ಮಡಿಕೇರಿ, ಜು ೧೯ : ಮಾದಾಪುರದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ೮ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಿತು. ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ, ಆಂತರಿಕ ಸ್ವಯಂ ನಿರ್ಣಯ ಹಕ್ಕು ಮತ್ತು ಎಸ್.ಟಿ ವರ್ಗೀಕರಣ ಸೇರಿದಂತೆ ೨೦೨೬ರ ರಾಷ್ಟಿçÃಯ ಜನಗಣತಿ ಸಂದರ್ಭ ಜನಾಂಗವಾರು ಮಾಹಿತಿ ಕಲೆಹಾಕುವಾಗ ಆದಿಮ ಸಂಜಾತ ಏಕ-ಜನಾಂಗೀಯ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಅನ್ನು ಸೇರಿಸಬೇಕು, ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಈ ಸಂದರ್ಭ ಸಂಘಟನೆಯ ಸಂಚಾಲಕ ನಂದಿನೆರವAಡ ಯು ನಾಚಪ್ಪ ಅವರು ಒತ್ತಾಯಿಸಿದರು.

ರಾಜಕೀಯ ಸ್ವಾಯತ್ತತೆ ಮತ್ತು ಎಸ್.ಟಿ ಪಟ್ಟಿ ಸರ್ವಾಂಗೀಣ ಸಂವಿಧಾನಿಕ ಸಬಲೀಕರಣಕ್ಕೆ ಮತ್ತು ವಿಶೇಷ ಹೆಗ್ಗುರಿತಿನ ಕಾಯ್ದೆ ಬದ್ದ ಖಾತರಿಗೆ ಬುನಾದಿಯಾಗಲಿದ್ದು, ಜಾತಿಗಣತಿಯೂ ಕೊಡವ ಲ್ಯಾಂಡ್ ಕೂಡ ಆದಿಮಸಂಜಾತ ಕೊಡವರ ಚಾರಿತ್ರಿಕ ಮುಂದುವರಿಕೆ ಚಿರಸ್ಥಾಯಿ ಆಗಲು ಕಾರಣವಾಗಲಿದೆ. ಇದರ ಹಳಿ ತಪ್ಪದಂತೆ ಕೊಡವರು ಎಚ್ಚರ ವಹಿಸಬೇಕೆಂದು ನಾಚಪ್ಪ ಈ ಸಂದರ್ಭ ಹೇಳಿದರು. ಮಾನವ ಸರಪಳಿ ನಿರ್ಮಿಸಿ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.

