ಜಿಲ್ಲೆಯ ನೆರೆಯ ಕೇರಳ ರಾಜ್ಯದ ವಯನಾಡಿನ ಜಿಐ(ಉeogಡಿಚಿಠಿhiಛಿಚಿಟ iಜeಟಿಣiಜಿiಛಿಚಿಣioಟಿ)ನಲ್ಲಿ ಪಟ್ಟಿ ಮಾಡಲಾದ ರೋಬಸ್ಟಾ ಕಾಫಿಯನ್ನು ಉತ್ತೇಜಿಸಲು ನಡೆಯುತ್ತಿರುವ ಪ್ರಯತ್ನದ ಅಂಗವಾಗಿ ಕೇಂದ್ರ ಸರ್ಕಾರದ ಒಂದು ಜಿಲ್ಲೆ-ಒಂದು ಉತ್ಪನ್ನ (ಔಆಔP) ಕಾರ್ಯಕ್ರಮದಲ್ಲಿ ವಯನಾಡಿನ ರೋಬಸ್ಟಾ ಕಾಫಿಯನ್ನು ಸೇರ್ಪಡೆಗೊಳಿಸಲಾಗಿದೆ.

ಈ ಬೆಳವಣಿಗೆಯನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊAಡಿರುವ ವಯನಾಡಿನ ಸಂಸದೆ ಮತ್ತು ಎಐಸಿಸಿಯ ನಾಯಕಿ ಪ್ರಿಯಾಂಕಾ ಗಾಂಧಿ, ವಯನಾಡಿಗೆ ಇದು ಹೆಮ್ಮೆಯ ಕ್ಷಣ ಎಂದು ಟ್ವೀಟ್ ಮಾಡಿದ್ದಾರೆ. ಇದು ಕಾಫಿಗೆ ಕೇರಳ ರಾಜ್ಯದ ಜಿಲ್ಲೆಯೊಂದರ ಉತ್ಪನ್ನಕ್ಕೆ ಮೊದಲ ಮನ್ನಣೆಯಾಗಿದೆ.

ವಯನಾಡಿನ ಕಾಫಿಗೆ ಹೆಚ್ಚಿನ ಅಂತರರಾಷ್ಟಿçÃಯ ಗಮನ ಸೆಳೆಯುವ ಗುರಿಯನ್ನು ಹೊಂದಿರುವ ಕಾರ್ಬನ್ ನ್ಯೂಟ್ರಲ್ ಕಾಫಿ ಪಾರ್ಕ್ ಮತ್ತು ಕ್ಲೆöÊಮೇಟ್ ಸ್ಮಾರ್ಟ್ ಕಾಫಿ ಯೋಜನೆಯಂತಹ ನಿರಂತರ ಪ್ರಯತ್ನಗಳ ಸರಣಿಗೆ ಈ ಹೊಸ ಮನ್ನಣೆ ಪೂರಕವಾಗಲಿದೆ. ವಯನಾಡಿನಲ್ಲಿ ೫೦,೦೦೦ಕ್ಕೂ ಹೆಚ್ಚು ರೈತರು ಕಾಫಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಸಣ್ಣ ಪ್ರಮಾಣದ ರೈತರು ಮತ್ತು ಬುಡಕಟ್ಟು ಸಮುದಾಯಗಳ ಜನರು, ಅವರು ಉತ್ತಮ ಗುಣಮಟ್ಟದ ಹೊರತಾಗಿಯೂ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಕಷ್ಟು ಕೌಶಲ್ಯಗಳನ್ನು ಹೊಂದಿರುವುದಿಲ್ಲ. ಆದ್ದರಿಂದ ಈಗ ನಡೆಯುತ್ತಿರುವ ಪ್ರಯತ್ನಗಳು ರೈತರಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತವೆ. ವಯನಾಡಿನಲ್ಲಿ ವಾರ್ಷಿಕವಾಗಿ ೬೦,೦೦೦ ಟನ್‌ಗಳಿಗೂ ಹೆಚ್ಚು ರೋಬಸ್ಟಾ ಕಾಫಿಯನ್ನು ಉತ್ಪಾದಿಸಲಾಗುತ್ತದೆ.

ಒಡಿಒಪಿಯಲ್ಲಿ ವಿಶೇಷ ಉಲ್ಲೇಖವು ವಯನಾಡ್ ಕಾಫಿಯನ್ನು ಮಾರಾಟ ಮಾಡಲು ವ್ಯಾಪಕ ಅವಕಾಶವನ್ನು ನೀಡುವುದಲ್ಲದೆ, ವಯನಾಡ್ ಕಾಫಿಯ ಉನ್ನತ ಗುಣಮಟ್ಟವನ್ನು ಸಮರ್ಥಿಸುತ್ತದೆ ಎಂದು ವಯನಾಡ್‌ನ ಕೇರಳ ಕೈಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಅಶ್ವಿನ್ ಪಿ. ಕುಮಾರ್ ತಿಳಿಸಿದ್ದಾರೆ. ಒಡಿಒಪಿ ಆಯ್ಕೆಯು ಬಹಳ ಸೂಕ್ಷö್ಮವಾದ ಪ್ರಕ್ರಿಯೆಯನ್ನು ಒಳಗೊಂಡಿತ್ತು.

