ಶನಿವಾರಸಂತೆ, ಜು. ೧೯: ಸಾರ್ವಜನಿಕರ ಸಮಸ್ಯೆ ಆಲಿಸಲು ಪೊಲೀಸ್ ಸಿಬ್ಬಂದಿಯೇ ಮನೆ-ಮನೆ ಬಾಗಿಲಿಗೆ ಬರುವಂತಹ ವಿನೂತನ ಪರಿಕಲ್ಪನೆಯಾದ “ಮನೆ-ಮನೆಗೆ ಪೊಲೀಸ್ ಸುಧಾರಿತ ನಗರಗಸ್ತು’’ ಕಾರ್ಯಕ್ರಮಕ್ಕೆ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃತ್ತ ನಿರೀಕ್ಷಕ ಜಿ. ಕೃಷ್ಣರಾಜ್ ಅವರ ಮುಂದಾಳತ್ವದಲ್ಲಿ ಚಾಲನೆ ನೀಡಲಾಯಿತು.
ಗ್ರಾಮ ಪಂಚಾಯಿತಿಯ ವಾರ್ಡ್ಗಳಿಗೆ ತೆರಳಿದ ವೃತ್ತ ನಿರೀಕ್ಷಕ ಜಿ. ಕೃಷ್ಣರಾಜ್ ಹಾಗೂ ಸಿಬ್ಬಂದಿ ಜನರಲ್ಲಿ ಜಾಗೃತಿ ಮೂಡಿಸಿದರು. ವಾರ್ಡ್ ೧ ಮತ್ತು ೨ ರ ರಸ್ತೆಗಳ ಬದಿಯಲ್ಲಿರುವ ಮನೆ-ಮನೆಗಳಿಗೆ ತೆರಳಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೈಬರ್ ಅಪರಾಧ, ಮಾದಕ ವಸ್ತು, ಪೋಕ್ಸೋ ಕಾಯ್ದೆ, ಮನೆಗಳ್ಳತನ, ಸರಗಳ್ಳತನ, ರಸ್ತೆ ಸಂಚಾರ ನಿಯಮ, ವಲಸೆ ಕೂಲಿ ಕಾರ್ಮಿಕರ ಮಾಹಿತಿ ಇತ್ಯಾದಿ ವಾರ್ಡ್ ೧ ಮತ್ತು ೨ ರ ರಸ್ತೆಗಳ ಬದಿಯಲ್ಲಿರುವ ಮನೆ-ಮನೆಗಳಿಗೆ ತೆರಳಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೈಬರ್ ಅಪರಾಧ, ಮಾದಕ ವಸ್ತು, ಪೋಕ್ಸೋ ಕಾಯ್ದೆ, ಮನೆಗಳ್ಳತನ, ಸರಗಳ್ಳತನ, ರಸ್ತೆ ಸಂಚಾರ ನಿಯಮ, ವಲಸೆ ಕೂಲಿ ಕಾರ್ಮಿಕರ ಮಾಹಿತಿ ಇತ್ಯಾದಿ ವಿಷಯಗಳ ಬಗ್ಗೆ ಅರಿವು ಮೂಡಿಸಿದರು. ಮನೆಗಳಲ್ಲಿ ಇರುವ ಸದಸ್ಯರ ಹೆಸರು ಹಾಗೂ ಮೊಬೈಲ್ ನಂಬರ್ ಪಡೆದುಕೊಳ್ಳಲಾಯಿತು. ವೃತ್ತನಿರೀಕ್ಷಕ ಜಿ. ಕೃಷ್ಣರಾಜ್, ಪಿ.ಎಸ್.ಐ., ಹೆಚ್.ವೈ. ಚಂದ್ರ, ಬೀಟ್ ವ್ಯಾಪ್ತಿಯ ಸದಸ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.