ಮಡಿಕೇರಿ, ಜು. ೨೦: ಮಗುವೊಂದರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಹಾಗೂ ಮಗುವೊಂದನ್ನು ಕೊಲೆಗೈದ ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ತಾ. ೧೧ ರಂದು ಸುಮಾರು ೫ ವರ್ಷದ ಒಂದು ಹೆಣ್ಣು ಮಗು, ಮೈ ಕೈ ಗಾಯಗೊಂಡು ಬಿಳಿಗೆರೆ ಸಮೀಪ ಒಂಟಿಯಾಗಿ ನಿಂತಿತ್ತು. ತುರ್ತು ಸಹಾಯವಾಣಿ ೧೧೨ ರ ಮೂಲಕ ದೂರು ಸ್ವೀಕರಿಸಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಗುವನ್ನು ರಕ್ಷಿಸಿ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಮಡಿಕೇರಿಯ ಸರ್ಕಾರಿ ಮಡಿಲು ಕೇಂದ್ರಕ್ಕೆ ಸೇರಿಸಿದ್ದರು.

ಬಳಿಕ ತಾ. ೧೪ ರಂದು ಮಗುವಿನ ತಾಯಿ ಪಣಿಎರವರ ಭಾಗ್ಯ ಎಂಬವರನ್ನು ಪತ್ತೆ ಮಾಡಿ ಮಗುವನ್ನು ಭೇಟಿ ಮಾಡಿಸಿದ್ದು, ಮಗುವಿನ ಮೂಗು, ಹಣೆ, ಕೆನ್ನೆಗಳಿಗೆ, ೨ ಕಾಲಿಗೆ, ೨ ಕೈಗಳಿಗೆ ಸುಟ್ಟ ಗಾಯದ ಕಲೆಗಳಿದ್ದವು. ಅಲ್ಲದೆ ಮೈ ಕೈ ಮೇಲೆ ಅಲ್ಲಲ್ಲಿ ಗಾಯಗಳಾಗಿದ್ದವು ಈ ಬಗ್ಗೆ ಮಗುವನ್ನು ವಿಚಾರಣೆ ಮಾಡಿದಾಗ ನನ್ನ ಅಪ್ಪ ರವಿ ಬೆಂಕಿಯಿAದ ಸುಟ್ಟ ಹಾಗೂ ದೊಣ್ಣೆಯಿಂದ ಹೊಡೆದು ನಿನ್ನನ್ನು ಸಾಯಿಸುತ್ತೇನೆ ಎಂದು ಹೇಳಿ ನೀರಿನ ತೋಡಿಗೆ ತಳ್ಳಿಹೋಗಿದ್ದು, ಅಲ್ಲಿಂದ ಎದ್ದು ರಸ್ತೆಯಲ್ಲಿ ನಿಂತಿದ್ದಾಗ ಪೊಲೀಸರು ತನ್ನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ತಿಳಿಸಿದ್ದು, ಮಗುವಿನ ಮೈ, ಕೈ ಮೇಲೆ ಬೆಂಕಿಯಿAದ ಸುಟ್ಟು ಹಾಗೂ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುವ ಪಂಜರಿ ಎರವರ ರವಿ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಪಣಿ ಎರವರ ಭಾಗ್ಯ ಅವರಿಂದ ದೂರು ಸ್ವೀಕರಿಸಿದ್ದು, ತಾ. ೧೮ ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಕಲಂ: ೧೧೫ (೨) ೧೧೮(೧) ೧೦೯ ಬಿಎನ್‌ಎಸ್ ಕಾಯ್ದೆ ೨೦೨೩ ಮತ್ತು ೭೫ ಜೆ.ಜೆ. ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂದಿದ್ದರು.

ಇಂದೊAದು ಪ್ರಕರಣ ಮಾತ್ರವಲ್ಲದೆ ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ರುದ್ರಗುಪ್ಪೆ ಗ್ರಾಮ ನಿವಾಸಿಯಾದ ಕಳ್ಳಿಯಪಂಡ ಸೋಮಯ್ಯ ಎಂಬವರ ಲೈನ್‌ಮನೆಯಲ್ಲಿ ವಾಸವಿರುವ ಪಣಿ ಎರವರ ಭಾಗ್ಯ ಅವರ ಎರಡನೇ ಗಂಡನಾದ ಪಂಜರಿ ಎರವರ ರವಿ, ಮಂಚಳ್ಳಿ ೪ಐದÀನೇ ಪುಟಕ್ಕೆ

(ಮೊದಲ ಪುಟದಿಂದ) ಗ್ರಾಮದ ಲೈನ್‌ಮನೆಯಲ್ಲಿ ವಾಸಿವಿದ್ದಾಗ ತನ್ನ ಮೊದಲನೇ ಗಂಡನ ಹೆಣ್ಣು ಮಗು ಗೌರಿಯನ್ನು ಸುಮಾರು ೧ ತಿಂಗಳ ಹಿಂದೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಬಗ್ಗೆಯೂ ದೂರು ಸ್ವೀಕರಿಸಿದ ಕುಟ್ಟ ಪೊಲೀಸರು ಕಲಂ: ೧೦೩(೧) ೨೩೮(ಎ) ಬಿಎನ್‌ಎಸ್ ಕಾಯ್ದೆ - ೨೦೨೩ ಅಡಿಯಲ್ಲಿ ಪ್ರಕರಣ ದ ದಾಖಲಿಸಿ ತನಿಖೆ ಕೈಗೊಂಡು ತಾ. ೧೯ ರಂದು ದೇವರಪುರ ತಿತಿಮತಿ ಗ್ರಾಮ ನಿವಾಸಿ ಪಂಜರಿ ಎರವರ ರವಿ (೪೨)ಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ಆರೋಪಿ ಪತ್ತೆಗಾಗಿ ವೀರಾಜಪೇಟೆ ಡಿವೈಎಸ್‌ಪಿ ಮಹೇಶ್‌ಕುಮಾರ್, ಮಡಿಕೇರಿ ಡಿವೈಎಸ್‌ಪಿ ಪಿ.ಎ ಸೂರಜ್ ಕುಟ್ಟ ಸಿಪಿಐ ಶಿವರುದ್ರಪ್ಪ ಬಿ.ಎಸ್., ಮಡಿಕೇರಿ ಮತ್ತು ವೀರಾಜಪೇಟೆ ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.

ಆರೋಪಿಯನ್ನು ಪತ್ತೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಎಸ್‌ಪಿ ಕೆ. ರಾಮರಾಜನ್, ಎಎಸ್‌ಪಿ ದಿನೇಶ್ ಕುಮಾರ್ ಬಿ.ಪಿ. ಶ್ಲಾಘಿಸಿದ್ದಾರೆ.