ಶಾಸಕ ಪೊನ್ನಣ್ಣ
ವೀರಾಜಪೇಟೆ, ಜು. ೧೯: ಪಟ್ಟಣದ ಗಡಿಯಾರ ಕಂಬದ ಬಳಿಯಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ ವಸತಿಗೃಹದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಮನೆಯ ಮೇಲ್ಛಾವಣೆ ಸೇರಿದಂತೆ ಅನೇಕ ಸಾಮಗ್ರಿಗಳು ಸುಟ್ಟು ಅಂದಾಜು ರೂ. ೧೦ ಲಕ್ಷ ನಷ್ಟ ಸಂಭವಿಸಿತ್ತು.
ಸ್ಥಳಕ್ಕೆ ಸ್ಥಳೀಯ ಶಾಸಕ ಎ.ಎಸ್. ಪೊನ್ನಣ್ಣ ಅವರು ಭೇಟಿ ನೀಡಿ ಪರಿಶೀಲನೆ ಮಾಡಿ ಲೋಕೋಪ ಯೋಗಿ ಅಭಿಯಂತರಿAದ ಮಾಹಿತಿ ಪಡೆದರು.
ಈ ವೇಳೆ ಅಭಿಯಂತರ ಪಿ. ಸತೀಶ್ ಅವರು ಮಾತನಾಡಿ, ಅವಘಡದಿಂದ ಮನೆಯಲ್ಲಿದ್ದ ಸಾಮಗ್ರಿಗಳು, ನಿರೀಕ್ಷಣಾ ಮಂದಿರಕ್ಕೆ ಸಂಬAಧಿಸಿದ ಮಂಚ, ಹಾಸಿಗೆ, ಫ್ರೀಡ್ಜ್, ಫ್ಯಾನ್, ಟಿ.ವಿ., ಮಿಕ್ಷಿ, ಗಾಡ್ರೆಜ್ ಸೇರಿದಂತೆ ಇತರ ಸಾಮಗ್ರಿಗಳು ಸುಟ್ಟು ನಾಶವಾಗಿದೆ ಎಂದು ಮಾಹಿತಿ ನೀಡಿದಾಗ ಶಾಸಕ ಪೊನ್ನಣ್ಣ ಅವರು ಈ ಜಾಗಕ್ಕೆ ನೂತನ ಕಟ್ಟಡವನ್ನು ಕಟ್ಟಿ ನಾವು ನಿಮಗೆ ಬೇಕಾಗಿರುವ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಇದಕ್ಕೂ ಮೊದಲು ತಾಲೂಕು ಕಚೇರಿ ಮುಂಭಾಗದಲ್ಲಿರುವ ಗ್ರಂಥಾಲಯಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದ ಶಾಸಕ ಪೊನ್ನಣ್ಣ ಅವರು ಹಳೆಯ ಗ್ರಂಥಾಲಯ, ಇನ್ನು ದುರಸ್ತಿ ಮಾಡುವುದು ಸರಿಯಲ್ಲ. ಕಟ್ಟಡ ಅಭಿವೃದ್ಧಿ ನಂತರ ಗ್ರಂಥಾಲಯದಲ್ಲಿ ಈಗಿರುವ ಪುಸ್ತಕಗಳಿಗಿಂತ ಇನ್ನು ಹೆಚ್ಚು ಕಥೆ, ಕವನ, ಮತ್ತು ಇಂಗ್ಲಿಷ್ ಪುಸ್ತಕಗಳನ್ನು ಒದಗಿಸುವ ಮೂಲಕ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವಂತಾಗಬೇಕು ಎಂದರು.ಈ ಸಂದರ್ಭ ಲೋಕೋಪ ಯೋಗಿ ಇಲಾಖೆ ಕಾರ್ಯಪಾಲಕ ಸಹಾಯಕ ಅಭಿಯಂತರ ಪಿ. ಸತೀಶ್, ಟಿ.ಪಿ. ಸುಬ್ಬಯ್ಯ, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷೆ ಫಸಿಹಾ ತಬ್ಸ್ಸುಂ, ಮುಖ್ಯಧಿಕಾರಿ ಪಿ.ಕೆ. ನಾಚಪ್ಪ, ಸದಸ್ಯರಾದ ಎಸ್.ಹೆಚ್. ಮತೀನ್, ಸಿ.ಕೆ. ಪ್ರಥ್ವಿನಾಥ್, ಸಾಹುಲ್ ಹಮೀದ್, ಅತಿಫ್ ಮನ್ನಾ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಯುವ ಕಾಂಗ್ರೆಸ್‌ನ ಶಬೀರ್, ಪಕ್ಷದ ಜೋಕಿಂ ರಾಡ್ರಿಗಸ್, ಎ.ವಿ. ಮಂಜುನಾಥ್, ಮಂಜು ದೇವಯ್ಯ ಇತರರು ಹಾಜರಿದ್ದರು.