ಸಿದ್ದಾಪುರ, ಜು. ೧೯: ಸ್ಮಶಾನ ಹೋರಾಟ ಸಮಿತಿಯ ಹೋರಾಟದ ಫಲವಾಗಿ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಹಿಂದೂ ಸ್ಮಶಾನಕ್ಕಾಗಿ ಜಾಗವನ್ನು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದು ಸ್ಮಶಾನ ಹೋರಾಟ ಸಮಿತಿಯ ಅಧ್ಯಕ್ಷ ಪಿ.ಆರ್. ಭರತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನೆಲ್ಲಿಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು ೮,೦೦೦ ಮಂದಿ ಬಡವರ್ಗದ ಹಿಂದೂ ಜನಾಂಗದವರು ವಾಸ ಮಾಡುತ್ತಿದ್ದು, ಇವರುಗಳಿಗೆ ಹಿಂದೂ ರುದ್ರಭೂಮಿ ಇಲ್ಲದೆ ಸಮಸ್ಯೆ ಹಿನ್ನೆಲೆಯಲ್ಲಿ ಸ್ಮಶಾನ ಹೋರಾಟ ಸಮಿತಿಯು ಸ್ಮಶಾನಕ್ಕೆ ಜಾಗ ಒದಗಿಸಿಕೊಡುವಂತೆ ನಿರಂತರವಾಗಿ ಹಲವಾರು ಹೋರಾಟಗಳನ್ನು ಗ್ರಾಮ ಪಂಚಾಯಿತಿ ಎದುರುಗಡೆ ಮಾಡಿದ ಹಿನ್ನೆಲೆ ಇದೀಗ ಜಿಲ್ಲಾಡಳಿತ ಹಾಗೂ ಕುಶಾಲನಗರ ತಾಲೂಕು ಆಡಳಿತ ಸ್ಪಂದಿಸಿ ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದಕಾಡು ಭಾಗದಲ್ಲಿ ಹಿಂದೂ ಸ್ಮಶಾನಕ್ಕಾಗಿ ಒಂದು ಎಕರೆ ಜಾಗವನ್ನು ಗುರುತಿಸಿದೆ.
ಈ ಜಾಗಕ್ಕೆ ಸಂಬAಧಿಸಿದ ದಾಖಲಾತಿಗಳನ್ನು ಕೂಡಲೇ ಕುಶಾಲನಗರ
ತಾಲೂಕು ಆಡಳಿತ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಬೇಕೆಂದು ಭರತ್ ಒತ್ತಾಯಿಸಿದರು. ಸ್ಮಶಾನ ಹೋರಾಟದ ಸಮಿತಿಯ ಹೋರಾಟದ ಫಲವಾಗಿ ಜಾಗವು ಲಭಿಸಿದ್ದು, ಜಿಲ್ಲಾಡಳಿತದ ಅಧಿಕಾರಿಗಳ ಹಾಗೂ ಕುಶಾಲನಗರ ತಾಲೂಕು ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸ್ಪಂದನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದೂ ಸ್ಮಶಾನ ಜಾಗಕ್ಕಾಗಿ ಹೋರಾಟಗಳು ಮಾಡುತ್ತಿದ್ದರು ಕೂಡ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯು ಸೂಕ್ತ ರೀತಿಯಲ್ಲಿ ಸ್ಪಂದಿಸದೆ ನಿರ್ಲಕ್ಷö್ಯ ವಹಿಸಿರುವುದು ಖಂಡನೀಯ ಎಂದು ಭರತ್ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಆಡಳಿತ ಜಾಗದ ಪಹಣಿ ಪತ್ರವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಬೇಕೆಂದು ಭರತ್ ಒತ್ತಾಯಿಸಿದರು.
ಗೋಷ್ಠಿಯಲ್ಲಿ ನೆಲ್ಲಿಹುದಿಕೇರಿ ಸ್ಮಶಾನ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಸಂಚಾಲಕ ಸುರೇಶ್. ಟಿ.ಟಿ. ಉದಯಕುಮಾರ್. ಲಕ್ಷö್ಮಣ, ಪ್ರಕಾಶ, ಪ್ರವೀಣ, ಸಂದೀಪ್, ಮುಕುಂದ, ಕಿಶೋರ್ ಇನ್ನಿತರರು ಹಾಜರಿದ್ದರು.