಿ ಮಾಡಿ ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಮನವಿಗೆ ಸ್ಪಂದನ ಸಿಗದಿದ್ದಲ್ಲಿ ಹೋರಾಟ ತೀವ್ರಗೊಳಿಸುವದಾಗಿ ಎಚ್ಚರಿಸಿದರು.

ಪ್ರತಿಭಟನಾಕಾರರ ಪರವಾಗಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿಜು ಸುಬ್ರಮಣಿ; ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಿಂದಾಗಿ ಲಾರಿಗಳನ್ನೇ ನಂಬಿಕೊAಡು ಬದುಕು ಸಾಗಿಸುತ್ತಿರುವವರಿಗೆ ಸಂಕಷ್ಟ ಎದುರಾಗಿದೆ. ಕಾರ್ಮಿಕರು ದೇಶದ ಬೆನ್ನೆಲುಬು, ಅವರು ಗಟ್ಟಿಯಾದರೆ ಮಾತ್ರ ದೇಶ ಸುಭದ್ರವಾಗಿರಲು ಸಾಧ್ಯ. ಅವೈಜ್ಞಾನಿಕ ಆದೇಶವನ್ನು ಪುನರ್ ಪರಿಶೀಲಿಸಿ ಯಥಾಸ್ಥತಿ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು. ಕೂರ್ಗ್ ಲಾರಿ ಚಾಲಕರ ಮತ್ತು ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಮಹಮ್ಮದ್ ಇಕ್ಬಾಲ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ, ಈ ಆದೇಶ ಜಿಲ್ಲೆಯ ಲಾರಿಗಳಿಗೆ ಮಾತ್ರ ಅನ್ವಯವಾಗುವಂತಿದೆ. ಹೊರ ಜಿಲ್ಲೆಯ ವಾಹನಗಳು ಯಾವದೇ ತಡೆಯಿಲ್ಲದೆ ಸಂಚರಿಸುತ್ತಿವೆ, ಹಾಗಾಗಿ ಜಿಲ್ಲೆಯ ಲಾರಿಗಳಿಗೂ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಈ ಆದೇಶದಿಂದ ಜಿಲ್ಲೆಯ ಕೂಲಿ ಕಾರ್ಮಿಕರು ಹಾಗೂ ವಾಹನ ಚಾಲಕರು ನಿರುದ್ಯೋಗಿಗಳಾಗಿದ್ದು, ವಾಹನ ಮಾಲೀಕರು ತಮ್ಮ ವಾಹನಗಳಿಗೆ ಪಡೆದುಕೊಂಡಿರುವ ಸಾಲವನ್ನು ಪಾವತಿಸಲು ತೊಂದರೆಯಾಗುತ್ತಿದೆ. ಸಂಬAಧಪಟ್ಟ ಆದೇಶಕ್ಕೆ ತಿದ್ದುಪಡಿ ಮಾಡಬೇಕೆಂದು ಮನವಿ ಮಾಡಿದರು. ಶಾಂತಿಯುತ ಹೋರಾಟಕ್ಕೆ ಇಲ್ಲಿಯವರೆಗೆ ಯಾವುದೇ ನ್ಯಾಯ ದೊರಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ಕೂರ್ಗ್ ಲಾರಿ ಚಾಲಕರು ಮತ್ತು ಮಾಲೀಕರ ಸಂಘದ ಉಪಾಧ್ಯಕ್ಷ ಎಂ.ಅಶ್ರಫ್, ಕಾರ್ಯದರ್ಶಿ ಎಂ.ಅಜೀಝ್, ಖಜಾಂಚಿ ಹುರೈದ್, ಕೊಡಗು ಟಿಂಬರ್ ಮರ್ಚೆಂಟ್ ಸಂಘಟನೆಯ ಅಧ್ಯಕ್ಷ ಶಮೀರ್, ಕಾರ್ಯದರ್ಶಿ ಹುರೇಶಿ, ಖಜಾಂಚಿ ಶ್ಯಾಮ್, ಕಾರ್ಮಿಕ ಸಂಘಟನೆಯ ಅಧ್ಯಕ್ಷ ಎನ್.ಡಿ.ಕುಟ್ಟಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.