ಮಡಿಕೇರಿ, ಜು. ೧೯ : ಜಿಲ್ಲೆಯಲ್ಲಿ ಮುಂಗಾರು ಮಳೆ ಮುಂದುವರಿದಿದ್ದು ಶನಿವಾರದಿಂದ ಪುಷ್ಯ ಮಳೆ ಆರಂಭಗೊAಡಿದೆ. ದಿನವಿಡೀ ನಿರಂತರವಾಗಿ ಮಳೆ ಸುರಿಯುತ್ತಿರು ವುದರೊಂದಿಗೆ ಜನತೆಗೆ ಮೈಕೊರೆಯುವ ಚಳಿಯೂ ಅನುಭವವಾಗುತ್ತಿದೆ. ಮಳೆಯ ತೀವ್ರತೆ ಹೆಚ್ಚಿಲ್ಲವಾದರೂ ದಿನವಿಡೀ ಜಿಟಪಟ ಮಳೆ ಸುರಿಯುತ್ತಿರುವುದು ಜನತೆಗೆ ಒಂದು ರೀತಿಯಲ್ಲಿ ಕಿರಿಕಿರಿಯಾಗುತ್ತಿ ರುವಂತಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ೦.೫೦ ಇಂಚು ಸರಾಸರಿ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೧.೨೫, ವೀರಾಜಪೇಟೆ ೦.೪೫, ಪೊನ್ನಂಪೇಟೆ ೦.೩೪, ಸೋಮವಾರಪೇಟೆ ೦.೩೦, ಕುಶಾಲನಗರ ತಾಲೂಕಿನಲ್ಲಿ ೦.೧೨ ಪ್ರಮಾಣದಷ್ಟು ಮಳೆಯಾಗಿದೆ.