ಕುಶಾಲನಗರ, ಜು. ೧೯: ಕೊಡಗು ಜಿಲ್ಲೆ ಕುಶಾಲನಗರ ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷರಾಗಿ ಹೆಬ್ಬಾಲೆ ಗ್ರಾಮದ ಹೆಚ್.ಬಿ. ದಿನೇಶ್ ಆಚಾರಿ ಆಯ್ಕೆಯಾಗಿದ್ದಾರೆ.
ಇವರು ಸೋಮವಾರಪೇಟೆ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೂ ಹೆಬ್ಬಾಲೆ ಶ್ರೀ ಕಾಳಿಖಾಂಬ ಕುಶಲ ಕೈಗಾರಿಕಾ ಸಂಘದ ನಿರ್ದೇಶಕರಾಗಿ ಹಾಲಿ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಕುಶಾಲನಗರ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವೇದಿಕೆಯ ಗೌರವ ಅಧ್ಯಕ್ಷರಾಗಿ ಪ್ರಾಂಶುಪಾಲರಾದ ಹೆಚ್.ಬಿ. ಲಿಂಗಮೂರ್ತಿ, ಉಪಾಧ್ಯಕ್ಷರಾಗಿ ಕೆ.ಪಿ. ಅಮೃತ, ಮಹಿಳಾ ಕಾರ್ಯದರ್ಶಿಯಾಗಿ ಅಂಕಿತ ಎಸ್.ಎಸ್., ಕೋಶಾಧ್ಯಕ್ಷರಾಗಿ ರುಬಿನ ಎಂ.ಎ., ಸಹ ಕಾರ್ಯದರ್ಶಿಯಾಗಿ ಸತೀಶ್, ಪತ್ರಿಕಾ ಕಾರ್ಯದರ್ಶಿಯಾಗಿ ಗಣೇಶ ಕೆ.ಆರ್., ನಿರ್ದೇಶಕರಾಗಿ ಮಂಜುನಾಥ್, ರಮೇಶ, ಸಾಗರ್, ಮಂಜು ಭಾರ್ಗವಿ ಮತ್ತು ಶಭಾನ ಆಯ್ಕೆಯಾಗಿದ್ದಾರೆ ಎಂದು ಸಂಸ್ಥಾಪಕ ಅಧ್ಯಕ್ಷ ಕೋಟ್ರೇಶ್ ಎಸ್.ಯು. ಮತ್ತು ಕೊಡಗು ಜಿಲ್ಲಾ ಅಧ್ಯಕ್ಷ ಹೆಚ್.ಎಂ. ರಘುಕೋಟಿ ತಿಳಿಸಿದ್ದಾರೆ.