ಕಾರ್ಯಕ್ರಮದಲ್ಲಿ ನಾಪಂಡ ರಮ್ಯ ಚಂಗಪ್ಪ, ಪಾಸುರ ರಜಿನಿ, ನಾಪಂಡ ಶೈಲಾ, ಮೇದೂರ ಪ್ರತೀಕ, ನಾಗಂಡ ರೇಣು, ಕುಟ್ಟಂಡ ಗೊಂಬೆ, ಶ್ರೀಮತಿ ತಂಬುಕುತ್ತೀರ ಜಾಜಿ, ಶ್ರೀಮತಿ ತಂಬುಕುತ್ತೀರ ರೇಖಾ, ಶ್ರೀಮತಿ ಉದ್ದಿನಾಡಂಡ ಪೊನ್ನಮ್ಮ, ಮಂಡೀರ ನೀಲಮ್ಮ, ಬಾಳೆಯಡ ಪೊನ್ನಮ್ಮ, ಮೇದೂರ ಕಂಠಿ, ಬಾಚಿನಾಡಂಡ ಗಿರಿ, ಹಂಚೇಟಿರ ಮನು, ಮುದ್ದಂಡ ಮಧು, ಮೇದೂರ ದೇವಯ್ಯ, ನಾಪಂಡ ಅರುಣಾ, ಕುಟ್ಟಂಡ ನಂದಾ, ನಾಪಂಡ ಶಿವಕುಮಾರ್, ಅಡ್ಡಂಡ ಚಿಯಣ್ಣ, ಕೊಚ್ಚೆರ ಪಳಂಗಪ್ಪ, ಮಂಡಿರ ಚಿಣ್ಣಪ್ಪ, ಮೇದೂರ ಮಾದಪ್ಪ, ಜಗ್ಗಾರಂಡ ದೇವಯ್ಯ, ತಂಬುಕುತ್ತಿರ ಸೋಮಯ್ಯ, ಉದ್ದಿನಾಡಂಡ ಪ್ರದೀಪ್, ಪಾಸೂರ ಅಯ್ಯಪ್ಪ, ಮುದ್ದಂಡ ಭೀಮಯ್ಯ, ಪಾಸೂರ ಚಂಗಪ್ಪ, ಬಾಚಿನಾಡಂಡ ಬಿದ್ದಪ್ಪ, ಮೊಟನಾಳೀರ ಸನ್ನಿ, ಕಿಬ್ರೆರ ಈರಪ್ಪ, ಮಂದೇಯAಡ ಭೀಮಯ್ಯ, ಚಾಮೇರ ಅಕ್ಷಿತ್, ನಾಗಂಡ ಪೂವಯ್ಯ, ಮಂದೆಯAಡ ರಜಿ ಬೊಳ್ಯಪ್ಪ, ಉದ್ದಿನಾಡಂಡ ಗಣೇಶ್, ಚೀಕಂಡ ನಂಜಪ್ಪ, ನಾಗಂಡ ಉತ್ತಯ್ಯ, ನಾಗಂಡ ಪೆಮ್ಮಯ್ಯ, ಕುಟ್ಟಂಡ ತಿಮ್ಮಯ್ಯ, ಕುಟ್ಟಂಡ ಪೂವಣ್ಣ, ಚಾಮೇರ ಸುಬ್ಬಯ್ಯ, ಪರುವಂಡ ಗಣಪತಿ, ನಾಗಂಡ ದಿಲೀಪ್, ಕನ್ನಿಕಂಡ ದರ್ಶನ್, ತಂಬುಕುತ್ತೀರ ಕಾರ್ಯಪ್ಪ, ಬಾಚಿನಾಡಂಡ ಕವನ್, ಮರುವಂಡ ಪೊನ್ನಪ್ಪ, ಗೌಡಂಡ ರವಿ, ಒಡಿಯಂಡ ಬೋಪಯ್ಯ, ಒಡಿಯಂಡ ಶಿವಯ್ಯ, ನಾಪಂಡ ಪಟ್ಟು, ಅಪ್ಪುಡ ದಿನೇಶ್, ಕನ್ನಿಕಂಡ ಕಿರಣ್, ಚೀಕಂಡ ಗಣಪತಿ, ಪರುವಂಡ ಬಿದ್ದಪ್ಪ, ಚೆಟ್ಟಿರ ಬೊಳ್ಯಪ್ಪ, ಕನ್ನಿಕಂಡ ಮನು, ಬಾಚಿನಾಡಂಡ ಕುಶಾಲಪ್ಪ, ಉಡುವೆರ ರಮೇಶ್, ನಾಪಂಡ ಸುಬ್ಬಯ್ಯ, ನಾಗಂಡ ಮಧು, ಮೊಣ್ಣಂಡ ಸುಬ್ಬಯ್ಯ, ಮುದ್ದಂಡ ಗಪ್ಪು, ಕನ್ನಿಕಂಡ ಕಾರ್ಯಪ್ಪ, ಮೊಣ್ಣಂಡ ನಾಣಯ್ಯ, ಅಯ್ಯಕುಟ್ಟೀರ ಗಣಪತಿ, ಮೊರ್ಕಂಡ ನಾಣಿಯಪ್ಪ, ಮೊರ್ಕಂಡ ಅರುಣಾ, ಮುಕ್ಕಾಟಿರ ಮುದ್ದಪ್ಪ, ಬಾಚಳ್ಳಿರ ಕುಟ್ಟಪ್ಪ, ಮೊರ್ಕಂಡ ಪೂಣಚ್ಚ, ಮುಕ್ಕಾಟಿರ ಕುಶಾಲಪ್ಪ, ಮೊರ್ಕಂಡ ಸುಬ್ರು, ಹಂಚೆಟ್ಟಿರ ನಯನ, ಬಾಚಿನಾಡಂಡ ದಿನೇಶ್, ಕೂಪದಿರ ಸಾಬು, ತಂಬುಕುತ್ತೀರ ಸುಬ್ಬಯ್ಯ, ಬಾಚಳಿರ ಬಿದ್ದಪ್ಪ, ದೊಡ್ಡೆರ ಪೊನ್ನಪ್ಪ, ಕುಟ್ಟಂಡ ದಾದು, ಗೌಡಂಡ ಬಿದ್ದಪ್ಪ, ಕುಟ್ಟಂಡ ಕುಟ್ಟಪ್ಪ, ಮೆದೂರ ಸುರೇಶ್, ಮೇದುರ ಕಾರ್ಯಪ್ಪ, ಮೇದುರ ಪೂವಯ್ಯ, ಮೇದುರ ತಿಮ್ಮಯ್ಯ ಒಡಿಯಂಡ ಕಾರ್ಯಪ್ಪ ಭಾಗವಹಿಸಿದ್ದರು.

ಮುಂದಿನ ೯ನೇ ಮಾನವ ಸರಪಳಿ ಕಾರ್ಯಕ್ರಮ ಆ.೧೦ ರಂದು ಪೂರ್ವಾಹ್ನ ೧೦.೩೦ ಗಂಟೆಗೆ ಸುಂಟಿಕೊಪ್ಪದಲ್ಲಿ ನಡೆಯಲಿದೆ.