ಸುಂಟಿಕೊಪ್ಪ, ಜು. ೨೦: ಆಡಿ ಕಾರು ಮತ್ತು ಟೆಂಪೋ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಭಾನುವಾರ ಮಧ್ಯಾಹ್ನ ಸಮೀಪದ ಕೊಡಗರಹಳ್ಳಿಯ ಮಾರುತಿ ನಗರ ರಾಷ್ಟಿçÃಯ ಹೆದ್ದಾರಿಯಲ್ಲಿ ನಡೆದಿದೆ.

ಮಡಿಕೇರಿ ಕಡೆಯಿಂದ ಬರುತ್ತಿದ್ದ ಆಡಿ ಕಾರು ಮತ್ತು ಕುಶಾಲನಗರ ಕಡೆಯಿಂದ ಬರುತ್ತಿದ್ದ ಟೆಂಪೋ ನಡುವೆ ಅವಘಡ ಸಂಭವಿಸಿದೆ. ಆಡಿ ಕಾರನ್ನು ತಪ್ಪಿಸಲು ಹೋಗಿ ಟೆಂಪೋ ಮಗುಚಿಕೊಂಡಿದೆ. ಘಟನೆಯಲ್ಲಿ ಎರಡು ವಾಹನದಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.