ನಾಪೋಕ್ಲು, ಜು. ೨೦: ಯುವಕನೋರ್ವ ಚಾಲೆಂಜ್ ಮಾಡಿ ಸುಮಾರು ೩೫ ಅಡಿ ಎತ್ತರದ ಸೇತುವೆಯಿಂದ ಹೊಳೆಗೆ ಹಾರಿದ ಘಟನೆ ಕಕ್ಕಬ್ಬೆಯಲ್ಲಿ ಜರುಗಿದೆ.
ಇಲ್ಲಿಗೆ ಸಮೀಪದ ಕುಂಜಿಲ ಗ್ರಾಮದ ಕೆಲ ಯುವಕರ ನಡುವೆ ರೂ. ೫೦೦೦ ಶೂಸ್‌ಗೆ ಚಾಲೆಂಜ್ ನಡೆದು ಯುವಕನೋರ್ವ ಕಕ್ಕಬ್ಬೆ ಪೇಟೆಯಲ್ಲಿರುವ ಸೇತುವೆ ಮೇಲಿಂದ ಜಿಗಿಯುತ್ತಿರುವ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಯುವಕ ಜೀವದ ಹಂಗು ತೊರೆದು ಸೇತುವೆ ಮೇಲಿಂದ ಸುಮಾರು ೧೦ ಅಡಿ ಎತ್ತರದಲ್ಲಿ ಹರಿಯುತ್ತಿದ್ದ ಪ್ರವಾಹದ ನೀರಿಗೆ ಜಿಗಿದು ಈಜಿ ದಡ ಸೇರಿ ಚಾಲೆಂಜನ್ನು ಪೂರ್ಣಗೊಳಿಸಿದ್ದಾನೆ. ಇದೀಗ ಈ ಹುಚ್ಚು ಸಾಹಸದ ಬಗ್ಗೆ ಸಾರ್ವಜನಿಕರಲ್ಲಿ ಪರ, ವಿರೋಧಗಳ ಚರ್ಚೆಗಳು ನಡೆಯುತ್ತಿವೆ.
- ದುಗ್ಗಳ ಸದಾನಂದ