ಶ್ರೀಮಂಗಲ, ಜು. ೧೮: ತಮ್ಮ ಅನುದಾನದಲ್ಲಿ ನಿರ್ಮಿಸಿದ ಹೊಸ ಬಸ್ ಶೆಲ್ಟರ್ ಅನ್ನು ಮುಖ್ಯಮಂತ್ರಿ ಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ. ಎಸ್. ಪೊನ್ನಣ್ಣ ಅವರು ಉದ್ಘಾಟಿಸಿದರು.

ಪೊನ್ನಂಪೇಟೆ-ಕುಟ್ಟ ಮಾರ್ಗದ ನಡುವೆ ಹುದಿಕೇರಿ ಪಟ್ಟಣದಲ್ಲಿ ಹೊಸ ಬಸ್ ತಂಗುದಾಣ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರು ತಂಗುದಾಣ ಇಲ್ಲದೇ ಮಳೆ ಮತ್ತು ಬಿಸಿಲಿನಲ್ಲಿ ಕಷ್ಟ ಪಡುತ್ತಿದ್ದುದನ್ನು ಮನಗಂಡು ವಿದ್ಯಾರ್ಥಿಗಳ-ಸಾರ್ವಜನಿಕರ ಅನುಕೂಲಕ್ಕೆ ಈ ತಂಗುದಾಣವನ್ನು ನಿರ್ಮಾಣ ಮಾಡಲಾಗಿದೆ ಎಂದು ಶಾಸಕರು ಹೇಳಿದರು.

ಈ ಸಂದರ್ಭ ಸ್ಥಳೀಯ ಪ್ರಮುಖರು, ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಹಾಜರಿದ್ದು, ಸಂತಸವ್ಯಕ್ತಪಡಿಸಿದರು