ಅರೇಬಿಕಾ ವಿಧಕ್ಕೆ ಹೋಲಿಸಿದರೆ ರೋಬಸ್ಟಾ ಕಾಫಿಯಲ್ಲಿ ಕೆಫೀನ್ ಅಂಶ ಸಮೃದ್ಧವಾಗಿದೆ. ಕಳೆದ ವರ್ಷ ಡೆನ್ಮಾರ್ಕ್ನ ಕೋಪನ್‌ಹೇಗನ್‌ನಲ್ಲಿ ನಡೆದ ವಿಶ್ವ ಕಾಫಿ ಸಮ್ಮೇಳನದಲ್ಲಿ ಮೊದಲ ಬಾರಿಗೆ ವೈನಾಡ್ ಕಾಫಿಯನ್ನು ಪರಿಚಯಿಸಿ ಪ್ರದರ್ಶಿಸಿದಾಗ ಉತ್ತಮ ಪ್ರತಿಕ್ರಿಯೆ ದೊರೆಯಿತು. ಎರಡು ವರ್ಷಗಳ ಹಿಂದೆ ನೆದರ್‌ಲ್ಯಾಂಡ್‌ಗೆ ಕೊಂಡೊಯ್ದ ವಯನಾಡ್ ಕಾಫಿಯ ಮಾದರಿಗಳು ಕಪ್‌ಗೆ ೮೩ ಮತ್ತು ೮೬ ಅಂಕಗಳನ್ನು ಪಡೆದಿದ್ದವು. ಸಮ್ಮೇಳನಗಳಲ್ಲಿ ೮೦ಕ್ಕೂ ಹೆಚ್ಚು ಅಂಕಗಳನ್ನು ಗಳಿಸುವ ಕಾಫಿಗಳನ್ನು ‘ವಿಶೇಷ ಕಾಫಿ' ಎಂದು ಪರಿಗಣಿಸಲಾಗುತ್ತದೆ. ಜಿಐ ಪಟ್ಟಿ ಮಾಡಲಾದ ವಯನಾಡ್ ರೋಬಸ್ಟಾ ಕೂಡ ವಿಶೇಷ ಸುವಾಸನೆಯನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ.

ಕರ್ನಾಟಕದಂತಹ ನೆರೆಯ ರಾಜ್ಯಗಳು ಉತ್ತಮವಾಗಿ ಸ್ಥಾಪಿತವಾದ ಬೆಳೆಗಾರರನ್ನು ಹೊಂದಿರುವುದರಿAದ ವಯನಾಡ್‌ನ ಸಣ್ಣ ಪ್ರಮಾಣದ ಕಾಫಿ ಬೆಳೆಗಾರರಿಗೆ ಅಂತಹ ಸಹಾಯ ಹಸ್ತಗಳು ಬಹಳ ಅವಶ್ಯಕವೆಂದು ಉದ್ಯಮ ಮೂಲಗಳು ತಿಳಿಸಿವೆ. ಹವಾಮಾನ ವೈಪರೀತ್ಯದಂತಹ ಅಂಶಗಳಿAದ ಅರೇಬಿಕಾ ಕಾಫಿ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಪ್ರತಿಕೂಲ ಹವಾಮಾನಕ್ಕೆ ತಾಳಿಕೆ ಶಕ್ತಿಉಳ್ಳ ರೋಬಸ್ಟಾ ಕಾಫಿಯ ಜಾಗತಿಕ ಬೇಡಿಕೆ ಹೆಚ್ಚುತ್ತಿರುವ ಸಮಯದಲ್ಲಿ ಈ ಹೊಸ ಮನ್ನಣೆ ದೊರೆತಿದೆ ಎಂದು ಕ್ಲೆöÊಮೇಟ್ ಸ್ಮಾರ್ಟ್ ಕಾಫಿ ಯೋಜನೆಯ ಯೋಜನಾ ಮುಖ್ಯಸ್ಥ ಜಿ. ಬಾಲಗೋಪಾಲ್ ಹೇಳುತ್ತಾರೆ.

ಈಗಾಗಲೇ ಕರ್ನಾಟಕದ ಕೂರ್ಗ್ ಅರೇಬಿಕಾ ಕಾಫಿ, ಚಿಕ್ಕಮಗಳೂರು ಅರೇಬಿಕಾ ಕಾಫಿ, ಅರಕು ವ್ಯಾಲಿ ಅರೇಬಿಕಾ ಕಾಫಿ ಮತ್ತು ಬಾಬಾಬುಡನ್‌ಗಿರಿಸ್ ಅರೇಬಿಕಾ ಕಾಫಿಗೆ ಜಿಐ ಪಟ್ಟಿ ಮಾನ್ಯತೆ ದೊರೆತಿದೆ. ಅಲ್ಲದೆ ಒಡಿಒಪಿ ಯೋಜನೆಯಡಿ ಕೊಡಗು ಜಿಲ್ಲೆಯ ಕಾಫಿಯನ್ನು ಆಯ್ಕೆ ಮಾಡಿಕೊಂಡಿರುವುದರಿAದ ನೆರೆಯ ವೈನಾಡ್ ಜಿಲ್ಲೆಯನ್ನೂ ಕಾಫಿ ಬೆಳೆ ಉತ್ತೇಜನಕ್ಕೆ ಆಯ್ಕೆ ಮಾಡಿಕೊಂಡಿರುವುದರಿAದ ಹೆಚ್ಚಿನ ಪ್ರಚಾರ ಮತ್ತು ಮಾರಾಟಕ್ಕೆ ಪೂರಕವಾಗಲಿದೆ. ಇದರಿಂದ ದೇಶದ ಆಂತರಿಕ ಬಳಕೆ ಮತ್ತು ಕಾಫಿ ರಫ್ತಿಗೂ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ (ಕೆಜಿಎಫ್) ಮಾಜಿ ಅದ್ಯಕ್ಷ ಆರ್. ಮೋಹನ್ ಸಂತಸ ವ್ಯಕ್ತಪಡಿಸಿದ್ದಾರೆ.

- ಕೋವರ್‌ಕೊಲ್ಲಿ ಇಂದ್ರೇಶ್