ಭಾಗಮಂಡಲ, ಜು. ೧೯: ಗಜಾನನ ಯುವಕ ಸಂಘವು ಸಮಾಜಕ್ಕೆ ಉಪಯೋಗವಾಗು ವಂತಹ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹ್ಯಾರಿಸ್ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾಗಮಂಡಲದ ಗಜಾನನ ಯುವಕ ಸಂಘದ ವತಿಯಿಂದ ಭಾಗಮಂಡಲ-ಚೆಟ್ಟಿಮಾನಿ ಭಾಗಕ್ಕೆ ಉಪಯೋಗವಾಗುವಂತಹ ಆ್ಯಂಬ್ಯುಲೆನ್ಸ್ ಸೇವೆಗೆ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಜಾನನ ಯುವಕ ಸಂಘವು ನಾಗರಿಕರ ಬೇಡಿಕೆಯನ್ನು ಈಡೇರಿಸಿದೆ. ಸಂಘವು ಇನ್ನಷ್ಟು ಉತ್ತಮ ಕೆಲಸವನ್ನು ಮಾಡು ವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮವನ್ನು ರಿಬ್ಬನ್ ಕತ್ತರಿಸುವ ಮುಖಾಂತರ ಉದ್ಘಾಟಿಸಲಾಯಿತು. ಗಜಾನನ ಯುವಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಮತ್ತು ಚೆಟ್ಟಿಮಾನಿ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಭಗಂಡೇಶ್ವರ ಮತ್ತು ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಚೆಟ್ಟಿಮಾನಿಯಿಂದ ಭಾಗಮಂಡಲದವರೆಗೆ ವಾಹನ ಜಾಥಾ ನಡೆಸಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಯಿತು.