ವೀರಾಜಪೇಟೆ, ಜು. ೨೦: ಇಲಾಖೆಯ ಸಿಬ್ಬಂದಿಗಳ ಆರೋಗ್ಯ ಮತ್ತು ಉನ್ನತಿಗೆ ಸೆಸ್ಕ್ ಕಚೇರಿಯಲ್ಲಿ ಆಷಾಢ ಚಾಮುಂಡೇಶ್ವರಿ ಪೂಜೆ ನಡೆಸಲಾಯಿತು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಾರ್ಯ ಮತ್ತು ಪಾಲನೆ ವೀರಾಜಪೇಟೆ ಉಪವಿಭಾಗದ ಸಿಬ್ಬಂದಿಗಳು ಮತ್ತು ಅನುಮತಿ ಪಡೆದ ಗುತ್ತಿಗೆದಾರರ ಸಂಘ ವೀರಾಜಪೇಟೆ ತಾಲೂಕು, ಸಂಯುಕ್ತ ಆಶ್ರಯದಲ್ಲಿ ನಗರದ ಮೂರ್ನಾಡು ರಸ್ತೆಯ ಶಾಖಾ ಕಚೇರಿಯಲ್ಲಿ ೨ನೇ ವರ್ಷದ ಶ್ರೀ ಚಾಮುಂಡೇಶ್ವರಿ ಪೂಜೆ ಮತ್ತು ಇಲಾಖೆಯ ಸಿಬ್ಬಂದಿಗಳಿಗೆ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.

ಕಚೇರಿಯಲ್ಲಿ ಶ್ರೀ ಚಾಮುಂಡೇಶ್ವರಿ ಪೂಜೆಯನ್ನು ನಗರದ ಸೀತಾರಾಮ ಭಟ್ ಅವರು ನೆರವೇರಿಸಿದರು. ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳು ಗುತ್ತಿಗೆದಾರರ ಆರೋಗ್ಯಕ್ಕೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಪ್ರಸಾದ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ ವೀರಾಜಪೇಟೆ ಉಪ ವಿಭಾಗ ವ್ಯಾಪ್ತಿಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ಹಾಗೂ ನೌಕರರು, ವೀರಾಜಪೇಟೆ ತಾಲೂಕು ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ನಂತರ ಡಾ. ಅಗರ್‌ವಾಲ್ಸ್ ನೇತ್ರ ಚಿಕಿತ್ಸಾಲಯ, ವೀರಾಜಪೇಟೆ ಶಾಖೆ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.